n6216098931720717173812669145782a72e3c8df2112a18259f3784acaea4ad7751265be6d679227311428n6216098931720717173812669145782a72e3c8df2112a18259f3784acaea4ad7751265be6d679227311428

ವಕರು ತಮ್ಮ ಕಾಮ ಚಟವನ್ನು ತೀರಿಸಿಕೊಳ್ಳಲು ಎಲ್ಲೆಂದರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಾರೆ. ಅವರ ಅಂತಹ ಅಸಭ್ಯ ವರ್ತನೆಯಿಂದ ಮಹಿಳೆಯರು ರೋಸಿ ಹೋಗಿದ್ದಾರೆ. ಅಂತಹದೊಂದು ಘಟನೆ ಫಿಲಿಡೆಲ್ಫಿಯಾದ ಡಾಲರ್ ಟ್ರೀ ಸ್ಟೋರ್‌ನಲ್ಲಿ ನಡೆದಿದೆ. ಯುವಕನೊಬ್ಬ ತನ್ನ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳಲು ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ಫಿಲಿಡೆಲ್ಫಿಯಾದ ಡಾಲರ್ ಟ್ರೀ ಸ್ಟೋರ್‌ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕಾಲಿನ ಮೇಲೆ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಅಸಹ್ಯಕರ ಕೃತ್ಯವನ್ನು ಮಾಡಿದ ನಂತರ ಆರೋಪಿ ಅಂಗಡಿಯಿಂದ ಓಡಿಹೋಗುವುದು ಈ ವಿಡಿಯೊದಲ್ಲಿ ಕಂಡುಬಂದಿದೆ. ಹಾಗೇ ಇದರಿಂದ ಅಸಮಾಧಾನಗೊಂಡಿರುವ ಮಹಿಳೆ ಈ ವಿಡಿಯೊ ಮಾಡಿದ್ದಾಳೆ.

ಅವಳು ಶಾಪಿಂಗ್ ಮಾಡುವಾಗ ತನ್ನ ಕಾಲಿನ ಮೇಲೆ ಸ್ಖಲನ ಮಾಡಿದ್ದಾನೆ ಎಂದು ಎಲ್ಲರಿಗೂ ತಿಳಿಯುವಂತೆ ಕೂಗಿದಾಗ ಒಬ್ಬ ವ್ಯಕ್ತಿ ಅಂಗಡಿಯಿಂದ ಹೊರಗೆ ಓಡುವುದನ್ನು ಆಕೆ ನೋಡಿದ್ದಾಳೆ. ಅವನು ತಪ್ಪಿಸಿಕೊಂಡು ಓಡುವಾಗ ಮಹಿಳೆ ತನ್ನ ಕಾಲಿನ ಮೇಲೆ ವೀರ್ಯವನ್ನು ತೋರಿಸುತ್ತಾಳೆ, ಅಂಗಡಿಯ ಹೊರಗೆ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಇನ್ನೊಬ್ಬ ಮಹಿಳೆಯು ಅವಳನ್ನು ಸಮಾಧಾನಪಡಿಸಲು ಬರುವುದು ವಿಡಿಯೊದಲ್ಲಿ ಕಾಣಿಸುತ್ತದೆ.

ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪರಾರಿಯಾಗಿರುವ ಸುಮಾರು 25 ರಿಂದ 30 ವರ್ಷ ಮತ್ತು ಸುಮಾರು 6 ಅಡಿ ಎತ್ತರದ ಕಪ್ಪು ಪುರುಷನನ್ನು ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಅಂಗಡಿಯ ಉದ್ಯೋಗಿಯೊಬ್ಬ ಆ ವ್ಯಕ್ತಿ ಎಲ್ಲಿ ಸುತ್ತಾಡುತ್ತಿದ್ದಾನೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಮತ್ತು ಪೊಲೀಸರು ಆ ವ್ಯಕ್ತಿಯನ್ನು ಹುಡುಕಲು ಆ ವೀಡಿಯೊದಿಂದ ಆತನ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.

ಆ ವ್ಯಕ್ತಿಯನ್ನು ಗುರುತಿಸಲು ಸಾರ್ವಜನಿಕರು ಸಹಾಯ ಮಾಡಬೇಕೆಂದು ಪೊಲೀಸರು ಕೇಳಿಕೊಂಡಿದ್ದಾರೆ. ಹಾಗೇ ಶಂಕಿತನ ಬಗ್ಗೆ ಮಾಹಿತಿ ನೀಡುವವರಿಗೆ 2,000 ಡಾಲರ್ ಬಹುಮಾನವನ್ನು ನೀಡುವುದಾಗಿ ಮೀಕ್ ಮಿಲ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *