ಸುಳ್ಯ ಸರಕಾರಿ ಜೂನಿಯರ್ ಕಾಲೇಜ್ ನಲ್ಲಿ ಹಿಂದಿ ಉಪನ್ಯಾಸಕರಾಗಿದ್ದ ಶ್ರೀಮತಿ ಹಸೀನಾ ಬಾನು ಇವರಿಗೆ ಪ್ರಾಂಶುಪಾಲರಾಗಿ ಮುಂಭಡ್ತಿ ಹೊಂದಿದ್ದು , ಇದೀಗ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾಗಿ ವರ್ಗಾವಣೆಯಾಗಿದೆ.
ಸಂಪಾಜೆಯ ನಿವೃತ್ತ ಶಿಕ್ಷಕ ಇಬ್ರಾಹಿಂ ಮಾಸ್ಟರ್ ರವರ ಪುತ್ರಿಯಾಗಿರುವ ಶ್ರೀಮತಿ ಹಸೀನಾ ಬಾನುರವರು 1996 ರಲ್ಲಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜ್ ಗೆ ಹಿಂದಿ ಉಪನ್ಯಾಸಕರಾಗಿ ಸರಕಾರಿ ಸೇವೆಗೆ ನೇಮಕಗೊಂಡರು.
ಅಲ್ಲಿ 22 ವರ್ಷ ಸೇವೆ ಸಲ್ಲಿಸಿದ ಬಳಿಕ 2018 ರಲ್ಲಿ ಬೆಳ್ಳಾರೆ ಜೂನಿಯರ್ ಕಾಲೇಜಿಗೆ ವರ್ಗಾವಣೆಗೊಂಡರು. 2019 ರಿಂದ 2022 ಜನವರಿ ವರೆಗೆ ಇದೇ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಇವರು 2023 ಆಗಸ್ಟ್ ತಿಂಗಳಲ್ಲಿ ಪುನಃ ಸುಳ್ಯ ಜೂನಿಯರ್ ಕಾಲೇಜಿಗೆ ವರ್ಗಾವಣೆಗೊಂಡರು. ಇದೀಗ ಪ್ರಾಂಶುಪಾಲರಾಗಿ ಸೇವಾ ಭಡ್ತಿ ಹೊಂದಿರುವ ಅವರು ಕೆಯ್ಯೂರು ಕೆ.ಪಿ.ಎಸ್. ಪ್ರಾಂಶುಪಾಲರಾಗಿ ವರ್ಗಾವಣೆಗೊಂಡಿದ್ದಾರೆ.
ಹಸೀನಾ ಬಾನುರವರ ಪತಿ ಅಬ್ದುಲ್ ಕಲಾಂರವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಹಿರಿಯ ಪುತ್ರ ಅಬ್ದುಲ್ ವಾಹಿದ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ. ಎರಡನೇ ಪುತ್ರ ಫಹಾದ್ ಈಗಷ್ಟೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿದ್ದಾರೆ.