WIM ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಜಿಲ್ಲಾಧ್ಯಕ್ಷೆಯಾಗಿ ಶಿನೀರ ಬಾನು ಪುನರಾಯ್ಕೆ ಬಂಟ್ವಾಳ, ಸೆ. 2: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪ್ರತಿನಿಧಿ ಸಭೆಯು ಪಾಣೆಮಂಗಳೂರಿನ ಹೆಚ್.ಹೆಚ್. ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಜಿಲ್ಲಾಧ್ಯಕ್ಷೆ ಶಿನೀರ ಬಾನು ಧ್ವಜಾರೋಹಣ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಸಭೆಯಲ್ಲಿ 2024–2026ರ ಅವಧಿಯಲ್ಲಿ ಸಂಘಟನೆಯ ವತಿಯಿಂದ ಹಮ್ಮಿಕೊಂಡ ವಿವಿಧ ಸಾಮಾಜಿಕ, ಮಹಿಳಾ ಸಬಲೀಕರಣ ಹಾಗೂ ಜನಪರ ಚಟುವಟಿಕೆಗಳ ವರದಿಯನ್ನು ಮಂಡಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಶಿನೀರ ಬಾನು, ಮಹಿಳೆಯರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ […]

Read More

ಹನೂರು ಅಮಾನವೀಯ ಕೃತ್ಯ: ಟಿ.ಎಂ. ಶಾಹಿದ್ ತೆಕ್ಕಿಲ್ ತ್ವರಿತ ಕಾರ್ಯಾಚರಣೆಗೆ ಒಲಿದ ನ್ಯಾಯ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಮಿಕರಿಗೆ ಆಸರೆ

ಚಾಮರಾಜನಗರ: ಹನೂರಿನಲ್ಲಿ ಕನಿಷ್ಠ ವೇತನ ನೀಡದೆ ಅನ್ಯಾಯಕ್ಕೊಳಗಾಗಿದ್ದ ಬಡ ಕಾರ್ಮಿಕರಿಗೆ ಕಷ್ಟದಿಂದ ಮುಕ್ತಿ ದೊರಕಿದ್ದು, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ತ್ವರಿತ ಹಾಗೂ ಕಟ್ಟುನಿಟ್ಟಿನ ಮಧ್ಯಪ್ರವೇಶದಿಂದಾಗಿ ಕಾರ್ಮಿಕರಿಗೆ ಒಂದೇ ರಾತ್ರಿಯಲ್ಲಿ ಪೂರ್ಣ ನ್ಯಾಯ ಸಿಕ್ಕಿದೆ.ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು, ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ […]

Read More

ಕಾರ್ಮಿಕರ ಶೋಷಣೆ ತಡೆಯಲು ಕೊಳ್ಳೇಗಾಲದಲ್ಲಿ ಹೈಅಲರ್ಟ್

ಪ್ರತಿ ಗ್ರಾಮ, ವಾರ್ಡ್ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ರಚನೆಗೆ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಸೂಚನೆ ಕೊಳ್ಳೇಗಾಲ: ಕಾರ್ಮಿಕರ ರಕ್ಷಣೆ ಹಾಗೂ ಕಲ್ಯಾಣಕ್ಕಾಗಿ ನಿನ್ನೆ ಚಾಮರಾಜನಗರದ ಹನೂರಿನಲ್ಲಿ ಕಾರ್ಮಿಕರ ಸ್ಥಿತಿಗತಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಿದ ನಂತರ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ ಶಾಹೀದ್ ತೆಕ್ಕಿಲ್ ಅವರು ಕೊಳ್ಳೇಗಾಲಕ್ಕೆ ಭೇಟಿ ನೀಡಿ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.ಹನೂರಿನಲ್ಲಿ ಕಂಡುಬಂದ ಕನಿಷ್ಠ ವೇತನ ಉಲ್ಲಂಘನೆಯಂತಹ ಪ್ರಕರಣಗಳು […]

Read More

ಎಡಮಂಗಲ: ದೇವಚಳ್ಳ ಗ್ರಾಮ ಆಡಳಿತಾಧಿಕಾರಿ ಕಚೇರಿಯ ಗ್ರಾಮ ಸಹಾಯಕ ಆತ್ಮಹತ್ಯೆಗೆ ಶರಣು

ಎಡಮಂಗಲ: ದೇವಚಳ್ಳ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೀಪಕ್ ಎಂಬವರು ಎಡಮಂಗಲದ ಪುಳಿಕುಕ್ಕು ಎಂಬಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ದೀಪಕ್ ಅವರು ಪುಳಿಕುಕ್ಕು ಬಳಿಯ ತಮ್ಮ ಮನೆಯ ಸಮೀಪದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ವೇಳೆ ಅವರ ಪತ್ನಿ ಕಡಬದಲ್ಲಿರುವ ತಾಯಿ ಮನೆಗೆ ತೆರಳಿದ್ದರೆನ್ನಲಾಗಿದೆ. ಮೃತರು ಪತ್ನಿ, ಮಗಳು ಹಾಗೂ ಸಹೋದರರನ್ನು ಅಗಲಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆಗೆ […]

Read More

BMS ಹೋರಾಟಕ್ಕೆ ಯಶಸ್ಸು: ಕಾರ್ಮಿಕರ ಬೇಡಿಕೆ ಈಡೇರಿಸಲು ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ ಭರವಸೆ

ನವದೆಹಲಿ: ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಬಿಎಂಎಸ್ (ಭಾರತೀಯ ಮಜ್ದೂರು ಸಂಘ) ನಡೆಸಿದ ನಿರಂತರ ಹೋರಾಟಕ್ಕೆ ಮಹತ್ವದ ಫಲಶ್ರುತಿ ದೊರೆತಿದೆ. ಆಗಸ್ಟ್ 17ರಂದು ದೇಶಾದ್ಯಂತ ಬಿಎಂಎಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 1ರಂದು ಬಿಎಂಎಸ್ ಅಖಿಲ ಭಾರತ ನಾಯಕತ್ವವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿತು. ಈ ಸಭೆಯಲ್ಲಿ ಹೊಸ ಕಾರ್ಮಿಕ ಸಂಹಿತೆಗಳಲ್ಲಿರುವ (Labour Codes) ಕಾರ್ಮಿಕ ವಿರೋಧಿ ನಿಯಮಗಳ ತಿದ್ದುಪಡಿ ಹಾಗೂ ನೌಕರರ ಪ್ರಮುಖ […]

Read More

ಹನೂರು: ಅನ್ಯ ರಾಜ್ಯದ ಬಡ ವಿಕಲ ಚೇತನ ಮತ್ತು ವಿಶೇಷ ಚೇತನ ಕಾರ್ಮಿಕರಿಗೆ ಕೂಲಿ ನೀಡದೆ ದೌರ್ಜನ್ಯ

ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಟಿ.ಎಂ. ಶಾಹಿದ್ ತೆಕ್ಕಿಲ್ ಚಾಮರಾಜನಗರ: ಹನೂರಿನ ಅಂಬೇಡ್ಕರ್ ವಸತಿ ನಿಲಯದಲ್ಲಿದ್ದ 32 ಬಡ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದೆ, ಏಜೆಂಟ್‌ನಿಂದ ದೌರ್ಜನ್ಯಕ್ಕೊಳಗಾದ ವಿಚಾರ ತಿಳಿಯುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ತಕ್ಷಣವೇ ಚಾಮರಾಜನಗರದಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರ ಅವರ ಉಪಸ್ಥಿತಿಯಲ್ಲಿ ತುರ್ತು ಸಭೆ ನಡೆಸಿದರು.ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿ […]

Read More

ನೂತನ ಎಸ್‌.ಐ. ಉದಯ ರವಿ ಅವರಿಗೆ ಸುಳ್ಯ ತಾಲೂಕು ಆಟೋ ಚಾಲಕರ ಸಂಘದಿಂದ ಅಭಿನಂದನೆ

ಸುಳ್ಯ: ಸುಳ್ಯ ಪೊಲೀಸ್‌ ಠಾಣೆಗೆ ನೂತನವಾಗಿ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಉದಯ ರವಿ ಅವರನ್ನು ಬಿಎಂಎಸ್‌ ಸಂಯೋಜಿತ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ (ರಿ.) ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು. ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ.ಎಸ್. ಅವರು ನೂತನ ಎಸ್.ಐ. ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಬಳಿಕ ಸೋದರತೆಯ ಸಂಕೇತವಾಗಿ ರಕ್ಷಾ ಬಂಧನವನ್ನು ಕಟ್ಟಿ, ಸೌಹಾರ್ದತೆಯ ಬಾಂಧವ್ಯವನ್ನು ವ್ಯಕ್ತಪಡಿಸಿದರು. ಈ ಶುಭ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ […]

Read More

ಮಗಳ ಶಾಲಾ ಶುಲ್ಕಕ್ಕಾಗಿ ಸೀರೆ ಉಟ್ಟು ಬರಿಗಾಲಲ್ಲಿ ಓಡಿದ ತಾಯಿ: ಛಲದ ಓಟಕ್ಕೆ ಮಣಿಯಿತು ಮ್ಯಾರಥಾನ್‌!

ಅಂಬಾಜೋಗೈ (ಮಹಾರಾಷ್ಟ್ರ): ತಾಯಿಯ ಪ್ರೀತಿಗೆ ಗಡಿಗಳಿಲ್ಲ, ಆಕೆಯ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂಬುದಕ್ಕೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ತನ್ನ ಮಗಳ ಶಾಲಾ ಶುಲ್ಕವನ್ನು (School Fees) ಪಾವತಿಸಲು ಹಣವಿಲ್ಲದೆ ಕಂಗಾಲಾಗಿದ್ದ 47 ವರ್ಷದ ರಮಾಬಾಯಿ ರಣವೀರ್ ಎಂಬ ಬಡ ತಾಯಿ, 3,000 ರೂಪಾಯಿ ಬಹುಮಾನಕ್ಕಾಗಿ ಸೀರೆ ಉಟ್ಟು ಬರಿಗಾಲಿನಲ್ಲಿ ಓಡಿ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದಾರೆ. ಬೀಡ್ ಜಿಲ್ಲೆಯ ಅಂಬಾಜೋಗೈನ ಭಾರತಿಯ ಶಿಕ್ಷಣ […]

Read More

ಕೆಲಸ ಮಾಡಿದರೆ ಕೂಲಿ ಸಿಗಲೇಬೇಕು: ಹನೂರು ಘಟನೆ ಬೆನ್ನಲ್ಲೇ ಅಧಿಕಾರಿಗಳ ಸಭೆ ನಡೆಸಿದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್

ಚಾಮರಾಜನಗರ: ಹನೂರು ತಾಲೂಕಿನ ಗಂಗನ ದೊಡ್ಡಿ ಗ್ರಾಮದಲ್ಲಿ ನಡೆದ 22 ಬಡ ಕಾರ್ಮಿಕರ ಮೇಲಿನ ಅಮಾನವೀಯ ಅನ್ಯಾಯ ಹಾಗೂ ದುಡಿಸಿಕೊಂಡು ಕೂಲಿ ನೀಡದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಚಾಮರಾಜನಗರಕ್ಕೆ ಭೇಟಿ ನೀಡಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರ ಸಮ್ಮುಖದಲ್ಲಿ ನಡೆದ ಈ ಸಭೆಯ […]

Read More

ನೇತ್ರಾವತಿ ಮಾನ್ಸೂನ್ ಚಾರಣ: ‘ಜೇನುಗೂಡು’ ತಂಡದ ಆರನೇ ಹೆಜ್ಜೆಯ ಸ್ಮರಣೀಯ ಪಯಣ

ಸಂಸೆ (ಚಿಕ್ಕಮಗಳೂರು): ಪಶ್ಚಿಮ ಘಟ್ಟಗಳ ಹಸಿರು ಮಡಿಲು ಮತ್ತು ಮಾನ್ಸೂನ್ ಮಳೆಯ ಸೌಂದರ್ಯಕ್ಕೆ ಸಾಕ್ಷಿಯಾಗಲು ‘ಜೇನುಗೂಡು’ ಹವ್ಯಾಸಿ ಚಾರಣಿಗರ ತಂಡವು ನೇತ್ರಾವತಿ ಮಾನ್ಸೂನ್ ಚಾರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ತಂಡದ ಆರನೇ ಅಧ್ಯಾಯದ ಯಶಸ್ವಿ ಪಯಣವಾಗಿದೆ. ಸಂಸೆಯ ಪ್ರಶಾಂತ ವಾತಾವರಣ: ನಗರದ ಗದ್ದಲದಿಂದ ದೂರವಾದ ಈ ಚಾರಣಕ್ಕಾಗಿ ತಂಡವು ಕಳಸ ಸಮೀಪದ ‘ಸಂಸೆ’ ಗ್ರಾಮದ ಮೌಂಟ್ ಹೆವನ್ ಹೋಂ ಸ್ಟೇನಲ್ಲಿ ತಂಗಿತ್ತು. ಕೃತಕ ಸದ್ದುಗಳಿಲ್ಲದೆ, ಕೇವಲ ಮಳೆಹನಿಗಳ ನಾದ, ಜೀರುಂಡೆಗಳ ಶಬ್ದ, ಹಕ್ಕಿಗಳ ಕಲರವ ಹಾಗೂ ಹೊಸತಾಗಿ […]

Read More