Picsart 24 07 22 13 18 07 351 scaledPicsart 24 07 22 13 18 07 351 scaled

ಸುಳ್ಯ: ಇಲ್ಲಿನ ಪೈಚಾರು- ಸೋಣಂಗೇರಿ ಮಧ್ಯೆ ಇರುವ ಆರ್ತಾಜೆ ಎಂಬಲ್ಲಿ ಅಡ್ಡ ರಸ್ತೆಯಲ್ಲಿ ಸರಿ-ಸುಮಾರು 60ಕ್ಕೂ ಹೆಚ್ಚು ಮನೆಯಲ್ಲಿ ಸುಮಾರು ಕಳೆದ 3 ತಿಂಗಳಿನಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದೆ, ಹಾಗೂ ಪ್ರತಿದಿನ ಲೋ ವೋಲ್ಟೇಜ್ ಸಮಸ್ಯೆಯಿಂದ ಕತ್ತಲಲ್ಲಿ ಕಳೆಯುವಂತಾಗಿದೆ. ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದರೆ, ತಾತ್ಕಾಲಿಕವಾಗಿ ಬಂದು ಸರಿಪಡಿಸುತ್ತಿದ್ದರು, ಅದೇ ಸಮಸ್ಯೆ ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಆದುದರಿಂದ ಸಂಭಂದಿಸಿದ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ 3Pc ಲೈನ್ ಅಳವಡಿಕೆ ಮಾಡಿ ಸಮರ್ಪಕ ವಿದ್ಯುತ್ ಪೂರೈಕೆ ಒದಗಿಸಿಕೊಡಬೇಕಾಗಿ ಮನವಿಯನ್ನು ಈ‌ದಿನ ನೀಡಿದ, ವಾರ್ತೆಯನ್ನು ನಮ್ಮ ಸುಳ್ಯ ಮಾದ್ಯಮ ಮೂಲಕ ವರದಿ ಕೂಡಾ ನೀಡಿತ್ತು.

ಇದೀಗ ಮನವಿಗೆ ಸ್ಪಂದಿಸಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ, ಇದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದ್ದಾರೆ. ತ್ವರಿತಗತಿಯ ಸ್ಪಂದನೆ ನೀಡಿದ ಮೆಸ್ಕಾಂ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *