ಸಂಘದ ಲೋಗೋ ಬಿಡುಗಡೆ,ಸಾಧಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭ ಅಕ್ಟೋಬರ್ 6 ರಂದು ಸುಳ್ಯದ ಸಂತೋಷ್ ಚಿತ್ರಮಂದಿರದ ಬಳಿ ಇರುವ ವೆನಿಸ್ಸಿಯಾ ಬಿಲ್ಡಿಂಗ್ ನಲ್ಲಿ ನಡೆಯಿತು.

ತೂಗು ಸೇತುವೆಯ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶರತ್ ತೊಡಿಕ್ಕಾನ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ವರ್ತಕ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಮುಖಂಡರುಗಳಾದ ಹರೀಶ್ ಕಂಜಿಪಿಲಿ,ಶಾಹುಲ್ ಹಮೀದ್ ಕುತ್ತಮಟ್ಟೆ, ಹಾಜಿ ಮುಸ್ತಫಾ ಜನತಾ, ಉಮ್ಮರ್ ಕೆ ಎಸ್,ಮಾತನಾಡಿ ಕಾರ್ಯಕ್ರಮಕ್ಕೆ ಶುಭಾರೈಸಿದರು.

ವೇದಿಕೆಯಲ್ಲಿ ಹಿರಿಯ ಉದ್ಯಮಿ ಹಾಜಿ ಅಬೂಬಕ್ಕರ್ ಬಿ ಎಂ ಎ, ಶರೀಫ್ ಕಂಠಿ,ಸುಳ್ಯ ಅಗ್ನಿ ಶಾಮಕ ಕಚೇರಿ ಮುಖ್ಯ ಅಧಿಕಾರಿ ಸೋಮನಾಥ,ಅಕ್ಷಯ ಚಾರಿಟೇಬಲ್ ಸಂಸ್ಥೆಯ ಸಂಚಾಲಕ ಅಬ್ದುಲ್ ಕರೀಂ ಕೆದಿಕ್ಕಾರ್, ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಆಂಟೋನಿ ಡಿಸೋಜ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯ ನಿರ್ವಾಹಕ ಇಕ್ಬಾಲ್ ಕನಕಮಜಲು, ಕಟ್ಟಡ ಮಾಲಕ ಅಬ್ದುಲ್ಲಾ ಜಾಲ್ಸೂರು,ಕಲಂದರ್ ಎಲಿಮಲೆ, ಉದ್ಯಮಿ ಫೈಝಲ್ ಕಟ್ಟೆಕ್ಕಾರ್ಸ್ ಸಂಘದ ಗೌರವ ಅಧ್ಯಕ್ಷ ಶಿವಪ್ರಸಾದ್, ಕೋಶಾಧಿಕಾರಿ ರಫೀಕ್ ಬಿ ಎಂ, ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸುಳ್ಯದ ಹಿರಿಯ ಆಂಬುಲೆನ್ಸ್ ಚಾಲಕ ಶ್ರೀಧರ ರವರನ್ನು ಸಮಿತಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬಳಿಕ ಸಂಘದ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಚೇರಿ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸಂಘದ ವತಿಯಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಆಂಬುಲೆನ್ಸ್ ಚಾಲಕರು,ಸಂಘ ಸಂಸ್ಥೆಗಳ ಸದಸ್ಯರುಗಳು ಭಾಗವಹಿಸಿ ರಕ್ತದಾನ ಮಾಡಿದರು.

ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿ,ವಂದಿಸಿದರು. ಉಪಾಧ್ಯಕ್ಷ ಉನೈಸ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯರುಗಳಿಗೆ ಸ್ಮರಣಿ ಕೆ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *