ಸುಳ್ಯದಲ್ಲಿ ‘ಸ್ಪಾರ್ಕಲ್ ಓರ್ನಮೆಂಟ್ಸ್’ ನೂತನ ಆಭರಣ ಮಳಿಗೆ ಅದ್ದೂರಿ ಉದ್ಘಾಟನೆ!

Business News News

ಸುಳ್ಯ: ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಇರುವ ಸುಳ್ಯ ಸೆಂಟರ್ ಕಾಂಪ್ಲೆಕ್ಸ್‌ನ 3ನೇ ಮಹಡಿಯಲ್ಲಿ ನೂತನವಾಗಿ  ‘ಸ್ಪಾರ್ಕಲ್ ಓರ್ನಮೆಂಟ್ಸ್’ (Sparkle Ornaments) ಆಭರಣ ಮಳೆಯು 2026ರ ಅಕ್ಟೋಬರ್ 15ರಂದು ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು.

ಮಳಿಗೆಯ ಮಾಲೀಕರಾದ ಹರ್ಷಿತ್ ರಾವ್ ಮತ್ತು ಅಖಿಲ್ ರಾವ್ ಅವರ ತಂದೆಯಂದಿರಾದ ಬಾಬಣ್ಣ ಕೆ. ಹಾಗೂ ಮೋಹನ್ ರಾವ್ ಅವರು ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ನೂತನ ಮಳೆಯನ್ನು ಲೋಕಾರ್ಪಣೆಗೊಳಿಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ ನಾರಾಯಣ ಕೆಕಡ್ಕ, ಮಹರ್ಷಿ ಕನ್ಸ್ಟ್ರಕ್ಷನ್‌ನ ವೈಭವ್, ಸಂಪ್ರೀತ್, ವೆಹಿಕಲ್ ಕೆಫೆಯ ಮಯೂರ್ ಹಾಗೂ ಹಿತೈಶಿಗಳು, ಸ್ನೇಹಿತರು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದು ಹೊಸ ಉದ್ಯಮಕ್ಕೆ ಶುಭ ಹಾರೈಸಿದರು.

ವಿಶೇಷತೆಗಳು: ಈ ಮಳಿಗೆಯಲ್ಲಿ ಒನ್ ಗ್ರಾಮ್ ಗೋಲ್ಡ್ ಜ್ಯುವೆಲ್ಲರಿ (One Gram Gold Jewellery), ಇಮಿಟೇಷನ್ ಜ್ಯುವೆಲ್ಲರಿ (Imitation Jewellery), ಆಂಟಿ-ಟಾರ್ನಿಷ್ ಜ್ಯುವೆಲ್ಲರಿ (Anti-Tarnish Jewellery) ಹಾಗೂ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸದ (Traditional & Contemporary Designs) ಅತ್ಯಾಕರ್ಷಕ ಆಭರಣಗಳು ರಿಟೈಲ್ ಮತ್ತು ಬಾಡಿಗೆಗೆ (Retail & Rental) ಲಭ್ಯವಿವೆ ಎಂದು ಮಾಲೀಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *