ಸುಳ್ಯ: ಯುವ ಪೀಳಿಗೆಯ ಟ್ರೆಂಡಿ ಫ್ಯಾಷನ್‌ನೊಂದಿಗೆ ‘ಕಲ್ಟ್’ ಮೆನ್ಸ್ ಡ್ರೆಸ್ ಶಾಪ್ ಶುಭಾರಂಭ

News

ಸುಳ್ಯ: ನವಯುಗದ ಯುವಕರ ಶೈಲಿಗೆ ತಕ್ಕಂತೆ ಮಾಡರ್ನ್ ಹಾಗೂ ಟ್ರೆಂಡಿ ಉಡುಪುಗಳ ಬೃಹತ್ ಸಂಗ್ರಹದೊಂದಿಗೆ, ನಗರದ ಕಟ್ಟೇಕಾರ್ ಮೆಗಾ ಶಾಪ್ ಎದುರು ನೂತನವಾಗಿ ಆರಂಭಗೊಂಡಿರುವ ಪುರುಷರ ಉಡುಪುಗಳ ಮಳಿಗೆ ‘ಕಲ್ಟ್’ (Cult) ಮೆನ್ಸ್ ಡ್ರೆಸ್ ಶಾಪ್ ಸೆ.04 ರಂದು ಶುಭಾರಂಭಗೊಂಡಿತು.
ಯೂತ್ ಹಾಗೂ ನ್ಯೂ ಜನರೇಷನ್ ಶೈಲಿಯ ಮಾಡೆಲ್ ಡ್ರೆಸ್‌ಗಳ ಅಪಾರ ಸಂಗ್ರಹವನ್ನು ಹೊಂದಿರುವ ಈ ಮಳಿಗೆಗೆ ಕುಞಿಕೋಯ ತಂಙಲ್ ದುಆ ನೆರವೇರಿಸಿ ಶುಭ ಹಾರೈಸಿದರು. ಗಾಂಧಿನಗರ ಮುಹಿಯಿದ್ದೀನ್ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಅಶ್ರಫ್ ಕಾಮಿಲ್ ಸಖಾಫಿ ಉದ್ಘಾಟನೆ ನೆರವೇರಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಳ್ಯ ನಗರಾಭಿವೃದ್ಧಿ ಯೋಜನಾ ಅಧ್ಯಕ್ಷ ಮುಸ್ತಫಾ ಕೆ.ಎಂ (ಸೂಡಾ), ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಮುಹಿಯಿದ್ದೀನ್ ಜುಮಾ ಮಸೀದಿ ಗಾಂಧಿನಗರ ಅಧ್ಯಕ್ಷ ಹಾಜಿ ಮೊಹಮ್ಮದ್, ಮಾಜಿ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್, ಎಸ್.ಡಿ.ಎಂ.ಸಿ ಶಾಂತಿನಗರ ಅಧ್ಯಕ್ಷ ನಝೀರ್ ಶಾಂತಿನಗರ, ಅನ್ಸಾರುಲ್ ಮುಸ್ಲಿಂ ಅಸೋಸಿಯೇಷನ್ ಸುಳ್ಯದ ಅಧ್ಯಕ್ಷ ಕೆ.ಬಿ. ಇಬ್ರಾಹಿಂ, ಉದ್ಯಮಿ ಫೈಝಲ್ ಕಟ್ಟೇಕಾರ್, ಸಾಲಿ ಪೈಚಾರ್ ಆಗಮಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಫ್ರೀಝ್, ಸಿಯಾ ಕುಂಬರ್ಚೋಡು, ಹಾಶಿರ್, ಸುನೈಲ್, ಸೇರಿದಂತೆ ಹಲವು ಸೋಷಿಯಲ್‌ ಮೀಡಿಯಾ ಇನ್ಫುಲ್ಯನ್ಸರ್ ಗಣ್ಯರು ಹಾಗೂ ಸ್ಥಳೀಯ ಯುವಕರು ಭಾಗವಹಿಸಿದ್ದರು.
ಯುವಜನರ ಇಷ್ಟದ ಮಾಡರ್ನ್ ಫ್ಯಾಷನ್ ಹಾಗೂ ಕ್ವಾಲಿಟಿ ಉಡುಪುಗಳು ಒಂದೇ ಸೂರಿನಡಿ ಲಭ್ಯವಿರುವುದು ಈ ಮಳಿಗೆಯ ವಿಶೇಷತೆಯಾಗಿದೆ ಎಂದು ಮಾಲಕರು ತಿಳಿಸಿದೆ.

Leave a Reply

Your email address will not be published. Required fields are marked *