ಕಡಬ: ಸೆ-19 . ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕಡಬ ಬ್ಲಾಕ್ ಸಮಿತಿ ವತಿಯಿಂದ ಸೆಪ್ಟೆಂಬರ್ 5ರಂದು ಪಡಿತರ ಅಂಗಡಿಯಲ್ಲಿ ವಿತರಿಸುವ ಅಕ್ಕಿಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಸಮಪ್ರಮಾಣದಲ್ಲಿ ವಿತರಿಸಲು ಆಗ್ರಹಿಸಿ ಕಡಬ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರಾದ ಶಂಕರ್ ರವರಿಗೆ ಮನವಿ ನೀಡಲಾಗಿತ್ತು. ಮನವಿ ಸ್ವೀಕರಿಸಿದ ಶಂಕರ್‌ರವರು ಈ ಕುರಿತು ಮೇಲಾಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ, ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸಲ್ಪಡುವ ಅಕ್ಕಿಯಲ್ಲಿ ಸಂಪೂರ್ಣವಾಗಿ ಕುಚ್ಚಲಕ್ಕಿ ನೀಡಲಾಗುತ್ತಿತ್ತು. ಪ್ರಸ್ತುತ ತಿಂಗಳಿನಿಂದ ನೀಡಲಾಗುವ ಅಕ್ಕಿಯಲ್ಲಿ ಅರ್ಧದಷ್ಟು ಕುಚಲಕ್ಕಿ ಅರ್ಧದಷ್ಟು ಬೆಳ್ತಿಗೆ ನೀಡಲಾಗುತ್ತಿದೆ ಎಂದು ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಇವಾಗ ಎಸ್‌ಡಿಪಿಐಯ ಕಾರ್ಯವೈಖರಿಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.