ಸುಳ್ಯ: ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13, 2026ರ ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಸರಿಯಾಗಿ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ.
ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಮಾಧವ ಗೌಡ ಬಿ.ಕೆ. ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನೆರವೇರಲಿದೆ.
ಸಭೆಯ ಕಾರ್ಯಕ್ರಮಗಳು:
- ಸ್ವಾಗತ
- ವಾರ್ಷಿಕ ವರದಿ ಮಂಡನೆ
- ವಾರ್ಷಿಕ ಲೆಕ್ಕಾಚಾರ ಮಂಡನೆ
- ನೂತನ ಪದಾಧಿಕಾರಿಗಳ ಆಯ್ಕೆ
- ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ
- ಇತರ ವಿಷಯಗಳು
- ಅಧ್ಯಕ್ಷೀಯ ನುಡಿ
- ಧನ್ಯವಾದ ಸಮರ್ಪಣೆ
ಈ ಮಹಾಸಭೆಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ಣಾಯಕ ಮಂಡಳಿಯ ಸದಸ್ಯರು, ಸರ್ವ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಧಾನ ಕಾರ್ಯದರ್ಶಿ ಉಮೇಶ್ ಪಿ. ವಿನಂತಿಸಿದ್ದಾರೆ.
