ರಾಷ್ಟ್ರೀಯ EBSB ಶಿಬಿರಕ್ಕೆ ಎನ್.ಎಂ.ಸಿಯ ಇಬ್ಬರು ಎನ್‌ಸಿಸಿ ಕೆಡೆಟ್‌ಗಳ ಆಯ್ಕೆ

ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನ ತೃತೀಯ ಬಿಬಿಎ ವಿದ್ಯಾರ್ಥಿ CPL ಗೌರವ್ ಮತ್ತು ತೃತೀಯ ಬಿಕಾಂ ವಿದ್ಯಾರ್ಥಿ CPL ವಿಕಾಸ್ ಎನ್. ಅವರು ಒಡಿಶಾ ರಾಜ್ಯದ ರೂರ್ಕೆಲಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಏಕ ಭಾರತ ಶ್ರೇಷ್ಠ ಭಾರತ (EBSB) ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ದೇಶದ ವಿವಿಧ ರಾಜ್ಯಗಳ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸುತ್ತಿರುವ ಈ ಶಿಬಿರವು ರಾಷ್ಟ್ರೀಯ ಏಕತೆ, ಸಾಂಸ್ಕೃತಿಕ ವಿನಿಮಯ ಹಾಗೂ ಪರಸ್ಪರ ಸಹಕಾರದ ಮನೋಭಾವವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಕಾಲೇಜಿನ ಎನ್‌ಸಿಸಿ ಘಟಕದ ಮುಖ್ಯಸ್ಥರಾದ ಕ್ಯಾಪ್ಟನ್ […]

Read More

ರಾಜ್ಯಮಟ್ಟದ ದಸರಾ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗೆ ತೃತೀಯ ಸ್ಥಾನ

ಎನ್.ಎಂ.ಸಿ, ಸುಳ್ಯ: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿ ಅಭಿನಂದನ್ ಅವರು 75 ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಕ್ಯಾಪ್ಟನ್ ಸೀತಾರಾಮ ಎಂ.ಡಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಮಾಜಿ ರಾಷ್ಟ್ರೀಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್ ಕೋಚ್ ರಮೇಶ್ ಎ. ಅವರ ತರಬೇತಿಯಲ್ಲಿ ಅಭಿನಂದನ್ ಈ ಸಾಧನೆ ಮಾಡಿದ್ದಾರೆ. ಅಭಿನಂದನ್ ಪ್ರಸ್ತುತ ಕಾಲೇಜಿನ ವಿದ್ಯಾರ್ಥಿ […]

Read More

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದಸೆಲ್ಯೂಟ್ ದಿ ಸೈಲೆಂಟ್ ಸ್ಟಾ‌ರ್ ಪ್ರಶಸ್ತಿ ಪ್ರದಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮ

ಜೇಸಿಐ ಸುಳ್ಯ ಪಯಸ್ವಿಯು ಸಾರ್ವಜನಿಕರಿಗೆ ಸ್ಪಂದನೆಯಾಗುವ ಕೆಲಸಕಾರ್ಯಗಳಿಂದ ಗುರುತಿಸಿದೆ- ರಾಜಣ್ಣ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಕ್ಟೋಬರ್ ತಿಂಗಳ ಸೆಲ್ಯೂಟ್ ದಿ ಸೈಲೆಂಟ್ ಸ್ಟಾ‌ರ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನುಅ. 16ರಂದು ಸುಳ್ಯದ ಶ್ರೀ ರಾಂ ಪೇಟೆಯಲ್ಲಿರುವ ಕಾನತ್ತೀಲ ಕಾಂಪ್ಲೆಕ್ಸ್ ನ ದೇವಮ್ಮ ಸಭಾಂಗಣದಲ್ಲಿ ನಡೆಯಿತು. ವಿಶ್ವ ಅಂಚೆ ದಿನದ ಅಂಗವಾಗಿ ಅಂಚೆಗಳನ್ನು ಮನೆ ಮನೆಗೆ ತಲುಪಿಸುತ್ತಾ, ನಿಷ್ಠೆ ಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯದ ಕುರುಂಜಿಭಾಗ್ ನ ಪೋಸ್ಟ್ ವುಮನ್ ಶ್ರೀಮತಿ ಅನುರಾಧ ಟಿ ಯವರಿಗೆಸೆಲ್ಯೂಟ್ ದಿ ಸೈಲೆಂಟ್ […]

Read More

ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ವಯೋಜನ, ಯುವಜನ ಆಯೋಗ ಸ್ಥಾಪನೆಗೆ ಸಲಹೆ: ಶಾಹಿದ್ ತೆಕ್ಕಿಲ್

ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಶಾಹಿದ್ ತೆಕ್ಕಿಲ್ ಅವರು ರಾಜ್ಯದ ಯುವಕರು ಹಾಗೂ ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ‘ವಯೋಜನ ಆಯೋಗ’ ಮತ್ತು ‘ಯುವಜನ ಆಯೋಗ’ಗಳನ್ನು ಸ್ಥಾಪಿಸಬೇಕು ಎಂದು ಬಲವಾದ ಸಲಹೆ ನೀಡಿದ್ದಾರೆ. ದಿನಬಳಕೆಯ ವಸ್ತುಗಳು, ಅಡುಗೆ ಅನಿಲ, ಆಹಾರ ಉತ್ಪನ್ನಗಳು ಹಾಗೂ ಬೇಳೆಕಾಳುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅವರ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದು ಅತ್ಯಗತ್ಯವಾಗಿದೆ […]

Read More

ಸುಳ್ಯ ವಿದ್ಯಾನಗರದಲ್ಲಿ ‘ಪಯಸ್ವಿನಿ ಬೈಕ್ ಗ್ಯಾರೇಜ್’ ಶುಭಾರಂಭ

ಸುಳ್ಯ: ಹಳೆಗೇಟು ವಿದ್ಯಾನಗರದ (ಗುಂಡ್ಯಡ್ಕ) ಬಳಿ ದಿನಾಂಕ 14-10-2026ನೇ ಬುಧವಾರದಂದು ‘ಪಯಸ್ವಿನಿ ಬೈಕ್ ಗ್ಯಾರೇಜ್’ ನೂತನ ಗ್ಯಾರೇಜ್ ಶುಭಾರಂಭಗೊಂಡಿತು. ಹೋಂಡಾ ಬಿಎಸ್ 6 ಸೇರಿದಂತೆ ಎಲ್ಲಾ ಪ್ರಮುಖ ಕಂಪನಿಗಳ ದ್ವಿಚಕ್ರ ವಾಹನಗಳ ಸರ್ವೀಸ್, ಇಂಜಿನ್ ರಿಪೇರಿ, ಬ್ರೇಕ್ ರಿಪೇರಿ, ಎಲೆಕ್ಟ್ರಿಕಲ್ ಕೆಲಸ ಮುಂತಾದ ಎಲ್ಲಾ ರಿಪೇರಿ ಕೆಲಸಗಳು ಇಲ್ಲಿ ಗ್ರಾಹಕರಿಗೆ ಲಭ್ಯವಿರಲಿವೆ. ಬಿಎಸ್6 ಗ್ಯಾರೇಜ್‌ನ ಅನುಭವಿ ತಜ್ಞರು, . ಹೋಂಡಾ ಸಂಸ್ಥೆಯಲ್ಲಿ ಸುಮಾರು 10 ವರುಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದು” ಎಂದು ತಮ್ಮ ದೀರ್ಘಕಾಲದ ಅನುಭವವನ್ನು ಹಂಚಿಕೊಂಡಿದ್ದು, […]

Read More

ಸುಳ್ಯದಲ್ಲಿ ‘ಸ್ಪಾರ್ಕಲ್ ಓರ್ನಮೆಂಟ್ಸ್’ ನೂತನ ಆಭರಣ ಮಳಿಗೆ ಅದ್ದೂರಿ ಉದ್ಘಾಟನೆ!

ಸುಳ್ಯ: ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಇರುವ ಸುಳ್ಯ ಸೆಂಟರ್ ಕಾಂಪ್ಲೆಕ್ಸ್‌ನ 3ನೇ ಮಹಡಿಯಲ್ಲಿ ನೂತನವಾಗಿ  ‘ಸ್ಪಾರ್ಕಲ್ ಓರ್ನಮೆಂಟ್ಸ್’ (Sparkle Ornaments) ಆಭರಣ ಮಳೆಯು 2026ರ ಅಕ್ಟೋಬರ್ 15ರಂದು ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು. ಮಳಿಗೆಯ ಮಾಲೀಕರಾದ ಹರ್ಷಿತ್ ರಾವ್ ಮತ್ತು ಅಖಿಲ್ ರಾವ್ ಅವರ ತಂದೆಯಂದಿರಾದ ಬಾಬಣ್ಣ ಕೆ. ಹಾಗೂ ಮೋಹನ್ ರಾವ್ ಅವರು ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ನೂತನ ಮಳೆಯನ್ನು ಲೋಕಾರ್ಪಣೆಗೊಳಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ ನಾರಾಯಣ ಕೆಕಡ್ಕ, […]

Read More

ಹಾರುವ ಕಾರಿನ ಯುಗಾರಂಭ: ಗಾಳಿಯಲ್ಲಿ ತೇಲಿ, ತಲೆಕೆಳಗಾಗಿ ಚಲಿಸಿ ಅಚ್ಚರಿ ಮೂಡಿಸಿದ ಹೊಸ ‘ಟೆಸ್ಲಾ ರೋಡ್‌ಸ್ಟರ್’!

ಕ್ಯಾಲಿಫೋರ್ನಿಯಾ: ಆಟೋಮೊಬೈಲ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಾ, ಇಲಾನ್ ಮಸ್ಕ್ ಒಡೆತನದ ಪ್ರಸಿದ್ಧ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ‘ಟೆಸ್ಲಾ’ ತನ್ನ ಅತ್ಯಂತ ನಿರೀಕ್ಷಿತ ಹೊಸ ‘ರೋಡ್‌ಸ್ಟರ್’ (Tesla Roadster) ಕಾರಿನ ಅದ್ಭುತ ಪ್ರದರ್ಶನದ ಮೂಲಕ ಜಗತ್ತನ್ನು ಬೆರಗುಗೊಳಿಸಿದೆ. ವಿಜ್ಞಾನ ಕಥೆಗಳಲ್ಲಿ ಮಾತ್ರ ಕೇಳಿದ್ದ ‘ಹಾರುವ ಕಾರು’ (Flying Car) ಪರಿಕಲ್ಪನೆ ಈಗ ನೈಜರೂಪ ಪಡೆದುಕೊಳ್ಳುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್ ತಮ್ಮ ಅಧಿಕೃತ ‘ಎಕ್ಸ್’ (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಕಾರಿನ […]

Read More

ದಸರಾ ರಜೆಯ ಸದುಪಯೋಗ: ಪೆರಾಜೆಯ ಪುಟ್ಟ ಬಾಲಕರ ಅದ್ಭುತ ಸಾಹಸ! ಮೊಬೈಲ್ ಬಿಟ್ಟು ಗುಪ್ಪಿ ಮೀನು ಮಾರಾಟದಲ್ಲಿ ಬ್ಯುಸಿಯಾದ ಕಸಿನ್ಸ್! 🐟✨

ಶಾಲೆಗೆ ದಸರಾ ರಜೆ ಸಿಕ್ಕಿದೆ ಅಂದರೆ ಸಾಕು, ಇಂದಿನ ಮಕ್ಕಳು ಟಿವಿ, ಮೊಬೈಲ್ ಗೇಮ್‌ಗಳಲ್ಲೇ ಕಾಲ ಕಳೆಯುತ್ತಾರೆ. ಆದರೆ ಇಲ್ಲೊಬ್ಬರು ಪುಟ್ಟ ಬಾಲಕರು ರಜೆಯ ದಿನಗಳನ್ನು ಅತ್ಯಂತ ಸೃಜನಶೀಲವಾಗಿ ಬಳಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ! ಪೆರಾಜೆಯಲ್ಲಿ ಇಬ್ಬರು ಮಕ್ಕಳು (ಕಸಿನ್ಸ್) ತಮ್ಮ ಮನೆಯಲ್ಲೇ ಆಕರ್ಷಕ ಗುಪ್ಪಿ ಮೀನುಗಳನ್ನು (Guppy Fish) ಸಾಕಣೆ ಮಾಡಿ, ಈ ದಸರಾ ರಜೆಯಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಸ್ವಾವಲಂಬನೆಯ ಪಾಠ ಕಲಿತಿರುವ ಇವರ ಉದ್ಯಮಶೀಲತೆ ನಿಜಕ್ಕೂ ಮೆಚ್ಚುವಂತದ್ದು. 👏 ಸಣ್ಣ ವಯಸ್ಸಿನಲ್ಲಿ […]

Read More

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ನಾಳೆ ‘ವಿಶ್ವ ಅಂಚೆ ದಿನ’ದ ಪ್ರಯುಕ್ತ ‘ಸಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ಪ್ರದಾನ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ (ರ.) ಇದರ ವತಿಯಿಂದ ವಿಶ್ವ ಅಂಚೆ ದಿನದ ಪ್ರಯುಕ್ತ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರನ್ನು ಗೌರವಿಸುವ ಹಾಗೂ ‘ಸಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಾಳೆ ಅಂದರೆ ಅಕ್ಟೋಬರ್ 16, 2026ರ ಸಂಜೆ 6:00 ಗಂಟೆಯಿಂದ ಸುಳ್ಯದ ಶ್ರೀರಾಮ್ ಪೇಟೆಯ ಕಾನತ್ತಿಲ ಕಾಂಪ್ಲೆಕ್ಸ್‌ನಲ್ಲಿರುವ ದೇವಮ್ಮ ಸಭಾಂಗಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಪ್ರಮುಖ ಗೌರವಾರ್ಪಣೆಗಳು: ಅತಿಥಿಗಳು ಹಾಗೂ ನೇತೃತ್ವ: ಕಾರ್ಯಕ್ರಮದ ವಿವರವಾದ ಕಾರ್ಯಸೂಚಿ: ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ […]

Read More

ಸುಳ್ಯ: ‘ಕರಾವಳಿ ಮೊಬೈಲ್ಸ್’ನಲ್ಲಿ ದಸರಾ- ದೀಪಾವಳಿ ಹಬ್ಬದ ವಿಶೇಷ ‘ಫೆಸ್ಟಿವಲ್ ಸೇಲ್’ ಹಾಗೂ ಮೆಗಾ ಎಕ್ಸ್ಚೇಂಜ್ ಆಫರ್!

ಸುಳ್ಯ: ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸುಳ್ಯದ ‘ಕರಾವಳಿ ಮೊಬೈಲ್ಸ್’ (Karavali Mobiles) ವತಿಯಿಂದ ಗ್ರಾಹಕರಿಗಾಗಿ ವಿಶೇಷ ‘ಫೆಸ್ಟಿವಲ್ ಸೇಲ್’ (Festival Sale) ಹಾಗೂ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ. ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಗ್ರಾಹಕರು ಅತ್ಯುತ್ತಮ ಕೊಡುಗೆಗಳೊಂದಿಗೆ ಹೊಸ ಗ್ಯಾಜೆಟ್‌ಗಳನ್ನು ಖರೀದಿಸಬಹುದಾಗಿದೆ. ಪ್ರಮುಖ ಆಕರ್ಷಣೆಗಳು ಮತ್ತು ಕೊಡುಗೆಗಳು: ಕ್ಷಿಪ್ರ ಮೊಬೈಲ್ ರಿಪೇರಿ ಸೇವೆ (Mobile Quick Service): ಡಿಸ್ಪ್ಲೇ ಹಾನಿ (Display Damage), ಬ್ಯಾಟರಿ ಸಮಸ್ಯೆ (Battery Issues), ಚಾರ್ಜಿಂಗ್ ಸಮಸ್ಯೆ (Charging Problems) ಹಾಗೂ […]

Read More