ಬ್ರೇಕ್ ವೈಫಲ್ಯದಿಂದ ಮಹೀಂದ್ರ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಪಲ್ಟಿಯಾಗಿದ ಘಟನೆ ಸಂಪಾಜೆ ಗ್ರಾಮದ ಕುಂಟಿಕಾನದಲ್ಲಿ ಆ.28ರಂದು ನಡೆದಿದೆ. ಕೆಲಸದಾಳುಗಳನ್ನು ಪಿಕಪ್ ವಾಹನದಲ್ಲಿ ಕರೆದೊಯ್ಯುವಾಗ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾಗಿದ್ದು, ಚಾಲಕ ಇಸ್ಮಾಯಿಲ್ ಸೇರಿದಂತೆ ಐವರು ಕೆಲಸದಾಳುಗಳಿಗೆ ಗಾಯವಾಗಿದ್ದು, ಸ್ಥಳೀಯರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಘಟನೆಯಲ್ಲಿ ಪಿಕಪ್ ವಾಹನ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.