ಅಡ್ಕಾರ್ ಮಾವಿನಕಟ್ಟೆ ಬಳಿ ಅಪಘಾತ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಸುಳ್ಯ: ಕಾರಿಗೆ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ಅದನ್ನು ತಪ್ಪಿಸಲು ಹೋಗಿ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಅಡ್ಕಾರ್ ಮಾವಿನಕಟ್ಟೆ ಬಳಿ ನಡೆದಿದೆ. ಘಟನೆಯ ವಿವರ: ಅಡ್ಕಾರ್ ಮಾವಿನಕಟ್ಟೆ ಬಳಿ ಕಾರಿಗೆ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ಅದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಪೆರ್ಲಂಪಾಡಿಯ ತೀರ್ಥ ರಾಜ್ ಅವರ ಎಡದ ಕಾಲು ಮುರಿದು […]

Read More

ಗಾಂಧಿನಗರ: ಹಸು ಹಾಗೂ ಕಾರ್ ನಡುವೆ ಅಪಘಾತ: ಕಾರಿನ‌ ಮುಂಭಾಗ ಜಖಂ

ಗಾಂಧಿನಗರದ ಹೆಚ್.ಪಿ. ಪೆಟ್ರೋಲ್ ಬಂಕ್ ಹತ್ತಿರ ಅನಿರೀಕ್ಷಿತವಾಗಿ ಹಸುವೊಂದು ಅಡ್ಡ ಬಂದಿದ್ದರಿಂದ ವ್ಯಾಗನಾರ್ (WagonR) ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನ ಮುಂಭಾಗ ಸ್ವಲ್ಪ ಮಟ್ಟಿಗೆ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಹಾಗೂ ಹಸುವಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ,  ಎಂದು ತಿಳಿದುಬಂದಿದೆ.

Read More

ಅಡ್ಕಾರ್: ಭೀಕರ ಅಪಘಾತ; ಪಾದಚಾರಿ ಮೇಲೆ ಹರಿದ ಗ್ಯಾಸ್ ಲಾರಿ, ಸ್ಥಳದಲ್ಲೇ ಸಾವು

ಅಡ್ಕಾರ್ ಗೋಡಂಬಿ ಕಾರ್ಖಾನೆ ಸಮೀಪ ಬಸ್‌ನಿಂದ ಇಳಿದು ರಸ್ತೆ ದಾಟಲು ಯತ್ನಿಸುತ್ತಿದ್ದ ಪಾದಚಾರಿಯೊಬ್ಬರ ಮೇಲೆ ಗ್ಯಾಸ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಅಡ್ಕಾರ್ ನಲ್ಲಿ  ಬಸ್‌ನಿಂದ ಕೆಳಗೆ ಇಳಿದ ವ್ಯಕ್ತಿ ರಸ್ತೆ ದಾಟುತ್ತಿದ್ದ ವೇಳೆ ಗ್ಯಾಸ್ ಲಾರಿ ಅವರ ಮೇಲೆ ಹಾಯ್ದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಅವರು ಸ್ಥಳದಲ್ಲೇ ಕೊನೆಯೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಲೈಫ್‌ಕೇರ್ ಆಂಬ್ಯುಲೆನ್ಸ್ ಸಿಬ್ಬಂದಿಗಳಾದ ರಫೀಕ್ ಮತ್ತು ಪುನೀತ್ ಸಂಕೇಶ್ ಅವರು ಧಾವಿಸಿ, ಮೃತದೇಹವನ್ನು […]

Read More

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉದ್ಯಮಿ ರಾಮಕೃಷ್ಣ ಆಲಂಕಲ್ಯ ನಿಧನ

ಬೊಳುಬೈಲು: ಬೊಳುಬೈಲಿನಲ್ಲಿ ಸಂಭವಿಸಿದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಸುಳ್ಯದ ತರಕಾರಿ ಉದ್ಯಮಿ ರಾಮಕೃಷ್ಣ ಆಲಂಕಲ್ಯರು (65) ಅವರು ಸೆಪ್ಟೆಂಬರ್ 19ರ ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸೆಪ್ಟೆಂಬರ್ 17ರಂದು ಸಂಜೆ ಸುಳ್ಯದಿಂದ ಮಂಡೆಕೋಲಿನಲ್ಲಿರುವ ತಮ್ಮ ಕೃಷಿ ತೋಟಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗೊಂಡ ಅವರನ್ನು ಸುಳ್ಯ ಆಸ್ಪತ್ರೆಗೆ, ಬಳಿಕ ವೈದ್ಯರ ಸಲಹೆಯಂತೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಲೆಗೆ ಗಾಯಗೊಂಡಿದ್ದರಿಂದ ಅಂದೇ ರಾತ್ರಿ ಮತ್ತೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ […]

Read More

ಅರಂತೋಡು ಕುಲ್ಚಾರ್ ಸೇತುವೆ ಬಳಿ ಸರಣಿ ಅಪಘಾತ: ಬಸ್, ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಸಮೀಪದ ಬಿಳಿಯಾರು ಸೇತುವೆ ಬಳಿ ಕೆಎಸ್‌ಆರ್‌ಟಿಸಿ ಬಸ್, ಕಾರು ಹಾಗೂ ಸ್ಕೂಟರ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಘಟನೆಯ ವಿವರ: ಸುಳ್ಯದಿಂದ ಅರಂತೋಡು ಕಡೆಗೆ ಸ್ಕೂಟರ್ ಸಂಚರಿಸುತ್ತಿದ್ದು, ಅದರ ಹಿಂದಿನಿಂದ ಬರುತ್ತಿದ್ದ ಕಾರು ಸ್ಕೂಟಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿದೆ. ಈ ವೇಳೆ ಕೊಯಿನಾಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕೂಡಲೇ ಬ್ರೇಕ್ ಹಾಕಿದ ಪರಿಣಾಮ, ಬಸ್ ಬಲಗಡೆಗೆ ತಿರುಗಿ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದೇ ಸಂದರ್ಭದಲ್ಲಿ […]

Read More
img 20260723 095942

ಅರಂತೋಡು: ರಕ್ತಸಿಕ್ತವಾಗುತ್ತಿದೆ ಹೆದ್ದಾರಿ! ಸರಣಿ ಅಪಘಾತಗಳಿಗೆ ಬ್ರೇಕ್ ಹಾಕುವವರು ಯಾರು

ಸುಳ್ಯ: ಮಣಿ-ಮೈಸೂರು ಹೆದ್ದಾರಿಯ ಅರಂತೋಡು ಭಾಗವು ಇತ್ತೀಚೆಗೆ ‘ಮೃತ್ಯುಕೂಪ’ವಾಗಿ ಮಾರ್ಪಡುತ್ತಿದೆ. ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ಭೀಕರ ಸರಣಿ ರಸ್ತೆ ಅಪಘಾತಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೊಂದೆಡೆ ಅಮೂಲ್ಯ ಜೀವಗಳು ರಸ್ತೆಯಲ್ಲೇ ಪ್ರಾಣ ಕಳೆದುಕೊಳ್ಳುತ್ತಿವೆ. ಈ ರಕ್ತಪಾತಕ್ಕೆ ತಡೆಗೋಡೆ ಹಾಕಬೇಕಾದ ವ್ಯವಸ್ಥೆ ಮತ್ತು ಸಾರ್ವಜನಿಕರ ನಿರ್ಲಕ್ಷ್ಯವೇ ಈ ದುರಂತಗಳಿಗೆ ಪ್ರಮುಖ ಕಾರಣವಾಗಿದೆ. ಸಾವು-ನೋವುಗಳ ಸರಮಾಲೆಗೆ ಕಾರಣಗಳೇನು?  ನೇರ ರಸ್ತೆಯಲ್ಲಿ ಮಿತಿಮೀರಿದ ವೇಗ.? ಅರಂತೋಡು ಭಾಗದ ರಸ್ತೆ ನೇರವಾಗಿರುವುದರಿಂದ ವಾಹನ ಸವಾರರು ವಿಪರೀತ ವೇಗದಲ್ಲಿ ಚಲಿಸುತ್ತಿದ್ದಾರೆ. ವೇಗದ ಮಿತಿಯ ಅರಿವಿಲ್ಲದೆ […]

Read More