ಸುಳ್ಯದ ಜನಮೆಚ್ಚಿದ ಶುದ್ಧ ಸಸ್ಯಹಾರಿ ವೆಜ್ಝ್ ರೆಸ್ಟೋರೆಂಟ್ ನಲ್ಲಿ ಓಣಂ ಸಧ್ಯವನ್ನು ಏರ್ಪಡಿಸಲಾಗಿದೆ. ಮೊದಲ ದಿನವಾದ ಸೆ.4ರಂದು ಓಣಂ ಸಧ್ಯ ರುಚಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇವಿಸುವ ಮೂಲಕ ಸಕಾರಾತ್ಮಕ ಬೆಂಬಲ ನೀಡಿದರು.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ವೆಜ್ಝ್ ರೆಸ್ಟೋರೆಂಟ್ ನಲ್ಲಿ ಓಣಂ ಹಬ್ಬ ಇನ್ನಷ್ಟು ರಂಗೇರಿದೆ. ರೈಸ್, ಪರಿಪ್ಪು, ಸಾಂಬಾರ್, ರಸಂ, ಅವಿಲ್, ಥೋರನ್, ಒಲನ್, ಪಚಾಡಿ, ಕಿಚಾಡಿ, ಕೊಟು ಕರಿ, ಎರಿಸೆರಿ, ಪುಲಿಸೆರಿ, ಮೊರು ಕರಿ, ಇಂಜಿ ಪುಲಿ, ಪಾಪಡಂ, ಪಿಕ್ಕಲ್ಸ್, ಬನಾನ ಚಿಪ್ಸ್, ಶರ್ಕರ ಉಪ್ಪೇರಿ, ಪಾಲ್ ಪಾಯಸಂ, ಗೀ, ಬನಾನ ಸೇರಿದಂತೆ ಒಟ್ಟು 21 ಬಗೆಯ ಓಣಂ ಸಧ್ಯ ದೊರೆಯುತ್ತದೆ, ನಿಮ್ಮ ಕುಟುಂಬ ಸದಸ್ಯರ ಜೊತೆಗೂಡಿ ಓಣಂ ಸಧ್ಯ ಸವಿಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಕೂಡ ಮಾಡಲಾಗಿದೆ. ಸೆ.5 ಮತ್ತು ಸೆ.6ರಂದು ಈ ವಿಶೇಷ ಖಾದ್ಯದ ವ್ಯವಸ್ಥೆ ಇದೆ. ಈ ಹಬ್ಬದ ಜೊತೆಗೆ ಅದೃಷ್ಟವಂತರಿಗೆ ಹಣ ಗೆಲ್ಲುವ ಅವಕಾಶವೂ ಇದೆ. ಹೆಚ್ಚಿನ ಮಾಹಿತಿಗೆ 6364284919 ಮೊಬೈಲ್ ಸಂಖ್ಯೆ ಸಂಪರ್ಕಿಸಿರಿ.