ಸುಳ್ಯ: ಎಡೆಬಿಡೆದ ಸುರಿಯುತ್ತಿರುವ ಮಳೆ ಒಂದು ಕಡೆಯಾದರೆ, ಮತ್ತೊಂದು ಕಡೆ ಇಂದು ರಾತ್ರಿ ಸುಳ್ಯದಲ್ಲಿ ಎರಡನೇ ಅಪಘಾತ ಸಂಭವಿಸಿದೆ. ಸುಳ್ಯದ ಜ್ಯೋತಿ ಆಸ್ಪತ್ರೆ ಬಳಿ ಈ ಸರಣಿ ಅಪಘಾತ ಸಂಭವಿಸಿದೆ. ಸುಳ್ಯ ಪೇಟೆ ಕಡೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಸುಳ್ಯ ದಿಂದ ಪೈಚಾರ್ ಕಡೆ ಹೋಗುತ್ತಿದ್ದ ಆಲ್ಟೋ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸದಿಂದ ಆಟೋ ರಿಕ್ಷಾದ ಚಕ್ರ ನಜ್ಜುಗುಜ್ಜಾಗಿ, ಆಟೋ ನಿಯಂತ್ರಣ ತಪ್ಪಿ 10 ಮೀಟರ್ ಮುಂದೆ ಚಲಿಸಿದೆ. ಬಳಿಕ ರಸ್ತೆ ಬದಿ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ವರದಿಯಾಗಿದೆ.