ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯಲ್ಲಿ ಶೇಖ್ ಜೀಲಾನಿ ಸಂಸ್ಮರಣೆ, ರಾತೀಬು ನೇರ್ಚೆ ಹಾಗೂ ಪ್ರಾರ್ಥನಾ ಸಂಗಮ

News

ಇಸ್ಲಾಂ ಧರ್ಮದ ಮಹಾನ್ ಆಧ್ಯಾತ್ಮಿಕ ಗುರು, ಸುಲ್ತಾನುಲ್ ಅವುಲಿಯಾ ಶೇಖ್ ಮುಹಿಯುದ್ದೀನ್ ಅಬ್ದುಲ್ ಖಾದರ್ ಜೀಲಾನಿ ಅವರ ಸಂಸ್ಮರಣೆಯ ಅಂಗವಾಗಿ ಗಾಂಧಿನಗರದ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ವಾರ್ಷಿಕ ರಾತೀಬು ನೇರ್ಚೆ ಮತ್ತು ಪ್ರಾರ್ಥನಾ ಸಂಗಮ ಭಕ್ತಿಭಾವದಿಂದ ನೆರವೇರಿತು.

ಪ್ರತಿ ವರ್ಷ ಅರಬಿಕ್ ಮಾಸ ರಬೀವುಲ್ ಆಖರ್ 22ರಂದು ಸಾಂಪ್ರದಾಯಿಕವಾಗಿ ಆಯೋಜಿಸಿಕೊಂಡು ಬರುತ್ತಿರುವ ಈ ಪುಣ್ಯ ಕಾರ್ಯಕ್ರಮದ ನೇತೃತ್ವವನ್ನು ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ವಹಿಸಿದ್ದರು. ಅಸ್ಸಯ್ಯದ್ ಕುಂಞ ಕೋಯ ತಂಞಳ್ ಸಅದಿ ಪ್ರಾರ್ಥನೆ (ದುವಾ) ನೆರವೇರಿಸಿದರು.

ಈ ಧಾರ್ಮಿಕ ಪ್ರಾರ್ಥನಾ ಸಂಗಮದಲ್ಲಿ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಹಾಜಿ ಕೆ.ಎಂ.ಎಸ್. ಮಹಮ್ಮದ್, ಮಾಜಿ ಅಧ್ಯಕ್ಷರಾದ ಹಾಜಿ ಕೆ.ಎಂ. ಮುಸ್ತಫ, ಪ್ರಧಾನ ಕಾರ್ಯದರ್ಶಿ ಹಾಜಿ ಐ. ಇಸ್ಮಾಯಿಲ್, ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಹಾಗೂ ಕಾರ್ಯದರ್ಶಿ ಕೆ.ಎಸ್. ಉಮ್ಮರ್ ಉಪಸ್ಥಿತರಿದ್ದರು.

ಜೊತೆಗೆ ಸಮಿತಿಯ ನಿರ್ದೇಶಕರುಗಳಾದ ಹಾಜಿ ಯಾಕೂಬ್ ಎಸ್.ಟಿ., ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಅಬೂಬಕ್ಕರ್ ಫ್ಯಾನ್ಸಿ, ಸಿದ್ದೇಕ್ ಕೊಡಿಯಮ್ಮೆ, ಹಾಜಿ ಕೆ.ಎಂ. ಮುಹಿಯ್ಯದ್ದೀನ್ ಫ್ಯಾನ್ಸಿ, ಮುದರ್ರಿಸ್ ಮುಬಶಿರ್ ಅಹ್ಸನಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದ ಸಮಾರೋಪದಲ್ಲಿ ಸಾರ್ವಜನಿಕ ಅನ್ನದಾನ ನೆರವೇರಿತು.

Leave a Reply

Your email address will not be published. Required fields are marked *