ಜೇಸಿಐ ಭಾರತ ವಲಯ 15ರ 2027ನೇ ಸಾಲಿನ ಉಪಾಧ್ಯಕ್ಷೆಯಾಗಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಆಯ್ಕೆ

News

ಮಂಗಳೂರು: 2027ನೇ ಸಾಲಿನ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರು ಅತ್ಯಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ವಲಯ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ.

ವಲಯಾಡಳಿತ ಮಂಡಳಿಯಲ್ಲಿ ಈ ಬಾರಿ ಒಟ್ಟು ಐದು ಉಪಾಧ್ಯಕ್ಷ ಹುದ್ದೆಗಳಿದ್ದು, ಇದಕ್ಕಾಗಿ ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ಹಾಗೂ ಮತದಾನ ಪ್ರಕ್ರಿಯೆಯ ಬಳಿಕ ಮೂರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಎರಡು ಹುದ್ದೆಗಳಿಗೆ ಮೂರು ಅಭ್ಯರ್ಥಿಗಳ ನಡುವೆ ನಡೆದ ಮತದಾನ ಪ್ರಕ್ರಿಯೆಯು ನವೆಂಬರ್ 1ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಈ ಚುನಾವಣೆಯಲ್ಲಿ ವಲಯದ ಎಲ್ಲಾ ಘಟಕಾಧ್ಯಕ್ಷರುಗಳು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಬಹುಮತ ಪಡೆದು ವಿಜಯಶಾಲಿಯಾದರು.

ವಲಯ ಸಮ್ಮೇಳನ ‘ಆರ್ಯ-2026’ ಯಶಸ್ಸು

ಅಕ್ಟೋಬರ್ 30 ರಿಂದ ನವೆಂಬರ್ 1ರವರೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ಜೇಸಿಐ ಭಾರತ ವಲಯ 15ರ ವಲಯ ಸಮ್ಮೇಳನ ‘ಆರ್ಯ-2026’ ವಿಜೃಂಭಣೆಯಿಂದ ಜರುಗಿತು. ಈ ಸಮಾವೇಶದ ಸಂದರ್ಭದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಜೇಸಿಐ ಭಾರತದ ನ್ಯಾಷನಲ್ ಎಕ್ಸಿಕ್ಯೂಟಿವ್ ಆಫೀಸರ್ ಜೇಸಿ ಈಶಾನ್ ಅಗರ್ವಾಲ್, ಜೇಸಿಐ ಭಾರತ ವಲಯ 15ರ ನಾಮಿನೇಷನ್ ಕಮಿಟಿ ಚೇರ್ಮನ್ ಜೆ.ಎಫ್.ಎಸ್. ಅಭಿಲಾಷ್ ಬಿ.ಎ. ಕುಂದಾಪುರ, ಹಾಗೂ ಸಮಿತಿ ಸದಸ್ಯರಾದ ಪೂರ್ವ ವಲಯಾಧ್ಯಕ್ಷರಾದ ಎಡ್ವಕೇಟ್ ಗಿರೀಶ್ ಎಸ್.ಪಿ. ಕಾಪು, ಜೇಸಿ ಪುರುಷೋತ್ತಮ್ ಶೆಟ್ಟಿ ಪುತ್ತೂರು ಮತ್ತು ಜೇಸಿ ರಾಯನ್ ಉದಯನ್ ಕ್ರಾಸ್ತ ಅವರುಗಳು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾಯಕಿ

ಪ್ರಖ್ಯಾತ ಲೇಖಕಿಯಾಗಿ ಹಾಗೂ ಸಾಹಿತ್ಯ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲತಾಶ್ರೀಯವರು, ಸಾಮಾಜಿಕ ಮುಖಂಡರಾದ ಸುಪ್ರೀತ್ ಮೋಂಟಡ್ಕ ಅವರ ಧರ್ಮಪತ್ನಿಯಾಗಿದ್ದಾರೆ. ಇವರ ಈ ಮಹತ್ವದ ಸಾಧನೆಗೆ ಜೇಸಿಐ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಜೇಸಿಐ ಸಂಸ್ಥೆಯ ಇತಿಹಾಸ ಮತ್ತು ವಿವರಣೆ

Leave a Reply

Your email address will not be published. Required fields are marked *