ಕಾಸರಗೋಡು, ಅ. 11: ನಗರದ ಆಟೋ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ರವರ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಆರೋಪಕ್ಕೆ ಒಳಗಾದ ಚಂದೇರ ಠಾಣಾ ಸಬ್ ಇನ್ಸ್ ಪೆಕ್ಟರ್ ಪಿ . ಅನೂಪ್ ನನ್ನು ಅಮಾನತು ಗೊಳಿಸಲಾಗಿದೆ.

ಕಾಸರಗೋಡು ನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಪಿ. ಅನೂಪ್ ನನ್ನು ಆರೋಪದ ಹಿನ್ನಲೆಯಲ್ಲಿ ಚಂದೇರ ಠಾಣೆಗೆ ವರ್ಗಾಯಿಸಲಾಗಿತ್ತು. ಸೋಮವಾರ ದಂದು ಅಬ್ದುಲ್ ಸತ್ತಾರ್ ರೈಲ್ವೆ ನಿಲ್ದಾಣ ಸಮೀಪದ ಕ್ವಾ ಟರ್ಸ್
ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.ನಗರದ ರಸ್ತೆ ಯೊಂದರಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿ ದರೆಂಬ ಕಾರಣಕ್ಕೆ ಅಬ್ದುಲ್ ಸತ್ತಾರ್ ರವರ ಆಟೋರಿಕ್ಷಾವನ್ನು ಕಸ್ಟಡಿಗೆ ತೆಗೆದು ಕೊಂಡಿದ್ದರು. ಹಲವು ಬಾರಿ ಠಾಣೆ ಯ ಮೆಟ್ಟ ಲೇರಿದ್ದರೂ ಆಟೋ ರಿಕ್ಷಾ ಬಿಟ್ಟು ಕೊಡಲು ಮುಂದಾಗಲಿಲ್ಲ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು

ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಎಸ್ಪಿ ಬಾಲಕೃಷ್ಣನ್ ನಾಯರ್ ಗೆ ಆದೇಶ ನೀಡಲಾಗಿತ್ತು. ಇದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ .ಶಿಲ್ಪಾ ರವರಿಗೆ ವರದಿ ನೀಡಲಾಗಿತ್ತು. ಬಳಿಕ ಸಬ್ ಇ ನ್ಸ್ ಪೆಕ್ಟರ್ ಅನೂಪ್ ನನ್ನು ಅಮಾನತು ಗೊಳಿಸಿ ಆದೇಶ ನೀಡಲಾಗಿದೆ. ಅನೂಪ್ ರವರನ್ನು ಅಮಾನತು ಗೊಳಿಸುವಂತೆ ಆಟೋ ಚಾಲಕರ ಸಂಘ, ಕೆಲ ರಾಜಕೀಯ ಪಕ್ಷಗಳು , ಸಂಘಟನೆಗಳು ಒತ್ತಾಯಿಸಿದ್ದವು . ಪ್ರತಿಭಟನೆಗೂ ಮುಂದಾಗಿದ್ದವು. ಇದಲ್ಲದೆ ಸಬ್ ಇನ್ಸ್ ಪೆಕ್ಟರ್ ಅನೂಪ್ ವಿರುದ್ಧ ಇನ್ನಿತರ ಆರೋಪ ಗಳು ಕೇಳಿ ಬಂದಿವೆ. ಕಾಸರಗೋಡು ನಗರದ ಲ್ಲಿ ಆಟೋ ಚಾಲಕನ ಜೊತೆ ಎಸ್ ಐ ಅನೂಪ್ ಅನುಚಿತವಾಗಿ ವರ್ತಿಸುವ ವಿಡಿಯೋ ಹೊರಬಂದಿದ್ದು , ಕ್ಷುಲ್ಲಕ ಕಾರಣಕ್ಕಾಗಿ ಆಟೋ ಚಾಲಕನ ನ್ನು ಠಾಣೆಗೆ ಕಾಲರ್ ಹಿಡಿದು ಕಸ್ಟಡಿಗೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ

Leave a Reply

Your email address will not be published. Required fields are marked *