ಕ್ರೀಡಾಕ್ಷೇತ್ರದಲ್ಲಿ ಎಲ್ಲಾ ಕ್ರೀಡೆಗಳ ವೀಕ್ಷಕವಿವರಣೆಯನ್ನು ನೀಡುತ್ತಿರುವ ಗುತ್ತಿಗಾರಿನ ನಿರಂತ್ ದೇವಶ್ಯ ಇವರು ಕ್ರೀಡಾಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ, ದಕ್ಷಿಣಕನ್ನಡ ಜಿಲ್ಲಾ ‘ಕಲಾ ರತ್ನ’ ಪ್ರಶಸ್ತಿಯನ್ನು ಮಂಗಳೂರಿನ ಅತ್ತಾವರದಲ್ಲಿರುವ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನ ಕೇಂದ್ರ ಕಛೇರಿಯಲ್ಲಿ ನಡೆದ Value Award Ceremony ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು. ನವೆಂಬರ್ 22 ರಂದು ಮ್ಯಾಕ್ಸ್ ಲೈಫ್ ಮತ್ತು ಆಕ್ಸಿಸ್‌ ಬ್ಯಾಂಕ್ ಸಹಯೋಗದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು..ಈ ಸಂಧರ್ಭದಲ್ಲಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು. ನಿರಂತ್ ದೇವಶ್ಯ ಅವರು ಹಲವಾರು ವರ್ಷಗಳಿಂದ ದಕ್ಷಿಣಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಯ ಅನೇಕ ಪಂದ್ಯಾಟಗಳಲ್ಲಿ ವೀಕ್ಷಕ ವಿವರಣೆಯನ್ನು ನೀಡುತ್ತಿದ್ದಾರೆ.‌ ಇವರು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ದೇವಶ್ಯ ದಿವಂಗತ ಡಿ.ಜೆ ರಾಧಾಕ್ರಷ್ಣ ಮತ್ತು ಜಯಂತಿ ಇವರ ಸುಪುತ್ರ.

Leave a Reply

Your email address will not be published. Required fields are marked *