ದಸರಾ ರಜೆಯನ್ನು ಸದುಪಯೋಗಪಡಿಸಿಕೊಂಡ ವಿದ್ಯಾರ್ಥಿಗಳು
ಸುಳ್ಯ ಮುಂಗಾರು ವಾಲಿಬಾಲ್ ಅಕಾಡೆಮಿಯ ಆಶ್ರಯದಲ್ಲಿ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಆಯೋಜಿಸಿದ್ದ 10 ದಿನಗಳ ವಾಲಿಬಾಲ್ ತರಬೇತಿ ಶಿಬಿರ ಯಶಸ್ವಿಯಾಗಿ ಸಂಪನ್ನ ಗೊಂಡಿತು
ಸಮಾರೋಪ ಸಮಾರಂಭ ದ ಅಧ್ಯಕ್ಷತೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ,) ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು. ಸಮಾರೋಪ ಭಾಷಣ ಮಾಡಿದ ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಮಾತನಾಡಿ ವಿದ್ಯಾರ್ಥಿಗಳು ರಜಾ ದಿನವನ್ನು ಕಲಿಕೆಯ ಭಾಗವಾಗಿ ಕ್ರೀಡೆಯಲ್ಲಿ ತೊಡಗಿಸಿ ಕೊಂಡಿರುವುದು
ಅವರ ಉಜ್ವಲ ಭವಿಷ್ಯಕ್ಕೆ ಇದು ನಾಂದಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ದ. ಕ. ಜಿಲ್ಲಾ ವಾಲಿಬಾಲ್ ಉಪಾಧ್ಯಕ್ಷ ಎಸ್. ಸಂಶು ದ್ದೀನ್, ಉದ್ಯಮಿ ಹರೀಶ್ ಕಾಮತ್, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ನಿತಿನ್, ಕೆ. ಬಿ. ಇಬ್ರಾಹಿಂ,ಉದ್ಯಮಿ ಗಳಾದ ನಾಸಿರ್ ಕಟ್ಟೆಕ್ಕಾರ್ಸ್, ಗಿರೀಶ್ ಕಲ್ಲುಗದ್ದೆ,ಇಸ್ಮಾಯಿಲ್ ಕುಂಬ್ಳೆ ಕ್ಕಾರ್ಸ್,ರಫೀಕ್ ವೆಲ್ ಕo ಮೊದಲಾದ ವರು ಉಪಸ್ಥಿತರಿದ್ದರು
ತರಬೇತುದಾರ ಮಂಗಳೂರು ಶಕ್ತಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜ್ಯ ತರಬೇತುದಾರ ಮನೋಜ್ ಕುಮಾರ್ ಮಾತನಾಡಿ
ಈ ಶಿಬಿರದಲ್ಲಿ ತಾಲೂಕಿನ ವಿವಿಧ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ತರಬೇತಿ ಪಡೆದದವರು ಇದರ ಅನುದಿನ ಪಾಲನೆ ಮಾಡಬೇಕು ಕಠಿಣ ಪರಿಶ್ರಮ, ಶ್ರದ್ದೆ ಮತ್ತು ಉತ್ಸಾಹ ನಿಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ ಎಂದರು ಶಿಬಿರದಲ್ಲಿ ರಿಯಾಜ್ ಕಟ್ಟೆ ಕ್ಕಾರ್ಸ್, ಅಬ್ದುಲ್ ರಝಕ್ ರಜ್ಜು,ಸಿರಾಜ್, ಇರ್ಫಾನ್ ಜನತಾ, ಝುಬೈರ್ ಶಿಲ್ಪ,ಸುಧಾಕರ್ ಮೊದಲಾದವರು ಸಂಘ ಟಿ ಸಿದ್ದರು ಶಿಬಿರಾರ್ಥಿಗಳಿಗೆ ತರಬೇತುದಾರ ಶ್ರೀ ಮನೋಜ್ ಕುಮಾರ್ ಅವರು ದಿನನಿತ್ಯ ತಾಂತ್ರಿಕ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದರು. ಶಿಬಿರದ ಹೈಲೈಟ್ಸ್ ಗ್ರೀನ್ ವ್ಯೂ ವಠಾರದಲ್ಲಿ ವಿಶೇಷ ರೀತಿಯಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಗುಣ ಮಟ್ಟದಲ್ಲಿ ಅಂಗಣ ನಿರ್ಮಿಸಲಾಗಿತ್ತು ದೈಹಿಕ ವ್ಯಾಯಾಮ,ವಿಶಿಷ್ಟ ತರಬೇತಿ ವಿಧಾನ ಹಾಗೂ ಕ್ರೀಡಾ ಶಿಸ್ತು ಬಗ್ಗೆ 10 ದಿನ ಎಡೆ ಬಿಡದೆ ನೀಡಿದ ಮಾರ್ಗದರ್ಶನ ಶಿಬಿರಾರ್ಥಿಗಳನ್ನು ಆಕರ್ಷಿಸಿತು.
ಪ್ರತೀ ದಿನ ದಾನಿಗಳ ಸಹಕಾರದಿಂದ ಶಿಬಿರಾರ್ಥಿ ಗಳ ಸಂಪೂರ್ಣ ವೆಚ್ಚ ಉಚಿತವಾಗಿತ್ತು, ತರಬೇತುದಾರ ಮನೋಜ್ ಕುಮಾರ್ ರವರನ್ನು ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಸನ್ಮಾನಿಸಿದರು. ಶಿಬಿರಾರ್ಥಿ ಗಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.


