n623900779172207486684240a68bbaf8980b6a7995f264c0a168b28b5ad6a12b7faf3da329a78e5e0d8401 transformedn623900779172207486684240a68bbaf8980b6a7995f264c0a168b28b5ad6a12b7faf3da329a78e5e0d8401 transformed

ಶಾಲೆಗೆ ಬರುವಾಗ ನೀಟಾಗಿ ಎರಡು ಜಡೆ ಹಾಕಿಕೊಂಡು ಬಂದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರು ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಸರ್ಕಾರಿ ಶಾಲೆಯಲ್ಲಿ ನಿನ್ನೆ ನಡೆದಿದೆ. ಜಡೆ ಹಾಕಿ ಶಾಲೆ ಬಾರದ್ದಕ್ಕೆ ಇದೇ ರೀತಿ ಮೂವರು ವಿದ್ಯಾರ್ಥಿನಿಯರಿಗೆ ಜಡೆ ಕಟ್‌ ಮಾಡಿರುವ ಶಿಕ್ಷಕರು, ಎಂಟನೇ ತರಗತಿಯಲ್ಲಿ ಓದುತ್ತಿರುವ ಅಮೂಲ್ಯ, ಅನುಷಾ, ಭಾವನ ಶಿಕ್ಷಕರಿಂದ ಜಡೆ ಕಟ್ ಮಾಡಿಸಿಕೊಂಡು ಶಿಕ್ಷೆ ಅನುಭವಿಸಿದ ವಿದ್ಯಾರ್ಥಿನಿಯರು. ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ಹೇಳಿದಂತೆ ಜಡೆ ಕಟ್ ಮಾಡಿರುವ ಶಿಕ್ಷಕಿ ಪವಿತ್ರಾ. ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ಹೋದಾಗ ಕೂದಲು ಕತ್ತರಿಸುವುದು ಪೋಷಕರು ಗಮನಿಸಿದ್ದಾರೆ. ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ತಿಳಿಸಿರುವ ವಿದ್ಯಾರ್ಥಿನಿಯರು. ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿದ ಹಿನ್ನೆಲೆ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *