ಸುಳ್ಯ ತಾಲೂಕಿನ‌ ಹಲವೆಡೆ ವಿದ್ಯುತ್ ವ್ಯತ್ಯಯ – ಸಾರ್ವಜನಿಕರಿಗೆ ಮೆಸ್ಕಾಂ ಪ್ರಕಟಣೆ!

News

ಅಕ್ಟೋಬರ್ 27ರ ನಾಳೆ ದಿನದಂದು ಸುಳ್ಯ ತಾಲೂಕಿನಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ಮೂಲಕ ಅಧಿಕೃತವಾಗಿ ತಿಳಿಸಿದೆ. ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿರುವುದರಿಂದ ಈ ಕಡಿತ ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.

ನಾಳೆ ಬೆಳಿಗ್ಗೆ ಸರಿಯಾಗಿ 10:00 ಗಂಟೆಯಿಂದ ಆರಂಭಗೊಂಡು ಸಂಜೆ 6:00 ಗಂಟೆಯ ತನಕ ಈ ವಿದ್ಯುತ್ ವ್ಯತ್ಯಯ ಮುಂದುವರಿಯಲಿದೆ. ನಿರ್ದಿಷ್ಟವಾಗಿ 11ಕೆ.ವಿ. ಸುಳ್ಯ-1 (ಕೇರ್ಪಳ), ಸುಳ್ಯ-2 (ಶ್ರೀರಾಮಪೇಟೆ), ಜಬಳೆ, ಡಿಪ್ಪೊ, ತೊಡಿಕಾನ, ಕೊಲ್ಚಾರ್, ದೇವಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ ಹಾಗೂ ಮಂಡೆಕೋಲು ಫೀಡರ್‌ಗಳ ವ್ಯಾಪ್ತಿಗೆ ಬರುವ ಸಮಸ್ತ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ. ಈ ತುರ್ತು ನಿರ್ವಹಣಾ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ವಿನಂತಿಸಿದೆ.

Leave a Reply

Your email address will not be published. Required fields are marked *