n62050389317200574766505285f38a00c2e24c4e55d72502ee292e0e6a4b1b35336f59df345b3574bdcac5n62050389317200574766505285f38a00c2e24c4e55d72502ee292e0e6a4b1b35336f59df345b3574bdcac5

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕರೂ ಆದ ನಟ ವಿಜಯ್ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ರದ್ದುಗೊಳಿಸುವ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ದಕ್ಷಿಣ ರಾಜ್ಯಕ್ಕೆ ವಿನಾಯಿತಿ ಕೋರಿ ತಮಿಳುನಾಡು ಅಸೆಂಬ್ಲಿ ಕೇಂದ್ರ ಅರ್ಹತಾ ಪರೀಕ್ಷೆಯ ವಿರುದ್ಧ ಅಂಗೀಕರಿಸಿದ ನಿರ್ಣಯಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು. ಇತ್ತೀಚೆಗೆ 10ನೇ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟಾಪರ್‌ಗಳಾಗಿ ಉತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ನೀಟ್ ವಿವಾದದ ಬಗ್ಗೆ ಮಾತನಾಡಿದ್ದಾರೆ. ನಾನು ಇಂದು ಯಾವುದರ ಬಗ್ಗೆಯೂ ಮಾತನಾಡಬಾರದು ಎಂದು ನಾನು ಭಾವಿಸಿದೆ. ಆದರೆ ನಾನು ನಿರ್ಣಾಯಕ ಸಮಸ್ಯೆಯಿಂದ ದೂರ ಸರಿಯಬಾರದು ಎಂದು ಭಾವಿಸಿ ಮಾತನಾಡುತ್ತಿದ್ದೇನೆ. ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಮೂರು ವಿಭಿನ್ನ ಸಮಸ್ಯೆಗಳನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.

ನೀಟ್​​ ಪರೀಕ್ಷೆ ರಾಜ್ಯದ ಹಕ್ಕುಗಳಿಗೆ ವಿರುದ್ಧವಾಗಿದೆ. ಶಿಕ್ಷಣವು 1975ರ ಮೊದಲು ರಾಜ್ಯದ ವಿಷಯವಾಗಿತ್ತು. ನಂತರ ಅದನ್ನು ಏಕಕಾಲಿಕ ಪಟ್ಟಿಗೆ ಸೇರಿಸಲಾಗಿದೆ. ಇದೇ ಮೊದಲ ಸಮಸ್ಯೆಯಂತೆ ಕಾಣುತ್ತದೆ. ಅಲ್ಲದೆ ರಾಜ್ಯ ಪಠ್ಯಕ್ರಮದ ಅಡಿಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಕ್ರಮದ ಆಧಾರದ ಮೇಲೆ ಪರೀಕ್ಷೆ ನಡೆಸಿದರೆ ಉತ್ತಮ ಸಾಧನೆ ಮಾಡಲು ಹೇಗೆ ಸಾಧ್ಯವಾಗುತ್ತದೆ. ಇದು ಬಡ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ವ್ಯಾಪ್ತಿಗೆ ಹಾನಿಕಾರಕವಾಗಿದೆ ಎಂದು ತಿಳಿಸಿದರು.

ಇನ್ನೊಂದು ನೀಟ್ ಅನುಷ್ಠಾನವು ಮೂಲಭೂತವಾಗಿ ರಾಜ್ಯದ ಸ್ವಾಯತ್ತತೆಯ ಹಕ್ಕುಗಳಿಗೆ ವಿರುದ್ಧವಾಗಿದೆ. ‘ಒಂದು ದೇಶ, ಒಂದು ಪಠ್ಯಕ್ರಮ, ಒಂದು ಆಯ್ಕೆ’ ಪರಿಕಲ್ಪನೆಯು ಶಿಕ್ಷಣದ ಮೂಲಭೂತ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿದರು. ಪ್ರತಿಯೊಂದು ರಾಜ್ಯಕ್ಕೂ ಶಿಕ್ಷಣವು ವಿಶಿಷ್ಟವಾಗಿರಬೇಕು. ಇದು ವೈವಿಧ್ಯಮಯವಾಗಿರಬೇಕು ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ನೋಡುವ ಸಾಮರ್ಥ್ಯವನ್ನು ಹೊಂದಿರಬೇಕು. ವೈವಿಧ್ಯತೆಯು ಒಂದು ಶಕ್ತಿಯೇ ಹೊರತು ದೌರ್ಬಲ್ಯವಲ್ಲ, ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪ್ರಸ್ತುತ ನೀಟ್​ ಪರೀಕ್ಷೆಯಲ್ಲಿನ ವ್ಯತ್ಯಾಸಗಳನ್ನು ನೋಡುತ್ತಿದ್ದೇವೆ. ಜನರು ನೀಟ್​ ಪರೀಕ್ಷೆ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈಗ ಬರುತ್ತಿರುವ ಸುದ್ದಿಯಿಂದ ಇನ್ನು ಮುಂದೆ ನೀಟ್​ ಅಗತ್ಯ ಇಲ್ಲ ಎಂದು ಅರ್ಥವಾಗುತ್ತಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ‘ಕಲಿಕೆ ವಿನೋದ, ಶಿಕ್ಷಣ ಒಂದು ಆಚರಣೆ’ ಎಂಬುದನ್ನು ಮರೆಯಬಾರದು ಎಂದು ಹೇಳಿದ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಯಾವುದೇ ಒತ್ತಡ ತೆಗೆದುಕೊಳ್ಳದೆ ಸಂತೋಷದಿಂದ ಅಧ್ಯಯನ ಮಾಡಿ. ಕೆಲವು ಅವಕಾಶ ಕಳೆದುಕೊಂಡರೆ ಅಸಮಾಧಾನಗೊಳ್ಳಬೇಡಿ ಇಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​​)

Leave a Reply

Your email address will not be published. Required fields are marked *