ಏಪ್ರಿಲ್ 29, 1973 ರಲ್ಲಿ ಕೇರಳದಲ್ಲಿ ಸ್ಥಾಪನೆಗೊಂಡ ಎಸ್ಸೆಸ್ಸೆಫ್ ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ಗಲ್ಫ್ ರಾಷ್ಟ್ರಗಳಲ್ಲಿ, ಯುಕೆ, ಆಸ್ಟ್ರೇಲಿಯ ಸೇರಿದಂತೆ ವಿವಿಧ ದೇಶಗಳಲ್ಲಿ ಕೆ ಸಿ ಎಫ್, ಐ ಸಿ ಎಫ್, ಆರ್ ಎಸ್ ಸಿ ಹೆಸರಿನ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ನೈತಿಕ ಕ್ರಾಂತಿಗೆ ಆಹ್ವಾನ ನೀಡುತ್ತಾ ವರದಕ್ಷಿಣೆ, ಮಾದಕ ದ್ರವ್ಯ ಮುಂತಾದ ಅನಿಷ್ಟಗಳ ವಿರುದ್ಧ ಎಸ್ಸೆಸ್ಸೆಫ್ ನ ಲಕ್ಷಾಂತರ ಕಾರ್ಯಕರ್ತರು ಪ್ರತಿಜ್ಞೆ ಮಾಡಿದ್ದಾರೆ. ಮನುಕುಲವನ್ನು ಗೌರವಿಸಿ, ಒಳಿತಿನೆಡೆಗೆ ಮುನ್ನುಗ್ಗಿ ಮುಂತಾದ ಸಂದೇಶಗಳನ್ನು ಸಾರುತ್ತಾ ವಿದ್ಯಾರ್ಥಿಗಳನ್ನು, ಯುವಕರನ್ನು ಧಾರ್ಮಿಕ ಪ್ರಜ್ಞೆಯೊಂದಿಗೆ ಸನ್ಮಾರ್ಗದಲ್ಲಿ ಮುನ್ನಡೆಸುವ ಎಸ್ಸೆಸ್ಸೆಫ್ ರಕ್ತದಾನ, ಸ್ವಚ್ಛತಾ ಅಭಿಯಾನ, ಬಡ ಮಕ್ಕಳಿಗೆ ಪುಸ್ತಕ ವಿತರಣೆ, ಸ್ಕಾಲರ್ಶಿಪ್, ಶಿಕ್ಷಣಕ್ಕೆ ಪ್ರೋತ್ಸಾಹ, ಮಾದಕ ದ್ರವ್ಯ ವಿರೋಧೀ ಆಂದೋಲನ ಮುಂತಾದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಎಸ್ಸೆಸ್ಸೆಫ್ ಕಲ್ಲುಗುಂಡಿ ಯುನಿಟ್ ವತಿಯಿಂದ ಏಪ್ರಿಲ್ 29 ರಂದು ಎಸ್ಸೆಸ್ಸೆಫ್ ಸ್ಥಾಪಕ ದಿನವನ್ನು ಆಚರಿಸಲಾಯಿತು. ಮಾದಕ ದ್ರವ್ಯ ವಿರುದ್ಧ ಪ್ರತಿಜ್ಞೆ ಮಾಡಲಾಯಿತು. ಪೆಹಲ್ಗಾಂ ದಾಳಿಯನ್ನು ಖಂಡಿಸಿ ದೇಶದಲ್ಲಿ ಶಾಂತಿಯನ್ನು ಕಾಪಾಡಲು ದುಷ್ಟಶಕ್ತಿಗಳ ವಿರುದ್ಧ ಎಲ್ಲರೂ ಒಂದಾಗಬೇಕು ಎಂಬ ಸಂದೇಶವನ್ನು ಸಾರಲಾಯಿತು. ಎಸ್ಸೆಸ್ಸೆಫ್ ಕಲ್ಲುಗುಂಡಿ ಯುನಿಟ್ ಅಧ್ಯಕ್ಷರಾದ ಆಶಿಕ್ ಕೆ ಹೆಚ್ ರವರ ಅಧ್ಯಕ್ಷತೆಯಲ್ಲಿ, ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಎಸ್ ವೈ ಎಸ್ ಕಲ್ಲುಗುಂಡಿ ಯುನಿಟ್ ಅಧ್ಯಕ್ಷರಾದ ಹಂಝ ಕೊಯನಾಡು, ಜಲೀಲ್ ಭಾರತ್, ಝಾಕಿರ್, ಹಸೈನಾರ್ ಚಟ್ಟೆಕ್ಕಲ್ಲು, ಅಬ್ದುಲ್ ಖಾದರ್, ಜವಾದ್, ಜಾಬಿರ್ ಸಹಿತವಿರುವ ಸದಸ್ಯರು ಭಾಗವಹಿಸಿದರು. ಸಾದಿಕ್ ಕಲ್ಲುಗುಂಡಿ ಸ್ಥಾಪಕ ದಿನಾಚರಣೆಯ ಸಂದೇಶವನ್ನು ಸಾರಿದರು.

2 thoughts on “ಕಲ್ಲುಗುಂಡಿಯಲ್ಲಿ ಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆ”
  1. ಉತ್ತಮ ಚಾನಲ್. ಸುಳ್ಯ ಪ್ರಾದೇಶಿಕ ವಾರ್ತಾ ಚಾನಲ್ ಆಗಿ ಮೂಡಿ ಬಂದ ತಮ್ಮ ಚಾನಲ್ ಗೆ ಅಭಿನಂದನೆಗಳು. ಇನ್ನಷ್ಟು ಉನ್ನತ ಮಟ್ಟಕ್ಕೆ ತಲುಪಲೆಂದು ಹಾರೈಸುತ್ತೇನೆ.
    ಇತೀ,
    ಎ.ಎಂ.ಫೈಝಲ್ ಝುಹ್‌ರಿ ಕಲ್ಲುಗುಂಡಿ

Leave a Reply

Your email address will not be published. Required fields are marked *