ಸುಳ್ಯ: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಪವಿತ್ರ ಜನ್ಮದಿನಾಚರಣೆಯ (ಈದ್ ಮಿಲಾದ್) ಅಂಗವಾಗಿ, ತಾಲೂಕು ಮಿಲಾದ್ ಸಮಿತಿಯ ನೂತನ ಕಚೇರಿಯನ್ನು ಗಾಂಧಿನಗರದ ಜಿಟಿಸಿ ಮೆಟ್ರೋ ಬನಾತ್ ಟವರ್‌ನಲ್ಲಿ ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಈದ್ ಮಿಲಾದ್ ಅನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಸಮಿತಿಯನ್ನು ರಚಿಸಿಕೊಳ್ಳಲಾಗಿದ್ದು, ಇದರ ಅಂಗವಾಗಿ ಸೆಪ್ಟೆಂಬರ್ 11 ಶುಕ್ರವಾರ ಸಂಜೆ 4 ಗಂಟೆಗೆ ಸುಳ್ಯದಲ್ಲಿ ಬೃಹತ್ ಇಸ್ಲಾಮಿಕ್ ಸಾಂಸ್ಕೃತಿಕ ಕಲಾ ವೈಭವದ ಮೆರವಣಿಗೆ ಹಾಗೂ ‘ಇಷ್ಕೆ ಮದೀನಾ’ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫಾ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ಅವರು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು. ಯುವ ಉದ್ಯಮಿ ಫೈಝಲ್ ಕಟ್ಟೆಕ್ಕಾರ್ಸ್ ಸ್ಕ್ಯಾನರ್‌ಗೆ ಚಾಲನೆ ನೀಡಿದರು. ಅನ್ಸಾರ್ ಸಂಸ್ಥೆಯ ಕಾರ್ಯದರ್ಶಿ ಬಷೀರ್ ಸಪ್ನಾ ಮುಖ್ಯ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಮಿಲಾದ್ ಸಮಿತಿ ಅಧ್ಯಕ್ಷ ಮುನಾಫರ್ ನಾವೂರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ. ಎಸ್. ಉಮ್ಮರ್, ರಶೀದ್ ಜಟ್ಟಿಪ್ಪಳ್ಳ, ಇಕ್ಬಾಲ್ ಸುಣ್ಣಮೂಲೆ, ಖಲಂದರ್ ಎಲಿಮಲೆ, ಅಬ್ದುಲ್ ಕಲಾಮ್ ಬೀಜಕೊಚ್ಚಿ, ನವಾಜ್ ಪಂಡಿತ್ ಜಯನಗರ, ರಶೀದ್ ಅಡ್ವೋಕೇಟ್, ಮನ್ಸೂರ್ ಮೆಟ್ರೋ, ಅಚ್ರು ಕಲ್ಲುಮುಟ್ಲು, ಮುಸ್ತಫಾ ಪಂಡಿತ್, ಶರೀಫ್ ಕಂಠಿ, ತಾಬಿ ಚೋಯ್ಸ್, ಸುಹೈಲ್ ವೆಜ್, ಹನೀಫ್ ಕಳ್ಳಪಳ್ಳಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಉನೈಸ್ ಪೆರಾಜೆ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.
