ಸುಳ್ಯ: ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಏಷ್ಯಾದ ಅತಿ ದೊಡ್ಡ ಇಸ್ಲಾಮಿಕ್ ಕಲೋತ್ಸವವಾದ ಸಾಹಿತ್ಯೋತ್ಸವ ಈ ಬಾರಿ ಸುಳ್ಯ ಸೆಕ್ಟರ್ ಮಟ್ಟದಲ್ಲಿ ನಾಳೆ (2025 ಆಗಸ್ಟ್ 24, ಭಾನುವಾರ) ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಸುಮಾರು 100 ಕ್ಕೂ ಹೆಚ್ಚು ಸ್ಪರ್ಧೆಗಳು ನಾಲ್ಕು ವೇದಿಕೆಗಳ ಮೂಲಕ ನಡೆಯಲಿದ್ದು, ಸುಳ್ಯ ಸೆಕ್ಟರ್‌ನ ಏಳು ಯೂನಿಟ್‌ಗಳಿಂದ ಭಾಗವಹಿಸುವ ಸುಮಾರು 350 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಈ ಮಹತ್ತರ ಕಾರ್ಯಕ್ರಮದಲ್ಲಿ ಸಂಘಟನಾ ನಾಯಕರು, ಉಲಮಾ–ಉಮರಾ, ಸಾಮಾಜಿಕ ಹಾಗೂ ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಸೆಕ್ಟರ್ ಸಾಹಿತ್ಯೋತ್ಸವದ ಫಿನಾನ್ಸ್ ಕಾರ್ಯದರ್ಶಿ ರುನೈಝ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *