ಸುಳ್ಯ: ವೀಕ್ ಲಾಂಗ್ ಫುಟ್ಬಾಲ್, ಹೊನಲು ಬೆಳಕಿನ ಪಂದ್ಯಕೂಟ, ಹೀಗೆ ಹತ್ತು ಹಲವು ಪಂದ್ಯಾಕೂಟಗಳನ್ನು ಆಯೋಜಿಸಿದ್ದ ತಾಲೂಕಿನ ಪ್ರತಿಷ್ಠಿತ ತಂಡಗಳಲ್ಲಿ ಒಂದಾಗಿರುವ ಜೆ.ಬಿ ಯುನೈಟೆಡ್ ಇದೀಗ ಲೆಜೆಂಡ್ ಸಾಕರ್‌ಲೀಗ್ ಆಯೋಜಿಸಿದ್ದಾರೆ. ತಾಲೂಕಿನ ಹಳೆಯ ಫುಟ್ಬಾಲ್ ದಂತಕಥೆಗಳ ಸಮಾಗಮವಾಗಲಿದೆ. ಇದೇ ಬರುವ ದಿನಾಂಕ ಮೆ 18 ರಂದು ಸುಳ್ಯದ ಫುಟ್ಬಾಲ್ ಕಾಶಿ ಗಾಂಧಿನಗರ ಮೈದಾನದಲ್ಲಿ. ಒಟ್ಟು ನಾಲ್ಕು ತಂಡಗಳು, ನಾಲ್ಕು ಐಕಾನ್’ಗಳು, 48 ಹಿರಿಯ ಹಳೆಯ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂದು ಜೆಬಿ ಯುನೈಟೆಡ್ ತಂಡದ ಅಧ್ಯಕ್ಷ ಹನೀಫ್ ಎ.ಕೆ.ಬಿ ತಿಳಿಸಿದ್ದಾರೆ.
