ಉಪ್ಪಿನಂಗಡಿ: ಗಲ್ಫ್ ಫ್ರೆಂಡ್ಸ್ ತೆಕ್ಕಾರು ನೂತನ ಸಮಿತಿ ಅಸ್ತಿತ್ವಕ್ಕೆ

ತೆಕ್ಕಾರು, ಸೆ.22: ಗಲ್ಫ್ ಫ್ರೆಂಡ್ಸ್ ತೆಕ್ಕಾರು ಸಂಸ್ಥೆಯ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 20ರಂದು ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಿ, ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಗೌರವಾನ್ವಿತ ಖಾಸಿಮ್ ಮದನಿ ಉಸ್ತಾದ್ ಅವರ ದುಆ ಹಾಗೂ ಮಾರ್ಗದರ್ಶನದೊಂದಿಗೆ, ಹಿರಿಯರಾದ ಝಕರೀಯಾ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ BT ಅಶ್ರಫ್ ಲತೀಫಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮಸೂದ್ ಹೊಸಮೊಗರು ಹಾಗೂ ಖಜಾಂಚಿಯಾಗಿ ಅಶ್ರಫ್ ಎಂ.ಎಂ. ಆಯ್ಕೆಯಾಗಿದ್ದಾರೆ. ಸಂಸ್ಥೆಯ ಸಮಾಜಮುಖಿ […]

Read More

ಧರ್ಮಸ್ಥಳ ಸೌಜನ್ಯಾ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ – ಧರ್ಮಸ್ಥಳ ಕ್ಷೇತ್ರದಿಂದ ಸ್ವಾಗತ

ಹೊಸದೆಹಲಿ: ಧರ್ಮಸ್ಥಳದ ಸಮೀಪದ ಉಜಿರೆಯಲ್ಲಿ 2012ರಲ್ಲಿ ನಡೆದಿದ್ದ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಸಮಗ್ರ ಮರುತನಿಖೆಗೆ ಆದೇಶಿಸಿದೆ. ಪ್ರಕರಣದ ಮರುತನಿಖೆಗಾಗಿ ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಹಾಗೂ ದಕ್ಷ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಹೊಸ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಉನ್ನತ ನ್ಯಾಯಾಲಯ ಸೂಚಿಸಿದೆ. ಅಲ್ಲದೆ, ಈ ಹಿಂದೆ ಪ್ರಾಥಮಿಕ ತನಿಖೆ ಅಥವಾ ಸಿಬಿಐ […]

Read More

ಮಕ್ಕಾದ ಮಸ್ಜಿದುಲ್ ಹರಮ್ ಮುಖ್ಯ ಮುಅಝ್ಝಿನ್ ಶೇಖ್ ಇಬ್ರಾಹಿಂ ಅಲ್ ಮದನಿ ಇನ್ನಿಲ್ಲ: ಕೊನೆಯ ಅಧಾನ್ ಕೂಗಿದ ಕೆಲವೇ ಗಂಟೆಗಳಲ್ಲಿ ನಿಧನ

ಮಕ್ಕಾದ ಪವಿತ್ರ ಮಸ್ಜಿದುಲ್ ಹರಮ್ (ಗ್ರ್ಯಾಂಡ್ ಮಾಸ್ಕ್) ನ ಮುಖ್ಯ ಮುಅಝ್ಝಿನ್ ಶೇಖ್ ಇಬ್ರಾಹಿಂ ಬಿನ್ ಆದೇಲ್ ಹಮ್ಜಾ ಅಲ್ ಮದನಿ ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ ಸುಮಾರು 48 ರಿಂದ 51 ವರ್ಷ ವಯಸ್ಸಾಗಿತ್ತು. ಅವರು ನಿಧನರಾಗುವ ಕೆಲವೇ ಗಂಟೆಗಳ ಮೊದಲು, ಅಂದರೆ ಸೋಮವಾರದ ಫಝರ್ (ಮುಂಜಾನೆ) ನಮಾಜ್‌ಗೆ ಮಸ್ಜಿದುಲ್ ಹರಮ್‌ನಲ್ಲಿ ತಮ್ಮ ಮಧುರ ಧ್ವನಿಯಲ್ಲಿ ಅಧಾನ್ ಕೂಗಿದ್ದರು. ಇದು ಅವರ ಜೀವನದ ಕೊನೆಯ ಅಧಾನ್ ಆಯಿತು. 2017-2018 ರಿಂದ ಮಕ್ಕಾದ ಪವಿತ್ರ ಮಸೀದಿಯಲ್ಲಿ […]

Read More

ಸುಳ್ಯ: 31 ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿ ಅಗಲಿದ ಗಾಂಧಿನಗರ ಅಂಗನವಾಡಿ ಸಹಾಯಕಿ ಪುಷ್ಪಾವತಿಯವರಿಗೆ ಭಾವಪೂರ್ಣ ನುಡಿ ನಮನ

ಸುಳ್ಯ: ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ೩೧ ವರ್ಷಗಳ ಕಾಲ ಸಹಾಯಕಿ ಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯ ಅಂಚಿನಲ್ಲಿ ನಮ್ಮನ್ನಗಲಿದ ಪುಷ್ಪಾವತಿ ಯವರಿಗೆ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಶಹನಾಜ್ ಅಧ್ಯಕ್ಷತೆ ವಹಿಸಿದ್ದರು. ಗಾಂಧಿನಗರ ಕೆ.ಪಿ.ಎಸ್. ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಭವಾನಿ ಟೀಚರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ದಿವಂಗತ ಪುಷ್ಪಾವತಿಯವರ ಭಾವಚಿತ್ರಕ್ಕೆ […]

Read More

ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆ

ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿಯ ಮುಖ್ಯ ಸಭೆಯು ದಿನಾಂಕ 20 ಸೆಪ್ಟೆಂಬರ್ 2026 ರಂದು ಮಂಗಳೂರಿನ SDPI ಕಛೇರಿಯಲ್ಲಿ ಜರುಗಿತು.​ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ಅವರು, ಮುಂಬರುವ ದಿನಗಳಲ್ಲಿ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು. ಇದೇ ವೇಳೆ ಸಭೆಯಲ್ಲಿ ಮುಂದಿನ 3 ವರ್ಷಗಳ ಸುದೀರ್ಘ ಕಾರ್ಯ ಯೋಜನೆಗಳ ಕುರಿತು ಚರ್ಚೆ ನಡೆಸಿ, ಅಗತ್ಯ ತೀರ್ಮಾನಗಳನ್ನು […]

Read More

ಸುಳ್ಯದಲ್ಲಿ ‘ಮೊಬೈಲ್ ಟೆಕ್’ ನೂತನ ಮಳಿಗೆ ಉದ್ಘಾಟನೆ ಹಾಗೂ ಭರ್ಜರಿ ಕೊಡುಗೆಗಳು!

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ “ಮೊಬೈಲ್ ಟೆಕ್” (MOBILE TECH) ನೂತನ ಮೊಬೈಲ್ ಮಳಿಗೆಯು ಶುಭಾರಂಭಗೊಂಡಿದೆ. ಈ ಮಳಿಗೆಯ ಉದ್ಘಾಟನೆಯನ್ನು ಕುಞಿಕೋಯ ತಂಙಲ್ ಸಅದಿ ನೆರವೇರಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಮಳಿಗೆಯ ಮಾಲಕರಾದ ಮುಸ್ತಫಾ, ಅನ್ಸಾರ್ ಹಾಗೂ ಅತಿಥಿಗಳಾಗಿ ಬಶೀರ್ ಝುಹರಿ, ಅಬೂಬಕರ್ ಹಾಗೂ ಇಸ್ಮಾಯಿಲ್ ಉಪಸ್ಥಿತರಿದ್ದರು. ವಿಶೇಷ ಉದ್ಘಾಟನಾ ಕೊಡುಗೆಗಳು:

Read More

ಸುಳ್ಯ: ದೇವರಾಜ ಅರಸು ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ರೋಮಾಂಚನಕಾರಿ ಕೆಸರು ಗದ್ದೆ ಕ್ರೀಡಾಕೂಟ ಯಶಸ್ವಿ

ಸುಳ್ಯ: ತಂತ್ರಜ್ಞಾನ ಯುಗದಲ್ಲಿ ಸಾಂಪ್ರದಾಯಿಕ ಆಚರಣೆಗಳು ಉಳಿಯಲು ಕೆಸರು ಗದ್ದೆ ಕ್ರೀಡೆಗಳು ಸಹಕಾರಿ – ಕೆ.ಎಂ. ಮುಸ್ತಫಾ ಸುಳ್ಯ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸುಳ್ಯ ಕಾಂತಮಂಗಲದ ಮನಮೋಹನ ಪುತ್ತಿಲರವರ ಗದ್ದೆಯಲ್ಲಿ ದೇವರಾಜ ಅರಸು ವಸತಿ ನಿಲಯದ ವಿದ್ಯಾರ್ಥಿಗಳ ತಾಲೂಕು ಮಟ್ಟದ ರೋಮಾಂಚನಕಾರಿ ಕೆಸರು ಗದ್ದೆ ಕ್ರೀಡಾಕೂಟವು ಸಂಭ್ರಮದಿಂದ ಜರುಗಿತು. ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫಾ ಅವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. “ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಸಂಪ್ರದಾಯಗಳು […]

Read More

ಫುಟ್ಬಾಲ್ ಕ್ಲಾಸಿಕ್ ಟ್ರೋಫಿ 2026: ಸಿಎಫ್‌ಸಿ ಕರಿಂಬಿಲ ಚಾಂಪಿಯನ್, ವೈಕಿಂಗ್ ರನ್ನರ್ ಅಪ್!

ಮುಚ್ಚಿಲ: ಕೆ.ಎಸ್. ಗೌಡ ಕ್ರೀಡಾಂಗಣದಲ್ಲಿ ಕ್ಲಾಸಿಕ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ.) ಮುಚ್ಚಿಲ ಇದರ ಆಶ್ರಯದಲ್ಲಿ ಜರುಗಿದ  ‘ಕ್ಲಾಸಿಕ್ ಟ್ರೋಫಿ 2026’ ಒಂಬತ್ತು ಜನರ, 8 ತಂಡಗಳ ಲೀಗ್ ಮಾದರಿಯ ಫುಟ್‌ಬಾಲ್ ಪಂದ್ಯಾಟವು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ರೊಮಾಂಚನಕಾರಿಯಾಗಿ ನಡೆದ ಈ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಸಿಎಫ್‌ಸಿ ಕರಿಂಬಿಲ (CFC Karimbila) ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡರೆ, ವೈಕಿಂಗ್ ಎಫ್‌ಸಿ ಮುಚ್ಚಿಲ (Viking FC Mcl) ತಂಡವು ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ವೈಯಕ್ತಿಕ […]

Read More

ಗಾಂಧಿನಗರ: ಹಸು ಹಾಗೂ ಕಾರ್ ನಡುವೆ ಅಪಘಾತ: ಕಾರಿನ‌ ಮುಂಭಾಗ ಜಖಂ

ಗಾಂಧಿನಗರದ ಹೆಚ್.ಪಿ. ಪೆಟ್ರೋಲ್ ಬಂಕ್ ಹತ್ತಿರ ಅನಿರೀಕ್ಷಿತವಾಗಿ ಹಸುವೊಂದು ಅಡ್ಡ ಬಂದಿದ್ದರಿಂದ ವ್ಯಾಗನಾರ್ (WagonR) ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನ ಮುಂಭಾಗ ಸ್ವಲ್ಪ ಮಟ್ಟಿಗೆ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಹಾಗೂ ಹಸುವಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ,  ಎಂದು ತಿಳಿದುಬಂದಿದೆ.

Read More

ಖ್ಯಾತ ಗಾನಗಂಧರ್ವ ಶಶಿಧರ್ ಕೋಟೆಯಿಂದ ನ್ಯಾಯವಾದಿ ಎಂ. ವೆಂಕಪ್ಪ ಗೌಡರ ನೂತನ ಕಚೇರಿಗೆ ಭೇಟಿ; ಶುಭ ಹಾರೈಕೆ

ಸುಳ್ಯ/ಬೆಂಗಳೂರು: ಖ್ಯಾತ ಗಾಯಕ, ನಿರೂಪಕ ಹಾಗೂ ಚಲನಚಿತ್ರ ನಟ ‘ಗಾನಗಂಧರ್ವ’ ಶಶಿಧರ್ ಕೋಟೆಯವರು ಅರೋಹಿ ಎನ್ ಕ್ಲೇವ್‌ನಲ್ಲಿರುವ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಅವರ ನೂತನ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಈ ನೂತನ ಕಚೇರಿ ಉದ್ಘಾಟನಾ ಸಂಭ್ರಮ ಹಾಗೂ ಶುಭ ಹಾರೈಕೆ ಸಮಾರಂಭದಲ್ಲಿ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಡಿ.ಬಿ. ಬಾಲಕೃಷ್ಣ, ನ್ಯಾಯವಾದಿ ಶ್ಯಾಮ್ ನಿಡ್ಯಮಲೆ ಹಾಗೂ ಸುಪ್ರೀತ್ ಮೋಂಟಡ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ನೂತನ ಕಚೇರಿಗೆ ಯಶಸ್ಸು ಸಿಗಲಿ ಎಂದು […]

Read More