n6237377011722013418544618fb7649027b8e2bd2908c00bdf316d60a0122b5a37bf5c74ec18448e262ff7n6237377011722013418544618fb7649027b8e2bd2908c00bdf316d60a0122b5a37bf5c74ec18448e262ff7

ಅನಕಪಲ್ಲಿ ಗವರಪಾಲೆಂನ ಪೆಂಟಕೋಟ ಕಿರಣ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಅವರು 2020 ರಲ್ಲಿ ವಿವಾಹವಾದರು. ಅದೇ ವರ್ಷ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ ಕಿರಣ್ ಪ್ರಾಣ ಕಳೆದುಕೊಂಡರು. ಕಿರಣ್ ಗೆ ಸೊಸೆ ಲಾಸ್ಯ ಎಂದರೆ ಪಂಚಪ್ರಾಣ.

ಯಾವುದೇ ಹೆಣ್ಣು ಮಗುವಿಗೆ ತಂದೆ ತಾಯಿಯ ನಂತರ ರಕ್ಷಣೆ ನೀಡುವುದು ಸೋದರಮಾವ ಮಾತ್ರವೇ. ಹೆತ್ತವರು ಹೆಣ್ಣು ಮಗುವನ್ನು ಬಿಟ್ಟು ಎಲ್ಲಿಗಾದರೂ ಹೊರ ಹೋಗಬೇಕು ಎಂದಾದಲ್ಲಿ ಮಗುವನ್ನು ಸೋದರಮಾವನ ಬಳಿ ಬಿಟ್ಟು ಹೋಗುತ್ತಾರೆ. ಆ ಬಂಧವು ತುಂಬಾ ಅಮೂಲ್ಯ ಮತ್ತು ಸುರಕ್ಷಿತವಾದುದು. ಆದರೆ ಮಗಳಿಗೆ ಸೋದರಮಾವನ ಕೊರತೆಯನ್ನು ನೀಗಿಸಬೇಕೆನ್ನುವ ತಾಯಿಯೊಬ್ಬರು ಮಗಳಿಗಷ್ಟೇ ಅಲ್ಲ; ತನ್ನ ಅಪ್ಪ-ಅಮ್ಮನಿಗೂ ಅಚ್ಚರಿಯ ಉಡುಗೊರೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅನಕಾಪಲ್ಲಿಯ ಕುಟುಂಬವೊಂದರ ಪ್ರಯತ್ನ ಎಲ್ಲರ ಮನಗೆದ್ದಿದೆ. ಅಪಘಾತದಲ್ಲಿ ಸಾವಿಗೀಡಾದ ಮಗನನ್ನು ಮದುವೆ ಸಮಾರಂಭದಲ್ಲಿ ನೋಡಿ ಹೆತ್ತವರು ಬೆಚ್ಚಿಬಿದ್ದರು. ಅನಕಪಲ್ಲಿ ಗವರಪಾಲೆಂನ ಪೆಂಟಕೋಟ ಕಿರಣ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಅವರು 2020 ರಲ್ಲಿ ವಿವಾಹವಾದರು. ಅದೇ ವರ್ಷ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ ಕಿರಣ್ ಪ್ರಾಣ ಕಳೆದುಕೊಂಡರು. ಕಿರಣ್ ಗೆ ಸೊಸೆ ಲಾಸ್ಯ ಎಂದರೆ ಪಂಚಪ್ರಾಣ. ಅವರು ತಮ್ಮ ಸೊಸೆಯ ಮೊದಲ ಕಾರ್ಯಕ್ರಮವನ್ನು ತಮ್ಮ ಸಮ್ಮುಖದಲ್ಲಿಯೇ ನಿರ್ವಹಿಸುವ ನಿರೀಕ್ಷೆಯಲ್ಲಿದ್ದರು. ಮುಂದೇನಾಯಿತು ಎಂಬುದೇ ಕರುಣಾಜನಕ ಕತೆ.

ಸೊಸೆ ಲಾಸ್ಯಳ ಜೀವನದಲ್ಲಿ ಪ್ರಮುಖವಾದ ಆ ದಿನ ಬಂದಿದೆ. ಆದರೆ ಸೋದರಮಾವ ಕಿರಣ್ ಜೀವಂತವಾಗಿಲ್ಲ. ಆದರೂ ಮೃತ ಕಿರಣನ ಅಕ್ಕ ತನ್ನ ತಮ್ಮನ ಮಹದಾಸೆಯನ್ನು ಪೂರೈಸಲು ಬಯಸಿದರು. ಅವರು ತಮ್ಮ ತಮ್ಮನ ಸಮ್ಮುಖದಲ್ಲಿ ತಮ್ಮ ಮಗಳ ಮೊದಲ ಕಾರ್ಯಕ್ರಮವನ್ನು ನೆರವೇರಿಸಲು ಬಯಸಿದ್ದರು. ಆ ಆಲೋಚನೆ ಬಂದ ತಕ್ಷಣ ವೇ ತನ್ನ ಕಿರಿಯ ಸಹೋದರನ ಮೇಣದ ಆಕೃತಿಯನ್ನು ನಿರ್ಮಿಸಲು ಆರ್ಡರ್​ ಕೊಟ್ಟರು. ಮೂರೂವರೆ ಲಕ್ಷ ಖರ್ಚು ಮಾಡಿ ಮುಂಬೈನಲ್ಲಿ ಮೇಣದ ಆಕೃತಿ ತಯಾರಿಸಿ ಮಗಳ ಮದುವೆ ಸಮಾರಂಭದಲ್ಲಿ ಅದನ್ನು ನಿಲ್ಲಿಸಿ, ಮಗಳು ಲಾಸ್ಯಳ ಕೈಯಲ್ಲೇ ಆಕೆಯ ಮಾವನ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ.

ಇದರಿಂದ ತನ್ನ ಸೋದರಮಾವ ಕಿರಣ್ ಸಮ್ಮುಖದಲ್ಲಿಯೇ ತನ್ನ ಮೊದಲ ಕಾರ್ಯಕ್ರಮ ನಡೆಯುತ್ತಿದೆ ಎಂದು ಲಾಸ್ಯ ಸಂಭ್ರಮಿಸಿದ್ದಾಳೆ. ಇನ್ನು ಮೇಣದ ಆಕೃತಿಯಲ್ಲಿದ್ದ ಜೀವಂತವಿದ್ದಂತೆ ಕಂಗೊಳಿಸುತ್ತಿದ್ದ ತಮ್ಮ ಮಗನನ್ನು ನೋಡಿ ಕಿರಣ್ ತಂದೆ-ತಾಯಿ ನೋವಲ್ಲೂ ಆನಂದವನ್ನು ಕಂಡಿದ್ದಾರೆ. ಮೂರ್ತಿಯನ್ನು ಕಂಡು ಭಾವುಕರಾದ ಅವರು, ತಮ್ಮ ಮಗನೇ ಕಾರ್ಯಕ್ರಮಕ್ಕೆ ಬಂದು ಹರಿಸುತ್ತಿದ್ದಾನೆ ಎಂಬಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಲಾಸ್ಯಳ ತಾಯಿ ಮಾಧವಿಯವರ ಪ್ರಯತ್ನ ಅಲ್ಲಿದ್ದವರೆಲ್ಲರನ್ನು ಮೆಚ್ಚಿಸಿದೆ. ಮಾಧವಿಗೆ ತನ್ನ ತಮ್ಮನ ಮೇಲಿರುವ ಪ್ರೀತಿಯನ್ನು ಕಂಡು ಎಲ್ಲರೂ ತಲೆದೂಗಿದ್ದಾರೆ.

Leave a Reply

Your email address will not be published. Required fields are marked *