ಮಂಗಳೂರು: ಕರ್ನಾಟಕ ಬ್ಯಾರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆ ಮಂಗಳೂರು ಇದರ ವತಿಯಿಂದ ನಡೆದ ಎರಡು ದಿನಗಳ ಬ್ಯಾರಿ ಹಬ್ಬದ ಎಲ್ಲಾ ಭಾಷೆಯ ಸಾಂಸ್ಕೃತಿಕ ಸಾಮರಸ್ಯ ಕಾರ್ಯಕ್ರಮ ಮಂಗಳೂರು ಕರಾವಳಿ ಉತ್ಸವದ ಮೈದಾನದಲ್ಲಿ ಆದ್ದೂರಿಯಾಗಿ ನಡೆಯಿತು, ಮಳಿಗೆಗಳು, ವಿವಿಧ ತರದ ಆಹಾರ ಮತ್ತು ಉದ್ಯೋಗ ಮೇಳ, ಸನ್ಮಾನ ಸಮಾರಂಭ ಸಹಿತ ವಿವಿಧ ಕಾರ್ಯಕ್ರಮ ನಡೆಯಿತು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ,ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷರಾದ ಟಿ.ಎಮ್ ಶಹೀದ್ ತೆಕ್ಕಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಬ್ಯಾರಿ ಸಮುದಾಯವು ದೇಶ ವಿಧೇಶದಲ್ಲಿ ಖ್ಯಾತಿಯನ್ನು ಪಡೆದಿರುವುದುಕ್ಕೆ ಕಾರಣ ಬ್ಯಾರಿ ಜನಾಂಗದ ವಿವಿಧ ಕ್ಷೇತ್ರದ ಸಾಧಕರಿಂದಾಗಿ ನಮ್ಮ ಸಮುದಾಯಕ್ಕೆ ಹೆಮ್ಮೆ ಮತ್ತು ಅಭಿಮಾನ ಬಂದಿದೆ ಈ ಹಿಂದೆ ಬ್ಯಾರಿ ಎಂದರೆ ಕೀಳು ಭಾವನೆ ಇತ್ತು ಈಗ ಬ್ಯಾರಿ ಎಂದರೆ ಅಭಿಮಾನದ ಸಂಕೇತವಾಗಿದೆ, ರಾಜಕೀಯವಾಗಿ ಬಿ ಎ ಮೊಯಿದೀನ್,ಯು ಟಿ ಫರೀದ್, ಉಮ್ಮರಬ್ಬ, ಇದ್ದೀನಬ್ಬ, ಸ್ಪೀಕರ್ ಯು ಟಿ ಖಾದರ್ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಉದ್ಯಮಿಗಳಾಗಿ ಹಲವಾರು ಇತರ ಬ್ಯಾರಿ ಸಮುದಾಯದ ನಾಯಕರು, ಸಾಮಾಜಿಕ, ಧಾರ್ಮಿಕ ಮುಖಂಡರು ಇತರ ಕ್ಷೇತ್ರದಲ್ಲಿ ದುಡಿಯುವ ವ್ಯಕ್ತಿಗಳು ಬ್ಯಾರಿ ಜನಾಂಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ದೇಶ ವಿದೇಶದಲ್ಲಿ ಶಿಕ್ಷಣ ಸಂಸ್ಥೆ ವೈದ್ಯಕೀಯ ವಿಶ್ವವಿದ್ಯಾನಿಲಯ ಸ್ಥಾಪಿಸಿದೆ ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿ ಕಾರ್ಯಕ್ರಮದ ಸಂಘಟಕರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸ್ಪೀಕರ್ ಯು.ಟಿ ಖಾದರ್, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಝಕರಿಯಾ ಜೋಕಟ್ಟೆ, ಜಿ.ಎ.ಬಾವಾ, ಇಕ್ಬಾಲ್ ಪರ್ಲಿಯ, ಇನಾಯತ್ ಆಲಿ ಮುಲ್ಕಿ, ಮಿಥುನ್ ರೈ, ರೋಹನ್ ಮೊಂತೆರೋ ಯು ಟಿ ಝುಲ್ಫಿಕಾರ್ ಸಹಿತ ಹಲವಾರು ಉದ್ಯಮಿಗಳು, ರಾಜಕೀಯ, ಸಾಮಾಜಿಕ ಹಾಗು ವಿವಿಧ ಕ್ಷೇತ್ರದ ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *