ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಚಿಸ್ತಿಯಾ ದರ್ಸ್ ವಿದ್ಯಾರ್ಥಿಗಳಿಂದ ರಚಿಸಿದ ಪಂಚ ಭಾಷಾ ಕೃತಿ ಸಂಪಾದಕೀಯ ಬಿಡುಗಡೆ ಕಾರ್ಯಕ್ರಮ ಮಸೀದಿಯಲ್ಲಿ ನಡೆಯಿತು.
ಮುದಗ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರು ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ರವರಿಗೆ ಹಸ್ತಾಂತರಿಸಿ ಬಿಡುಗಡೆ ಗೊಳಿಸಿದರು.
ದರ್ಸ್ ವಿದ್ಯಾರ್ಥಿಗಳಿಗೆ ಆದ್ಯಾತ್ಮಿಕ ಶಿಕ್ಷಣದೊಂದಿಗೆ ಲೌಖಿಖ ಶಿಕ್ಷಣ ಹಾಗೂ ಸಾಮಾಜಿಕ ಕಳಕಳಿಯ ಮಾಹಿತಿ ಹಾಗೂ ಅರಿವು ನೀಡುವ ಉದ್ದೇಶದಿಂದ ಪ್ರತಿ ತಿಂಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಘಟನೆಗಳ ಬಗ್ಗೆ ಸಂಪಾದಕೀಯವನ್ನು ರಚಿಸುವ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ.