ಹೆಸರಾಂತ ಕಬಡ್ಡಿ ಆಟಗಾರ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರೋ ಕಬಡ್ಡಿಯಲ್ಲಿ ಗಮನ ಸೆಳೆದಿದ್ದ ಕಡಬದ ಕೋಕಿಲಾನಂದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇತ್ತೀಚೆಗೆ ಬೈನ್ ಸ್ಟೋಕ್ ಗೆ ಒಳಗಾಗಿದ್ದ ಕೋಕಿಲಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರ ಚಿಕಿತ್ಸೆಗೆ ಹಲವು ಧಾನಿಗಳು ಆರ್ಥಿಕ ಸಹಾಯ ಮಾಡಿದ್ದರು.
ಕೋಕಿಲಾನಂದ ಅವರು ಕಡಬ ನಿವಾಸಿಯಾಗಿದ್ದು, ಕೇವಲ ಕಬಡ್ಡಿ ಆಟ ಮಾತ್ರವಲ್ಲದೆ ಊರಿನ ಕೆಲವೊಂದು ಸಮಸ್ಯೆಗೆ ಹೋರಾಟ ಕೂಡಾ ನಡೆಸಿದ್ದರು. ಕಡಬದಲ್ಲಿ ಆನೆ ದಾಳಿಯ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಕಾರಣ ಜೈಲಿಗೆ ಕೂಡಾ ಹೋಗಿ ಬಂದಿದ್ದರು.
ಬಡತನವಿದ್ದರೂ ಹೃದಯ ಶ್ರೀಮಂತಿಕೆ ಹೊಂದಿದ್ದ ಕೋಕಿಲಾನಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ತಂದೆ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರೆ ತಾಯಿ ಅನಾರೋಗ್ಯದಿಂದ ಹಾಸಿಗೆ , ಹಿಡಿದಿದ್ದಾರೆ. ಪತ್ನಿ ಪಂಚಾಯತ್ ನಲ್ಲಿ ವಾರಕ್ಕೆ ಮೂರು ಭಾರಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಒಂದು ಮಗುವನ್ನು ಹೊಂದಿರುವ ಕೋಕಿಲಾನಂದ ಅವರ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ