ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ಆದರ್ಶ ಕ್ಯಾಂಪೇನ್

News


ಎಸ್.ಕೆ.ಎಸ್.ಬಿ.ವಿ, ಅರಂತೋಡು ಶಾಖೆ ಇದರ ಆಶ್ರಯದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಆದರ್ಶ ಕ್ಯಾಂಪೇನ್ ಕಾರ್ಯಕ್ರಮವು ಅ.4 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅರಂತೋಡು ಬದ್ರಿಯಾ ಜುಮಾಮಸೀದಿ ಖತೀಬರಾದ ಬಹು ಆಸಿಫ್ ಅಝ್ ಹರಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅಜ್ಜಾವರ ಮುಹಿದ್ಧೀನ್ ಜುಮಾ ಮಸೀದಿ ಖತೀಬರಾದ ಬಹು ಹಸೈನಾರ್ ಫೈಝಿ ಮಾತನಾಡಿ ಸತ್ಯ ನೈತಿಕತೆ, ದಯೆ ಹಾಗೂ ಸನ್ಮಾರ್ಗದಹಾದಿಯಲ್ಲಿ ಮುನ್ನಡೆಯಬೇಕೆಂದರು ಜಮಾಅತ್ ಅಧ್ಯಕ್ಷ ಅಸ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದರು. ಸದರ್ ರವೂಫ್ ಅಝ್ ಹರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯಕ್ರಮದಲ್ಲಿ ಸಹಾಯಕ ಅಧ್ಯಾಪಕ ಅಬ್ದುಲ್ಲ ರಹಿಮಾನ್ ಝುಹರಿ,ಜಮಾಅತ್ ಉಪಾಧ್ಯಕ್ಷ ಹಾಜಿ, ಕೆ.ಎಂ ಮಹಮ್ಮದ್, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಸನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಹಾಜಿ ಎ ಅಬ್ದುಲ್ ಖಾದರ್ ಪಠೇಲ್, ಮುಜೀಬ್, ಸಮದ್ ಗುಂಡಿ, ಕೆ.ಎಂ ಮೊಯಿದು ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು.ಸಮಾರಂಭದಲ್ಲಿ ಸಂಪನ್ಮೋಲ ವ್ಯೆಕ್ತಿ ಹಸೈನಾರ್ ಪೈಝಿ ಯವರನ್ನು ಜಮಾ ಅತ್ ವತಿಯಿಂದ ಸನ್ಮಾನಿಸಲಾಯಿತು

Leave a Reply

Your email address will not be published. Required fields are marked *