WhatsApp Image 2024 07 30 at 10.56.15 AM jpeg 1WhatsApp Image 2024 07 30 at 10.56.15 AM jpeg 1

ಮೆಪ್ಪಾಡಿ: ವಯನಾಡಿನ ಘೋರ ದುರಂತದ ಭೂಕುಸಿತದಲ್ಲಿ ಈವರೆಗೆ 282 ಮಂದಿ ಸಾವನ್ನಪ್ಪಿದ್ದಾರೆ. 195 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಸುಮಾರು 250 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಮುಂಡಕ್ಕೈ ಮತ್ತು ಚಾಲಿಯಾರ್‌ನಲ್ಲಿ ಇದುವರೆಗೆ 127 ಮೃತದೇಹಗಳು ಪತ್ತೆಯಾಗಿವೆ. ಮುಂಡಕೈಯಲ್ಲಿ ನದಿ ತುಂಬಿ ಹರಿಯುತ್ತಿರುವವುದರಿಂದ ನೀರಿನ ಮಟ್ಟ ಹೆಚ್ಚಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಅಡಚಣೆ ಸೃಷ್ಟಿಸಿದೆ. ಇದುವರೆಗೆ 1592 ಜನರನ್ನು ರಕ್ಷಿಸಲಾಗಿದೆ. 8107 ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ. ಮಂಗಳವಾರ ಸೇನೆ ತಾತ್ಕಾಲಿಕವಾಗಿ ಸಿದ್ಧಪಡಿಸಿದ್ದ ಕಾಲುಸಂಕ ನಿನ್ನೆ ನೀರಿನಲ್ಲಿ ಮುಳುಗಿದೆ. ಸೇನಾ ಸಿಬ್ಬಂದಿ ಹೊಸ ಸೇತುವೆ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ಏತನ್ಮಧ್ಯೆ, ಭೂಕುಸಿತದ ಬಗ್ಗೆ ಕೇರಳಕ್ಕೆ ಎರಡು ಬಾರಿ ಎಚ್ಚರಿಕೆ ನೀಡಿರುವುದಾಗಿ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ಕ್ರಮ ಕೈಗೊಂಡಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರ ವಿಫಲವಾಗಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಕೇರಳ ಸರ್ಕಾರ ಏನು ಮಾಡಿದೆ ಮತ್ತು ಜನರನ್ನು ಏಕೆ ಬದಲಾಯಿಸಲಿಲ್ಲ ಎಂದು ಅಮಿತ್ ಶಾ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್,‌ದುರಂತಕ್ಕೂ ಮುನ್ನ ವಯನಾಡ್‌ಗೆ ರೆಡ್‌ ಅಲರ್ಟ್‌ ಬಂದಿರಲಿಲ್ಲ. 29ರಂದು ಮಧ್ಯಾಹ್ನದ ಎಚ್ಚರಿಕೆಯಲ್ಲೂ ಆರೆಂಜ್ ಅಲರ್ಟ್ ಮಾತ್ರ ಇತ್ತು. ಅನಾಹುತ ಸಂಭವಿಸಿದ ನಂತರವೇ ರೆಡ್ ಅಲರ್ಟ್ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *