ಜೇಸಿಐ ಸುಳ್ಯ ಪಯಸ್ವಿನಿ ಜೇಸಿಐ ಸಪ್ತಾಹ ಅದ್ದೂರಿಯಾಗಿ ನಡೆದ ಸಮಾರೋಪ ಸಮಾರಂಭ

ಕಲಾಶ್ರೀ, ಪಯಸ್ವಿನಿಶ್ರೀ, ಕಮಲ ಪತ್ರ, ಸೈಲೆಂಟ್ ಸ್ಟಾರ್ ಪ್ರಶಸ್ತಿ ಪ್ರದಾನ | ಹುಟ್ಟೂರಿನ ಗೌರವ ಕಲಾವಿದನಿಗೆ ಬಹಳ ಹೆಮ್ಮೆ ತರುವ ವಿಚಾರ -ಶಶಿಧರ ಕೋಟೆ ಅಮ್ಮನ ಪ್ರೀತಿ ಮತ್ತು ಹುಟ್ಟೂರಿನ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಒಬ್ಬ ಕಲಾವಿದನಿಗೆ ಹುಟ್ಟೂರಿನ ಗೌರವ ಬಹಳ ಹೆಮ್ಮೆ ತರುವ ವಿಚಾರ ಎಂದುಗಾನಗಂಧರ್ವ ಖ್ಯಾತಿಯ ಗಾಯಕ, ಸಂಗೀತ ನಿರ್ದೇಶಕರು ಹಾಗೂ ಚಲನಚಿತ್ರ ನಟರಾದ ಶಶಿಧರ ಕೋಟೆ ಆಶಯ ವ್ಯಕ್ತಪಡಿಸಿದ್ದಾರೆ. ಜೆಸಿಐ ಸುಳ್ಯ ಪಯಸ್ವಿನಿ ಮತ್ತು ಪಯಸ್ವಿನಿಜೇಸಿಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜೇಸಿಐ […]

Read More

ಕೊನೆಗೂ ಈಡೇರಿತು ಗ್ರಾಮಸ್ಥರ ಕನಸು: ಸುಳ್ಯದಿಂದ ತೊಡಿಕಾನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ

ಸುಳ್ಯ: ಸುಳ್ಯ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಹಾಗೂ ಪ್ರಕೃತಿ ರಮಣೀಯ ಪ್ರವಾಸಿ ತಾಣವಾದ ತೊಡಿಕಾನಕ್ಕೆ ಬಹುದಿನಗಳ ನಿರೀಕ್ಷೆಯಂತೆ ಕೆಎಸ್‌ಆರ್‌ಟಿಸಿ (KSRTC) ಸರ್ಕಾರಿ ಬಸ್ ಸಂಚಾರ ಅಧಿಕೃತವಾಗಿ ಆರಂಭಗೊಂಡಿದೆ. ಸುಮಾರು 35 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಈ ಮಾರ್ಗದಲ್ಲಿ ಮತ್ತೆ ಕೆಎಸ್‌ಆರ್‌ಟಿಸಿ ಬಸ್ ರಸ್ತೆಗಿಳಿದಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತಾದಿಗಳಲ್ಲಿ ಹರ್ಷ ಮೂಡಿಸಿದೆ. ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಟ ಚೊಚ್ಚಲ ಬಸ್‌ನಲ್ಲಿ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಪ್ರಮುಖ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಊರ […]

Read More

ಗ್ರೀನ್ ವ್ಯೂ ಮೋಡೆಲ್ ಮದ್ರಸ ಈದ್ ಮಿಲಾದ್ ವಿದ್ಯಾರ್ಥಿ ಫೆಸ್ಟ್ ಸಂಪನ್ನ ವಿಜೇತ ತಂಡಗಳಿಗೆ ಟ್ರೋಫಿ ವಿತರಣೆ

ನೆಬುಲಸ್ ತಂಡ ಪ್ರಥಮ, ತರಾಬ್ಲಸ್ ತಂಡ ದ್ವಿತೀಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧೀನ ದಲ್ಲಿರುವ ಗ್ರೀನ್ ವ್ಯೂ ಮದ್ರಸ ವಿದ್ಯಾರ್ಥಿ ಗಳ ಸಾಂಸ್ಕೃತಿಕ ಕಲಾ ಸಾಹಿತ್ಯ ಸ್ಪರ್ಧೆ ಮತ್ತು ಪ್ರದರ್ಶನ ಸಂಪನ್ನ ಗೊಂಡಿತು ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ನಡೆದ ಸಮಾರೋಪ ಸಮಾರಂಭ ದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ, ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು ಮದ್ರಸ ಮುಖ್ಯ ಶಿಕ್ಷಕ ಸಯ್ಯದ್ ಹುಸೈನ್ ಸಅದಿ ಸ್ವಾಗತಿಸಿದರುಸಮಾರೋಪ ಸಮಾರಂಭ ದಲ್ಲಿ ಅನ್ಸಾರ್ ನಿರ್ದೇಶಕ ಸಿರಾಜ್ ಫ್ಯಾನ್ಸಿ, ಗಲ್ಫ್ […]

Read More

ರಾಜ್ಯಕ್ಕೆ ಬರಗಾಲದ ಆಘಾತ: ಕಠಿಣ ದಿನಗಳ ಮುನ್ಸೂಚನೆ ನೀಡಿದ ಡಿ.ಕೆ. ಶಿವಕುಮಾರ್

ಮುಂಗಾರು ಮಳೆ ತೀವ್ರವಾಗಿ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ. ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ರೈತರಿಗೆ ಹಲವೆಡೆ ಬಿತ್ತನೆ ಕಾರ್ಯವನ್ನೇ ಕೈಗೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ನೂರಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದ್ದು, ಕೇಂದ್ರದ ಮಾರ್ಗಸೂಚಿ ಪ್ರಕಾರ ಸಮೀಕ್ಷೆ ನಡೆಸಿ […]

Read More

ಕಲ್ಲುಗುಂಡಿ ಸುನ್ನಿ ಸೆಂಟರ್: ಮೌಲಿದ್ ಮಜ್ಲಿಸ್ ಮತ್ತು ತಾಜುಲ್ ಉಲಮಾ ಅನುಸ್ಮರಣೆ

ಕಲ್ಲುಗುಂಡಿ: ಸುನ್ನಿ ಸೆಂಟರ್‌ನಲ್ಲಿ ಸೆಪ್ಟೆಂಬರ್ 13 ರಂದು ಎಸ್.ಎಸ್.ಎಫ್., ಎಸ್.ವೈ.ಎಸ್. ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯೂನಿಟ್ ಜಂಟಿ ಆಶ್ರಯದಲ್ಲಿ ಮೌಲಿದ್ ಮಜ್ಲಿಸ್, ಮಹ್ಳರತುಲ್ ಬದ್ರಿಯ್ಯ ಹಾಗೂ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮವು ಶ್ರದ್ಧಾ-ಭಕ್ತಿಗಳೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಜಲೀಲ್ ಸಖಾಫಿ ಕೊಂಡಂಗೇರಿ ಅವರು ಮಾತನಾಡಿ, “ಪ್ರವಾದಿ ಪ್ರೇಮ ಮತ್ತು ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ” ಎಂದು ಪ್ರವಾದಿ ಪ್ರೇಮ ಹಾಗೂ ಧಾರ್ಮಿಕ ಜಾಗೃತಿಯ ಕುರಿತು ನೆರೆದಿದ್ದ ಜನರಿಗೆ ಆಧ್ಯಾತ್ಮಿಕ […]

Read More

ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ನೂತನ ರಾಜ್ಯಾಧ್ಯಕ್ಷೆಯಾಗಿ ಶಾಹಿದಾ ತಸ್ನೀಮ್ ಆಯ್ಕೆ

ಬೆಂಗಳೂರು: ಸೆಪ್ಟೆಂಬರ್ 11: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಕರ್ನಾಟಕದ 2026ರ ರಾಜ್ಯ ಪ್ರತಿನಿಧಿ ಸಭೆಯು ಸೆಪ್ಟೆಂಬರ್ 13, 2026ರಂದು ಬೆಂಗಳೂರಿನ ಪಾಲನ ಭವನದಲ್ಲಿ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರ ಅದ್ಯಕ್ಷತೆಯಲ್ಲಿ ನಡೆಯಿತು .ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯದ್ಯಕ್ಷರಾದ ಅಬ್ದುಲ್ ಮಜೀದ್ ರವರು ಗಿಡಕ್ಕೆ ನೀರುಣಿಸುವ ಮೂಲಕಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣ ನೆರವೇರಿಸಿದರು. ರಾಜ್ಯ ಪ್ರತಿನಿಧಿ ಸಭೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ನಡೆಸಿದ ವಿವಿಧ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ […]

Read More

ಸುಳ್ಯ: ಡಿ.ಜೆ. ಫ್ರೆಂಡ್ಸ್ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಮಂಜುನಾಥ್ ಕೆ.ಪಿ.

ಸುಳ್ಯ (ಸೆ. 13): ‘ಡಿ.ಜೆ. ಫ್ರೆಂಡ್ಸ್ ಸುಳ್ಯ’ ಸಂಘಟನೆಯ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ್ ಕೆ.ಪಿ. ಅವರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪಟ್ಟಿ: ಸಂಘಟನೆಯ ಸಮಾಜಮುಖಿ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಮುನ್ನಡೆಸುವ ಉದ್ದೇಶದಿಂದ ಈ ನೂತನ ಸಮಿತಿಯನ್ನು ರಚಿಸಲಾಗಿದ್ದು, ನಿಯೋಜಿತ ಪದಾಧಿಕಾರಿಗಳಿಗೆ ಸಂಘಟನೆಯ ಸದಸ್ಯರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.

Read More

ಗಲ್ಫ್ ವೆಲ್ಫೇರ್ ಎಸೋಸಿಯೇಶನ್ ಪೆರಾಜೆ: ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಕ್ಶೇತ್ರದ ಹೋರಾಟಗಾರರಿಗೂ ಸನ್ಮಾನ ಮತ್ತು ಮೋಟಿವೇಷನ್ ಕ್ಲಾಸ್

ಪೆರಾಜೆ: ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಗಲ್ಫ್ ವೆಲ್‌ಫೇರ್ ಅಸೋಸಿಯೇಷನ್, ಪೆರಾಜೆ ವತಿಯಿಂದ ಸನ್ಮಾನ ಕಾರ್ಯಕ್ರಮವು ಇಂದು ಪೆರಾಜೆ ಹಮೀದ್ ಎಂ ಐ ರವರ ನಿವಾಸದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಮದರಸ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪೆರಾಜೆ ಜಮಾಅತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ […]

Read More

ಮಾಜಿ ಸಚಿವ ರಮಾನಾಥ ರೈ ಯವರಿಗೆ 75 ನೇ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸಿದ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ

6 ಬಾರಿ ಶಾಸಕರಾಗಿ, ಅರಣ್ಯ, ಗೃಹ, ಸಾರಿಗೆ ಮೊದಲಾದ ಪ್ರಮುಖ ಖಾತೆಗಳ ಸಚಿವರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಗಿ, ಕೆಪಿಸಿಸಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಜಿಲ್ಲೆಯ ಹೆಮ್ಮೆಯ ಪುತ್ರ ಶ್ರೀ ಬಿ. ರಮಾನಾಥ ರೈ ಯವರಿಗೆ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಶುಭಾಶಯ ಕೋರಿದರುಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಶಾರದಾoಭ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್ ಮೊದಲಾದವರು ಉಪಸ್ಥಿತರಿದ್ದರು

Read More

ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್‌ ಘಟಕದಿಂದ ಶಿಕ್ಷಕರ ದಿನಾಚರಣೆ; ಶಿಕ್ಷಕರು ಬದುಕಿನ ದಾರಿದೀಪ

ಸುಳ್ಯ: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಇತ್ತೀಚೆಗೆ ಕಾಲೇಜು ಷಷ್ಟ್ಯಬ್ದ ರಂಗಮಂದಿರದಲ್ಲಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರ ನಿಜವಾದ ಹೆಮ್ಮೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಪರಿಶ್ರಮ, ತ್ಯಾಗ ಮತ್ತು ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸದಾ ಗೌರವದಿಂದ ಸ್ಮರಿಸಬೇಕು. ಶಿಕ್ಷಕರ ಮೇಲಿನ ಗೌರವವು ಒಂದು ದಿನಕ್ಕೆ ಸೀಮಿತವಾಗದೆ ಸದಾ ಮುಂದುವರಿಯಬೇಕು […]

Read More