ಮಂಗಳೂರು: ಮಂಜೇಶ್ವರದಲ್ಲಿ ಆಯೋಜಿಸಲಾದ ಗ್ರ್ಯಾಂಡ್ ಕಾರ್ಯಕ್ರಮ ‘ಪುವೆಂಪು ನೆನಪು’ ಉದ್ಘಾಟನೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಆಗಮಿಸಿದ ಕರ್ನಾಟಕ ವಿಧಾನ ಪರಿಷತ್ ಮಾನ್ಯ ಸಭಾಪತಿ ಶ್ರೀ ಸಲೀಂ ಅಹಮದ್ ಅವರನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ)ಶ್ರೀ ಟಿ.ಎಂ. ಶಹೀದ್ ತೆಕ್ಕಿಲ್ ಅವರು ಹೂಗುಚ್ಛ ನೀಡಿ, ಶಾಲು ಹೊದಿಸಿ ವಿಶಿಷ್ಟವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಆರ್ ಲೋಬೋ, ಟಿ.ಕೆ ಸುದೀರ್ ಕುಮಾರ್, ಪಿ.ಎಂ ಮುಹಮ್ಮದ್ ಉಪಸ್ಥಿತರಿದ್ದರು.
