ಸುಳ್ಯ: ಸೆಪ್ಟೆಂಬರ್ 13ರಂದು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆ

News Sports


ಸುಳ್ಯ: ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13, 2026ರ ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಸರಿಯಾಗಿ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ.
ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಮಾಧವ ಗೌಡ ಬಿ.ಕೆ. ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನೆರವೇರಲಿದೆ.
ಸಭೆಯ ಕಾರ್ಯಕ್ರಮಗಳು:

  • ಸ್ವಾಗತ
  • ವಾರ್ಷಿಕ ವರದಿ ಮಂಡನೆ
  • ವಾರ್ಷಿಕ ಲೆಕ್ಕಾಚಾರ ಮಂಡನೆ
  • ನೂತನ ಪದಾಧಿಕಾರಿಗಳ ಆಯ್ಕೆ
  • ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ
  • ಇತರ ವಿಷಯಗಳು
  • ಅಧ್ಯಕ್ಷೀಯ ನುಡಿ
  • ಧನ್ಯವಾದ ಸಮರ್ಪಣೆ
    ಈ ಮಹಾಸಭೆಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ಣಾಯಕ ಮಂಡಳಿಯ ಸದಸ್ಯರು, ಸರ್ವ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಧಾನ ಕಾರ್ಯದರ್ಶಿ ಉಮೇಶ್ ಪಿ. ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *