ಕರ್ನಾಟಕ ಸರಕಾರದ ಇಂಧನ ಇಲಾಖೆಯ ಅಡಿಯಲ್ಲಿ ಬರುವ ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿ ನಿಯಮಿತ ಇದರ ಅಡಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಮೆಸ್ಕಾಂ ಶಾಖೆಗೆ ಸಲಹಾ ಸಮಿತಿಯ ಸದಸ್ಯರುಗಳನ್ನಾಗಿ ಸರಕಾರ ನೇಮಿಸಿ ಆದೇಶಿಸಿದೆ.
ಗುತ್ತಿಗಾರು ಶಾಖೆ
ಗುತ್ತಿಗಾರು ಮೆಸ್ಕಾಂ ಶಾಖೆಯ ಅಧ್ಯಕ್ಷರಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ಉಪ ವಿಭಾಗ ಸುಬ್ರಮಣ್ಯ ಸದಸ್ಯರುಗಳಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿದ್ಯುತ್ ಪ್ರಸರಣ ನಿಗಮ ಸಂಚಾಲಕರು ಸಹಾಯಕ ಇಂಜಿನಿಯರ್ ಉಪವಿಭಾಗ ಸುಬ್ರಮಣ್ಯ ರೈತ ಪ್ರತಿನಿಧಿಯಾಗಿ ಪುರುಷೋತ್ತಮ ಮುಂಡೋಡಿ ಪರಿಶಿಷ್ಟ ವರ್ಗದ ಪ್ರತಿನಿಧಿಯಾಗಿ ಗಣೇಶ್ ನಾಯ್ಕ ಚಾರ್ಮತ ಮನೆ ನಾಲ್ಕುರು. ಮಹಿಳಾ ಪ್ರತಿನಿಧಿಯಾಗಿ ಶ್ರೀಮತಿ ಹೇಮಾ ನವೀನ್ ದೇರಪಜ್ಜನ ಮನೆ. ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ದಿನೇಶ್ ಸರಸ್ವತಿ ಮಾಲ್ ಗುತ್ತಿಗಾರ್ ಗ್ರಾಹಕರ ಪ್ರತಿನಿಧಿಯಾಗಿ ದಿನೇಶ್ ಹಾಲೆಮಜಲು ಇವರಗಳನ್ನು ಆಯ್ಕೆ ಮಾಡಿ ಸರ್ಕಾರ ಆದೇಶಿಸಿದೆ.
ಪಂಜ
ಮೆಸ್ಕಾಂ ಶಾಖೆಯ ಅಧ್ಯಕ್ಷರಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ಉಪ ವಿಭಾಗ ಸುಬ್ರಹ್ಮಣ್ಯ ಸದಸ್ಯರುಗಳಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿದ್ಯುತ್ ಪ್ರಸರಣ ನಿಗಮ, ಸಂಚಾಲಕರು ಸಹಾಯಕ ಇಂಜಿನಿಯರ್ ಉಪವಿಭಾಗ ಸುಬ್ರಮಣ್ಯ, ರೈತ ಪ್ರತಿನಿಧಿಯಾಗಿ ರಾಮಚಂದ್ರ ಗೌಡ ಕನ್ಯಾನ ಆರ್ನೋಜಿ ಕೂತ್ಕುಂಜ, ಪ.ಜಾ, ಪ.ಪಂಗಡ ಕೃಷ್ಣಪ್ಪ ನಾಯ್ಕ ಜೋಗಿಬೆಟ್ಟು ಕಲ್ಮಡ್ಕ, ಮಹಿಳಾ ಪ್ರತಿನಿದಿ ಶ್ರೀಮತಿ ಸೆಲಿನಾ ಡಿಸೋಜಾ ಪುಂಡಿಕಾಯರ ಪಂಜ, ಹಿಂದುಳಿದ ವರ್ಗಗಳ ಪ್ರತಿನಿಧಿ ವೆಂಕಪ್ಪ ಪೂಜಾರಿ ಬೆಳಕ್ಕಜೆ ಪಂಬೆತ್ತಾಡಿ, ಗ್ರಾಹಕ ಪ್ರತಿನಿಧಿ ಜಮಾಲುದ್ದೀನ್ ಕೆಮ್ಮಾರು ಐವತ್ತೊಕ್ಲು ನೇಮಕಗೊಂಡರು.
ಸುಳ್ಯ ಶಾಖೆ
ಸುಳ್ಯ ಮೆಸ್ಕಾಂ ಶಾಖೆಗೆ ಅಧ್ಯಕ್ಷರಾಗಿ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇರುತ್ತಾರೆ. ಸದಸ್ಯರುಗಳಾಗಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ಪ್ರಸರಣ ವಿಭಾಗ), ಸಂಚಾಲಕ ರಾಗಿ ಸಹಾಯಕ ಇಂಜಿನಿಯರ್ ಉಪ ವಿಭಾಗ ಸುಳ್ಯ, ರೈತ ಪ್ರತಿನಿಧಿ ಸತ್ಯಕುಮಾರ್ ಆಡಿಂಜ, ಪ.ಜಾತಿ, ಪ.ಪಂಗಡ ಪ್ರತಿನಿಧಿಯಾಗಿ ನಂದರಾಜ್ ಸಂಕೇಶ, ಮಹಿಳಾ ಪ್ರತಿನಿಧಿ ಶ್ರೀಮತಿ ರಾಬಿಯಾ ಬೂಡು, ಹಿಂದುಳಿದ ವರ್ಗಗಳ ಪ್ರತಿನಿಧಿ ಯೂಸುಫ್ ಅಂಜಿಕಾರ್, ಗ್ರಾಹಕ ಪ್ರತಿನಿಧಿಯಾಗಿ ಲತೀಶ್ ಕುಮಾರ್ (ಪಲ್ಲವಿ) ನೇಮಕಗೊಂಡಿದ್ದಾರೆ.
ಜಾಲ್ಸೂರು
ಸುಳ್ಯ ಮೆಸ್ಕಾಂ ನ ಜಾಲ್ಲೂರು ಶಾಖೆಗೆ ಅಧ್ಯಕ್ಷರಾಗಿ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇರುತ್ತಾರೆ. ಸದಸ್ಯರುಗಳಾಗಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ಪ್ರಸರಣ ವಿಭಾಗ), ಸಂಚಾಲಕ ರಾಗಿ ಸಹಾಯಕ ಇಂಜಿನಿಯರ್ ಉಪ ವಿಭಾಗ ಸುಳ್ಯ, ರೈತ ಪ್ರತಿನಿಧಿ ಮಧುಕರ ಬುಡ್ಡೆಗುತ್ತು, ಪ.ಜಾತಿ, ಪಂಗಡ ಪ್ರತಿನಿಧಿ ಶಿವರಾಮ ಎ ಅಗೋಳಮನೆ ಕನಕಮಜಲು, ಮಹಿಳಾ ಪ್ರತಿನಿಧಿ ಶ್ರೀಮತಿ ಸುಮತಿ ಹುಲಿಮನೆ, ಹಿಂದುಳಿದ ವರ್ಗಗಳ ಪ್ರತಿನಿಧಿ ಜುನೈದ್ ಅಡ್ಯಾರ್, ಗ್ರಾಹಕ ಪ್ರತಿನಿಧಿ ಎನ್.ಎಂ. ಮಹಮ್ಮದ್ ಬಶೀರ್ ಶಾಂತಿನಗರ ಇವರನ್ನು ನೇಮಕ ಮಾಡಲಾಗಿದೆ.