ತೆಲಂಗಾಣ ಮುಖ್ಯಮಂತ್ರಿಗೆ ಆರ್ಯಾಡನ್ ಮೊಹಮ್ಮದ್ ಸ್ಮಾರಕ ಪ್ರಶಸ್ತಿ ಪ್ರದಾನ

ಕರ್ನಾಟಕದ ಟಿ.ಎಮ್ ಶಾಹೀದ್ ತೆಕ್ಕಿಲ್ ಭಾಗಿ ನಿಲಂಬೂರು: ತೆಲಂಗಾಣ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಆರ್ಯಾಡನ್ ಮೊಹಮ್ಮದ್ ಅವರ 3ನೇ ಸ್ಮಾರಕ ಪ್ರಶಸ್ತಿಯನ್ನು ಹಸ್ತಾಂತರಿಸಿದರು.ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇರಳದ ಮಾಜಿ ಸಚಿವ ದಿವಂಗತ ಆರ್ಯಾಡನ್ ಮೊಹಮ್ಮದ್ ಅವರ ಸ್ಮರಣಾರ್ಥ ‘ಆರ್ಯಾಡನ್ ಮೊಹಮ್ಮದ್ ಫೌಂಡೇಶನ್’ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಯಿತು.ರೈತರು, ಹಿಂದುಳಿದ ವರ್ಗಗಳು ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ರೇವಂತ್ ರೆಡ್ಡಿ ಅವರು ಕೈಗೊಂಡಿರುವ ಜನಪರ ಆಡಳಿತ ಹಾಗೂ […]

Read More

ಏಷ್ಯನ್ ಗೇಮ್ಸ್: ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನದ ಪದಕದ ಗರಿ

ನಗೋಯಾ: 2026ರ ಏಷ್ಯನ್ ಕ್ರೀಡಾಕೂಟದ (Asian Games) ಮಹಿಳೆಯರ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡವು ಇರಾನ್ ವಿರುದ್ಧ ರೋಚಕ ಜಯ ಸಾಧಿಸಿ ಚಿನ್ನದ ಪದಕವನ್ನು (Gold Medal) ಮುಡಿಗೇರಿಸಿಕೊಂಡಿದೆ. ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಅಂತಿಮ ಹಣಾಹಣಿಯಲ್ಲಿ ಭಾರತ ತಂಡವು 37-34 ಅಂತರದಿಂದ ಇರಾನ್ ತಂಡವನ್ನು ಮಣಿಸಿ ಭರ್ಜರಿ ಗೆಲುವು ದಾಖಲಿಸಿತು. ಪಂದ್ಯದ ಮೊದಲಾರ್ಧದಲ್ಲಿ 22-16 ಮುನ್ನಡೆ ಸಾಧಿಸಿದ್ದ ಭಾರತದ ಹೆಣ್ಣುಮಕ್ಕಳು, ದ್ವಿತೀಯಾರ್ಧದಲ್ಲೂ ತಮ್ಮ ಅಮೋಘ ಆಟವನ್ನು ಮುಂದುವರೆಸಿ ವಿಜಯಶಾಲಿಯಾದರು.

Read More

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ: ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸುಳ್ಯದ ಜೋಡಿಗೆ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2026-27ರ ಪುರುಷರ ಡಬಲ್ಸ್ ವಿಭಾಗದಲ್ಲಿ ಅದಿತ್ಯ ವರ್ಮಾ ಮತ್ತು ಪ್ರಮೋದ್ ಜೋಡಿಯು ಪ್ರಥಮ ಸ್ಥಾನ ಗಳಿಸಿ ವಿಜೇತರಾಗಿದ್ದಾರೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಹೋರಾಟವನ್ನು ಪ್ರದರ್ಶಿಸಿದ ಸುಳ್ಯದ ಚೇತನ್ ಪಿ.ಎನ್. ಮತ್ತು ಯಜ್ಞೇಶ್ ಕಾನತ್ತಿಲ ಜೋಡಿಯು ದ್ವಿತೀಯ ಸ್ಥಾನವನ್ನು (ರನರ್ಸ್ ಅಪ್) ಪಡೆದುಕೊಂಡು ಗಮನಾರ್ಹ ಸಾಧನೆ ಮಾಡಿದೆ. ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ವಿಜೇತ […]

Read More

ವಿದ್ಯಾರ್ಥಿನಿ ಕೋಮಾ ಸ್ಥಿತಿಯಲ್ಲಿ: ಶಾಹೀನ್ ಕಾಲೇಜು ಆಡಳಿತದ ಹೊಣೆಗಾರಿಕೆ ಪ್ರಶ್ನಾರ್ಹ : ವಿಮೆನ್ ಇಂಡಿಯಾ ಮೂವ್ಮೆಂಟ್

ಬೀದರ್‌ನ ಶಾಹೀನ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಮಂಗಳೂರಿನ ಯುವತಿಯೊಬ್ಬಳು ಅನಾರೋಗ್ಯಕ್ಕೆ ತುತ್ತಾಗಿ ಗಂಭೀರ ಸ್ಥಿತಿಗೆ ತಲುಪಿ, ಇದೀಗ ಕೋಮಾ ಸ್ಥಿತಿಯಲ್ಲಿರುವುದು ಅತ್ಯಂತ ಆತಂಕಕಾರಿ ಹಾಗೂ ನೋವಿನ ಸಂಗತಿಯಾಗಿದೆ ಎಂದು ವಿಮೆನ್ ಇಂಡಿಯಾ ಮೂಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಹೇಳಿದ್ದಾರೆ . ವಿದ್ಯಾರ್ಥಿಗಳ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣವನ್ನು ಖಾತ್ರಿಪಡಿಸುವುದು ಯಾವುದೇ ಶಿಕ್ಷಣ ಸಂಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ.ವಿಶೇಷವಾಗಿ ಹಾಸ್ಟೆಲ್‌ನ ಆಹಾರ ವ್ಯವಸ್ಥೆ, ಸ್ವಚ್ಛತೆ, ಕುಡಿಯುವ ನೀರು, ವಿದ್ಯಾರ್ಥಿಗಳ ಆರೋಗ್ಯದ ಮೇಲ್ವಿಚಾರಣೆ ಹಾಗೂ ತುರ್ತು ವೈದ್ಯಕೀಯ ಕ್ರಮಗಳು […]

Read More

ಅಡ್ಕಾರ್ ಮಾವಿನಕಟ್ಟೆ ಬಳಿ ಅಪಘಾತ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಸುಳ್ಯ: ಕಾರಿಗೆ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ಅದನ್ನು ತಪ್ಪಿಸಲು ಹೋಗಿ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಅಡ್ಕಾರ್ ಮಾವಿನಕಟ್ಟೆ ಬಳಿ ನಡೆದಿದೆ. ಘಟನೆಯ ವಿವರ: ಅಡ್ಕಾರ್ ಮಾವಿನಕಟ್ಟೆ ಬಳಿ ಕಾರಿಗೆ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ಅದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಪೆರ್ಲಂಪಾಡಿಯ ತೀರ್ಥ ರಾಜ್ ಅವರ ಎಡದ ಕಾಲು ಮುರಿದು […]

Read More

ಧಾರ್ಮಿಕ ಭಾವನೆ ಕೆರಳಿಸುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಿ: ಬಿಜೆಪಿ ವಿರುದ್ಧ ಟಿ.ಎಂ. ಶಹೀದ್ ತೆಕ್ಕಿಲ್ ಕಿಡಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳುವಿಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಮಾನ ನೀಡಿರುವುದು ಹಾಗೂ ಕರಾವಳಿ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಿರುವುದು ಅತ್ಯಂತ ಸ್ವಾಗತಾರ್ಹ ಎಂದು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಅಭಿಪ್ರಾಯಪಟ್ಟಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಪಕ್ಷಗಳು ರಚನಾತ್ಮಕ ಸಲಹೆಗಳನ್ನು ನೀಡಬೇಕೆ ಹೊರತು ರಾಜಕೀಯ […]

Read More

ಪೌರಕಾರ್ಮಿಕರ ದಿನಾಚರಣೆ: ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಟಿ.ಎಂ.ಶಾಹಿದ್ ತೆಕ್ಕಿಲ್ ಭೇಟಿ, ಕಾರ್ಮಿಕರ ಸಂಕಷ್ಟ ಆಲಿಕೆ

ಮಂಗಳೂರು: ಪೌರಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್, ಅಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಭೇಟಿಯಾಗಿ ಅವರ ಕಷ್ಟ-ಸುಖಗಳನ್ನು ವಿಚಾರಿಸಿದರು. ದಿನನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳು, ಕೆಲಸದ ಒತ್ತಡ ಮತ್ತು ದಿನನಿತ್ಯದ ಬದುಕಿನ ಹೋರಾಟದ ಬಗ್ಗೆ ಕಾರ್ಮಿಕರಿಂದ ನೇರವಾಗಿ ಮಾಹಿತಿ ಪಡೆದುಕೊಂಡರು. ಕಾರ್ಮಿಕರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಕನಿಷ್ಠ ವೇತನ, ಸಕಾಲಕ್ಕೆ […]

Read More

ಅರಂತೋಡು ಎಸ್ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಮಹಾಸಭೆ ಮತ್ತು ಪದಾಧಿಕಾರಿಗಳ ಆಯ್ಕೆ

ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಮಹಾಸಭೆಯು ಅರಂತೋಡು ಮಸೀದಿ ವಠಾರದಲ್ಲಿ ಸೆ. 17 ರಂದು ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆಯ ಅಧ್ಯಕ್ಷರಾದ ಜುಬೇರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬದ್ರಿಯಾ ಜುಮಾ ಮಸೀದಿ ಖತೀಬ್ ಆಸಿಫ್ ಆಜ್ಹರಿ ದುವ ನೆರವೇರಿಸಿದರು .ಚುನಾವಣಾ ಅಧಿಕಾರಿಯಾಗಿ ಅಬ್ದುಲ್ಲ ಫೈಝಿ,ಸಂಪನ್ಮೂಲ ವ್ಯಕ್ತಿಗಳಾಗಿ ಅಕ್ಬರ್ ಕರಾವಳಿ ಭಾಗವಹಿಸಿದರು .ಲೆಕ್ಕಪತ್ರ ಮಂಡನೆಯನ್ನು ಶಾಖೆಯ ಪ್ರಧಾನ ಕಾರ್ಯದರ್ಶಿ ಸಂಸುದ್ದೀನ್ ರವರು ಮಂಡಿಸಿದರು. ವೇದಿಕೆಯಲ್ಲಿ […]

Read More

ಖ್ಯಾತ ಮಲಯಾಳಂ ನಟಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಾವಿತ್ರಿ ಶ್ರೀಧರನ್ ನಿಧನ

ಮಲಯಾಳಂ ಚಿತ್ರರಂಗ ಮತ್ತು ರಂಗಭೂಮಿಯ ಹಿರಿಯ ನಟಿ ಸಾವಿತ್ರಿ ಶ್ರೀಧರನ್ (70+) ಅವರು ವಯೋಸಹಜ ಅನಾರೋಗ್ಯದಿಂದ ಕೋಝಿಕ್ಕೋಡ್‌ನ ಮಾಂಕಾವಿನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ ಕೆಲವು ಕಾಲದಿಂದ ಆರೋಗ್ಯ ಸಮಸ್ಯೆಗಳಿದ್ದವು ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಪ್ರಸಿದ್ಧ ಮಲಯಾಳಂ ಚಲನಚಿತ್ರ ‘ಸುಡಾನಿ ಫ್ರಮ್ ನೈಜೀರಿಯಾ’ ಚಿತ್ರದಲ್ಲಿ ‘ಉಮ್ಮಾ’ (ಜಮೀಲಾ) ಪಾತ್ರದಲ್ಲಿ ಅಭಿನಯಿಸುವ ಮೂಲಕ ಅವರು ಪ್ರೇಕ್ಷಕರ ಮನಸೂರೆಗೊಂಡಿದ್ದರು. ಈ ಚಿತ್ರದ ಅತ್ಯುತ್ತಮ ನಟನೆಗಾಗಿ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಹನಟಿ ಪ್ರಶಸ್ತಿ ಹಾಗೂ ರಾಷ್ಟ್ರೀಯ […]

Read More

ಮೀಸಲು ಸೀಟು ಯಾರಿಗಾಗಿ? ಒಂದು ಸೀಟಿನ ಹಿಂದೆ ಇರುವ ಹಕ್ಕಿನ ಪ್ರಶ್ನೆ – ಪ್ರಾಪ್ತಿ ಗೌಡ

“ಮೀಸಲು ಸೀಟು” ಎಂಬ ಎರಡು ಪದಗಳು ಕೆಲವರಿಗೆ ಕೇವಲ ಒಂದು ಆಸನವನ್ನು ನೆನಪಿಸಬಹುದು. ಆದರೆ ಆ ಸೀಟಿನ ನಿಜವಾದ ಅರ್ಥ, ಅದರ ಅಗತ್ಯವಿರುವ ವ್ಯಕ್ತಿಗೆ ಮಾತ್ರ ಹೆಚ್ಚು ಸ್ಪಷ್ಟವಾಗುತ್ತದೆ. ಸಾಮಾನ್ಯ ಪ್ರಯಾಣಿಕನಿಗೆ ಅದು ಕೆಲವು ಹೊತ್ತು ಕುಳಿತುಕೊಳ್ಳುವ ಸ್ಥಳವಾಗಿರಬಹುದು. ಆದರೆ ವಿಶೇಷ ಚೇತನ ವ್ಯಕ್ತಿಗೆ ಅದೇ ಸೀಟು ಸುರಕ್ಷಿತವಾಗಿ, ಗೌರವದಿಂದ ಮತ್ತು ಆತ್ಮವಿಶ್ವಾಸದಿಂದ ಪ್ರಯಾಣಿಸುವ ಅಗತ್ಯವಾಗಿರಬಹುದು. ಹಾಗಾದರೆ ಸರ್ಕಾರವೇ ನಿರ್ದಿಷ್ಟ ವರ್ಗದ ಪ್ರಯಾಣಿಕರಿಗಾಗಿ ಮೀಸಲಿಟ್ಟಿರುವ ಸೀಟುಗಳು ನಿಜವಾಗಿಯೂ ಯಾರಿಗಾಗಿ? ಅವು ಕೇವಲ ಹೆಸರಿಗಷ್ಟೇ ಮೀಸಲಾಗಿವೆಯೇ? ಅಥವಾ ಅವುಗಳ […]

Read More