ಜೆ ಬಿ ಯುನೈಟೆಡ್ ಫುಟ್ಬಾಲ್ ಕ್ಲಬ್ ಸುಳ್ಯ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ, ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 25 ಮೇ 2025 ಆದಿತ್ಯವಾರದಂದು ಸುಳ್ಯ ಪರಿವಾರಕಾನದ ಉಡುಪಿ ಗಾರ್ಡನ್ ಹೋಟೇಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಜೀವದಾನಿಯಾದ 51 ಜನಸ್ನೇಹಿ ರಕ್ತದಾನಿಗಳು.

ಈಗಾಗಲೇ ಜಿಲ್ಲೆಯ ಬ್ಲಡ್ ಬ್ಯಾಂಕಿನಲ್ಲಿ ರಕ್ತದ‌ ಕೊರತೆ ಇದ್ದು, ಈ ಮೂಲಕ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ ಸಾರ್ವಜನಿಕರು. ಈ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯು ಈವರೆಗೂ 303 ರಕ್ತದಾನ ಶಿಬಿರಗಳ ಮೂಲಕ ಒಟ್ಟು 17512 ಯುನಿಟ್ ರಕ್ತ ಸಂಗ್ರಹಿಸಲಾಗಿದೆ.

Leave a Reply

Your email address will not be published. Required fields are marked *