Nammasullia: ಮೂರು ವಾಹನಗಳು ಡಿಕ್ಕಿ ಹೊಡೆದ ಘಟನೆ ಪೈಚಾರಿನ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಮೂರು ವಾಹನವು ಸುಳ್ಯ ಕಡೆಯಿಂದ ಪೈಚಾರ್ ಕಡೆ ಚಲಿಸುತ್ತಿದ್ದು, ಹುಂಡೈ ನಿಯೋನ್ ಕಾರು ಚಾಲಕ ರಸ್ತೆಗೆ ಅಡ್ಡಲಾಗಿ ನಾಯಿ ಬಂತೆಂದು ಹಠಾತ್ ಬ್ರೇಕ್ ಹಾಕಿದ್ದಾನೆ, ಅದೇ ದಿಕ್ಕಿನಲ್ಲಿ ಬಂದ ಬೈಕ್ ಬ್ರೇಕ್ ಹಾಕಿದ್ದರು ನಿಯಂತ್ರಣ ತಪ್ಪಿ ಮುಂದೆ ಇದ್ದ ನಿಯೋನ್ ಕಾರಿಗೆ ಡಿಕ್ಕಿ ಹೊಡೆದಿದ್ದೆ. ಇದರ ಹಿಂದೆಯಿಂದ ಬರುತ್ತಿದ್ದ ಮತ್ತೊಂದು ಸೆಲೆರಿಯೋ ಕಾರು ಅಪಘಾತ ತಪ್ಪಿಸಲು ತನ್ನಿಂದ ಆದಷ್ಟು ಗಾಡಿಯನ್ನು ರಸ್ತೆಯ ಬದಿಗೆ ಸರಿಸಿದ್ದರೂ, ಕಾರಿನ ಒಂದು ಭಾಗ ಈ ಬೈಕ್ ಗೆ ಡಿಕ್ಕಿ ಹೊಡೆದಿದೆ. ಸೆಲೆರಿಯೋ ಕಾರಿನ ಚಾಲಕನ ಚಾಣಾಕ್ಷತನದಿಂದ ನಡೆಯಬಹುದಾದ ದೊಡ್ಡಮಟ್ಟದ ಅಪಾಯ ತಪ್ಪಿಸಿದ್ದಾನೆ. ಮೂರು ವಾಹನವು ಜಖಂಗೊಂಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಾಯಾಣಿಕರೆಲ್ಲರೂ ಪಾರಾಗಿದ್ದಾರೆ.
