ಅರಂತೋಡು ಮತ್ತು ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿ ಸಭೆ ಅರಂತೋಡು ತೆಕ್ಕಿಲ್ ಸಭಾ ಭವನದಲ್ಲಿ ಆ.4ರಂದು ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಪಕ್ಷದ ಸಂಘಟನೆಯಲ್ಲಿ ಬೂತ್ ಮಟ್ಟದಿಂದ ತೊಡಗಿಸಿಕೊಳ್ಳಬೇಕು, ಮುಂದಿನ ಚುನಾವಣೆಗೆ ತಯಾರಿಯಾಗುವ ಹಿನ್ನೆಲೆಯಲ್ಲಿ ಮಾರ್ಗದರ್ಶನ ನೀಡಿದರು. ಪ್ರತೀ ಕಾರ್ಯಕರ್ತರು ಧೈರ್ಯ ದಿಂದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಿ ನಿಮ್ಮ ಜೊತೆ ಬ್ಲಾಕ್ ಕಾಂಗ್ರೆಸ್ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಎಲ್ಲರೂ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಾಗ ಊರಿನ ಅಭಿವೃದ್ಧಿಗೆ ಅನುದಾನ ತರಲು ಅನುಕೂಲವಾಗುತ್ತದೆ. ಆರಂತೋಡಿಗೆ ಬಹಳಷ್ಟು ಅಭಿವೃದ್ಧಿ ಕಾಮಗಾರಿಗೆ ಅನುದಾನ ತರಿಸಿದ್ದೇನೆ. ಮುಂದೆಯೂ ತಾವೆಲ್ಲರೂ ಪಕ್ಷವನ್ನು ಗೆಲ್ಲಿಸಲು ಸಹಕರಿಸಿ ಮತ್ತಷ್ಟು ಅನುದಾನ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ ಎಸ್ ಐ ಆರ್ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಪಕ್ಷದ ಮುಂದಿನ ಕಾರ್ಯಕ್ರಮಗಳಾದ ಸಂಘಟನ್ ಸೃಜನ್ ಅಭಿಯಾನದ ಬಗ್ಗೆ ವಿವರಿಸಿ, ಪಂಚಾಯತ್ ಚುನಾವಣೆಗೆ ಸಜ್ಜಾಗುವಂತೆ ಸಲಹೆ ನೀಡಿದರು.
ಹಿರಿಯರಾದ ತೀರ್ಥರಾಮ ಪರ್ನೋಜಿ, ಅರಂತೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ರೈ, ತೋಡಿಕಾನ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ತಿಮ್ಮಯ್ಯ ಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ಕೆಡಿಪಿ ಸದಸ್ಯ ಆಶ್ರಪ್ ಗುಂಡಿ,ಮಾಜಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ,ಉಪಸ್ಥಿತರಿದ್ದರು. ಹಿರಿಯರಾದ ದೇವಪ್ಪ ಕುಂದಲ್ಪಾಡಿ,ಜುಬೇರ್,ಗಾಂಧಿ ಅಡ್ಯಡ್ಕ ,ತೇಜ ಬನ,ಬಾಬು,ಜನಾರ್ದನ ,ಸುಂದರ, ಕರುಣಾಕರ ಇರ್ನೆ,ಬಾಬು ಮಾಡದ ಕಾನ,ತಾಜುದ್ದೀನ್ ಅರಂತೋಡು ,ಶಶಿ,ರಾಧಾಕೃಷ್ಣ ,ಆಶಿಕ್ , ಹರ್ಷಿತ್,ರಾಘವ,ಗಣಪತಿ,
ಸೇರಿದಂತೆ ಅರಂತೋಡು ಮತ್ತು ತೋಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.ಅಮೀರ್ ಸ್ವಾಗತಿಸಿ ಅಶ್ರಫ್ ಗುಂಡಿ ವಂದಿಸಿದರು .
