ಶಿಕ್ಷಣ ಸಂಪನ್ಮೂಲ ಕೇಂದ್ರ ವತಿಯಿಂದ ಎ ಪಿ ಪಿ ಜನಾರ್ಧನ್ ಹಾಗೂ ಡಾlಆರ್ ಬಿ ಬಶೀರ್ ರವರಿಗೆ ಸನ್ಮಾನ

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ,ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ದ ಕ ಜಿಲ್ಲಾ ಒಕ್ಕೂಟ (ರಿ.),ಮಕ್ಕಳ ಮಾಸೋತ್ಸವ ಸಮಿತಿ ದ.ಕ.ಜಿಲ್ಲೆ , ಶಾಂತಿನಗರ ಸ ಉ ಹಿ ಪ್ರಾ ಶಾಲೆ ಇದರ ನೇತೃತ್ವದಲ್ಲಿ ಡಿ 9 ರಂದು ಶಿಕ್ಷಣದ ಮಹತ್ವದ ಬಗ್ಗೆ ಕಾನೂನು ಅರಿವು ಹಾಗೂ
ಮಕ್ಕಳ ಮಾಸೋತ್ಸವ-2024 ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ
ಶಾಂತಿನಗರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಿರಿಯ ಸಿವಿಲ್ ನ್ಯಾಯಾಧೀಶರು ಬಿ ಮೋಹನ್ ಬಾಬು ರವರು ನೆರವೇರಿಸಿ ಮಾತನಾಡಿ ‘ಶಿಕ್ಷಣ ಮಕ್ಕಳ ಹಕ್ಕು.ಇದರ ಜೊತೆ ಮಕ್ಕಳ ಸರಿಯಾದ ಹಾರೈಕೆ,ರಕ್ಷಣೆ,ಮೂಲ ಭೂತ ಸೌಕರ್ಯ ಇವೆಲ್ಲವೂ ಅವರ ಹಕ್ಕಿನಲ್ಲಿ ಸೇರುತ್ತದೆ. ಇದನ್ನು ಒದಗಿಸುವುದು ಪೋಷಕರ ಮತ್ತು ಸಮಾಜದ ಕರ್ತವ್ಯ ವಾಗಿದೆ.
ಅದೇ ರೀತಿ ಮಕ್ಕಳು ಕೂಡ ತಮ್ಮ ಹಕ್ಕುಗಳನ್ನು ಬಳಸುವುದರೊಂದಿಗೆ ತಮ್ಮ ತಮ್ಮ ಕರ್ತವ್ಯವನ್ನು ಪಾಲಿಸಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕು ರೂಪಿಸ ಬೇಕು ಎಂದು ಹೇಳಿದರು.

ಶಾಂತಿನಗರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಹಮ್ಮದ್ ನಝಿರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾನೂನು ಅರಿವು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ ಶ್ರೀಮತಿ ಪ್ರತಿಭಾಜ್ಯೋತಿ ‘ಮಕ್ಕಳು ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಸಜ್ಜರಾಗಿರಬೇಕು. ಯಾವುದೇ ರೀತಿಯ ಸಮಸ್ಯೆಗಳು ಮಕ್ಕಳಿಗೆ ಬರಬಾರದು ಎಂದು ಕಾನೂನು ಕೆಲವು ಹಕ್ಕುಗಳನ್ನು ಮಕ್ಕಳಿಗೆ ಕೊಟ್ಟಿದೆ.ಇದರ ಸದುಪಯೋಗವನ್ನು ಪಡೆಯಲು ಮಕ್ಕಳು ಸಿದ್ದರಾಗಿಬೇಕು ಮತ್ತು ಅದರ ಬಗ್ಗೆ ಮಾಹಿತಿಯನ್ನು ನೀವು ಹೊಂದಿರ ಬೇಕು ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಯವರು ಮಾತನಾಡಿ ಮಕ್ಕಳ ಹಕ್ಕು ಮತ್ತು ಮಕ್ಕಳ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಮಾತನಾಡಿ ಮಕ್ಕಳ ಹಕ್ಕುಗಳ ಕುರಿತು ಹಾಗೂ ಅವರ ಜವಾಬ್ದಾರಿಗಳು ಮತ್ತು ಪೋಷಕರ ಜಾಗೃತಿ ಕುರಿತು ಅರಿವು ಮೂಡಿಸಿದರು.

ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಶಂಕರ್ ಪೆರಾಜೆ ಪ್ರಾಸ್ತವಿಕ ಮಾತನಾಡಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಬಳಿಕ ನಡೆದ ಮಕ್ಕಳ ಮಾಸೋತ್ಸವ 2024 ಕಾರ್ಯಕ್ರಮದಲ್ಲಿ ಹಲವಾರು ಪ್ರಕರಣಗಳಿಗೆ ಸಂಭಂದಿಸಿ ಸರಕಾರದ ವತಿಯಿಂದ ವಾದಿಸಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ಸು ಕಂಡಿರುವ ಮಂಗಳೂರು 6 ನೇ ಹೆಚ್ಚುವರಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರಾದ ಬಿ ಜನಾರ್ಧನ್ ಹಾಗೂ ಪೈಚಾರ್ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಮತ್ತು ಪೈಚಾರು ಮುಳುಗು ತಜ್ಞರ ತಂಡದ ಸದಸ್ಯ ಸಮಾಜ ಸೇವಾ ಮೂಲಕ ಗುರುತಿಸಿ ಹತ್ತು ಹಲವು ಪ್ರಶಸ್ತಿ ಪಡೆದ ಡಾ lಆರ್ ಬಿ ಬಶೀರ್ ರವರನ್ನು ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಜಿಲ್ಲಾ ಒಕ್ಕೂಟದ ಸದಸ್ಯರಾದ ಶ್ರೀಮತಿ ರೋಹಿಣಿ ಪುತ್ತೂರು ರವರು ಮಕ್ಕಳ ಹಕ್ಕು ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು.

ವೇದಿಕೆಯಲ್ಲಿ ಸುಳ್ಯ ನ್ಯಾಯಾಲಯದ ಎ ಪಿ ಪಿ ರಮೇಶ ಆರ್,ದ ಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್,ಬೊಳುಬೈಲು ಪೀಸ್ ಸ್ಕೂಲ್ ಅಧ್ಯಕ್ಷ ಹಾಜಿ ಅಬೂಬಕ್ಕರ್, ಮುಖ್ಯ ಶಿಕ್ಷಕ ಮಹಮ್ಮದ್ ಸೈಫುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಅತಿಥಿಗಳನ್ನು ಶಾಲಾ ದೈಹಿಕ ಶಿಕ್ಷಕ ರಘುನಾಥ್ ರೈ ನೇತೃತ್ವದ ವಿದ್ಯಾರ್ಥಿಗಳು ಆಕರ್ಷಕ ಬ್ಯಾಂಡ್ ಬಾಜಾ ದೊಂದಿಗೆ ಮೆರವಣಿಗೆ ಮೂಲಕ ಸ್ವಾಗತ ನೀಡಿ ವಿಶೇಷ ಕಳೆ ನೀಡಿದರು.
ಕಾರ್ಯಕ್ರಮದಲ್ಲಿ ಪೀಸ್ ಸ್ಕೂಲ್ ನ 7 ಮತ್ತು 8 ನೇ ತರಗತಿಯ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರು, ಸದಸ್ಯರುಗಳು, ಪೋಷಕರು,ಶಿಕ್ಷಕರುಗಳು ಹಾಗೂ ಬಿಸಿಯೂಟ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದರು.

ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿಯ ಸಹ ಸಂಚಾಲಕ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಹಸೈನಾರ್ ಜಯನಗರ ಸ್ವಾಗತಿಸಿ ಸದಸ್ಯರು ಹಾಗೂ ತರಬೇತುದಾರ ನಾರಾಯಣ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪವಿತ್ರಾ ವಂದಿಸಿದರು.

Leave a Reply

Your email address will not be published. Required fields are marked *