ಬೆಳ್ಳಾರೆ: ‘ಇವ್ನಿಂಗ್ ಕ್ರಿಕೆಟರ್ಸ್ ಪಂಜಿಗರ್’ ವತಿಯಿಂದ ಆಯೋಜಿಸಲಾಗಿದ್ದ ಆರು ತಂಡಗಳ ಸೌಹಾರ್ದಯುತ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಕೂಟವು ಅಯ್ಯನಕಟ್ಟೆ ಶಾಲಾ ಮೈದಾನದಲ್ಲಿ ನ. ೦೧ ರಂದು ಅತ್ಯಂತ ಸಡಗರದಿಂದ ಸಂಪೂರ್ಣಗೊಂಡಿತು.

ರೋಚಕವಾಗಿ ಸಾಗಿದ ಈ ಪಂದ್ಯಾಕೂಟದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಟೀಮ್ ಕಳಂಜ ವಿಜೇತರಾಗಿ ಹೊರಹೊಮ್ಮಿದರೆ, ಟೀಮ್ ಅಗಲ್ಪಾಡಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇನ್ನು ವೈಯಕ್ತಿಕ ವಿಭಾಗದಲ್ಲಿ ಮಿಂಚಿದ ನೌಷದ್ ಬಾಳಿಲ ಅತ್ಯುತ್ತಮ ಆಲ್ರೌಂಡರ್ ಗೌರವ ಪಡೆದರೆ, ಸಿದ್ಧಿಕ್ ಬಾಳಿಲ ಅತ್ಯುತ್ತಮ ಬ್ಯಾಟ್ಸ್ಮನ್ ಹಾಗೂ ಫಾರೂಕ್ ಬಾಳಿಲ ಅತ್ಯುತ್ತಮ ಬೌಲರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕ್ರೀಡಾಕೂಟದಲ್ಲಿ ವಿಶೇಷ ಗಮನ ಸೆಳೆದರು.
