Nammasullia: ಇಂಡಿಯನ್ ರೆಡ್ ಕ್ರಾಸ್ ದ. ಕ.ಜಿಲ್ಲಾ ಘಟಕದ ವತಿಯಿಂದ ಅರ್ಹ ಫಲಾನುಭವಿಗಳಿಗೆ ನಿತ್ಯ ಬಳಕೆಯ ಮತ್ತು ಕಿಚನ್ ಐಟಂ ವಸ್ತುಗಳನ್ನು ಸುಳ್ಯ ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ ಯವರಿಗೆ ಹಸ್ತಾಂತರಿಸಿದರು. ಸುಳ್ಯ ವರ್ತಕರ ಸಂಘದ ಸಮುದಾಯ ಭವನದಲ್ಲಿ ಸರಳ ಸಮಾರಂಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಘಟಕದ ಮುಖ್ಯ ಸಲಹೆಗಾರ, ರಾಜ್ಯ ಕಾರ್ಯಕಾರಿಣಿ ಪೂರ್ವ ನಿರ್ದೇಶಕ ಎಸ್. ರವಿ ಯವರು ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭ ದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ, ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕ ಉಪ ಸಭಾಪತಿ ಕೆ. ಎಂ. ಮುಸ್ತಫ, ಮಂಗಳೂರು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಾರ್ವಜನಿಕ ಸಂಪರ್ಕಧಿಕಾರಿ ಪ್ರವೀಣ್, ಸುಳ್ಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ, ರೆಡ್ ಕ್ರಾಸ್ ನಿರ್ದೇಶಕಿ ಪದ್ಮಿನಿ ಮೊದಲಾದವರು ಉಪಸ್ಥಿತರಿದ್ದರು.