ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ ಕೆಲ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿತ್ತು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ತರುವ ನಿಟ್ಟಿನಲ್ಲಿ ಇದೀಗ ಕರ್ನಾಟಕ ಸರ್ಕಾರ ಹೊಸ ಘೋಷಣೆಯನ್ನು ಮಾಡಿತ್ತು.
ಆದರೆ ಸರ್ಕಾರದ ಈ ಕ್ರಮಕ್ಕೆ ಪೋನ್‌ಪೇ ಸಂಸ್ಥೆಯ ಸಿಇಒ ಸಮೀರ್ ನಿಗಮ್ (CEO Sameer Nigam) ಟೀಕೆ ಮಾಡಿದ್ದರು. ಇದನ್ನು ನೋಡಿ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಫೋನ್‌ಪೇ ಅಪ್ಲಿಕೇಷನ್ (Phonepe application) ಮೊಬೈಲ್‌ನಿಂದ ಅನ್ಇನ್ಸ್ಟಾಲ್ ಮಾಡುವಂತೆ ಕರೆ ನೀಡುತ್ತಿದ್ದಾರೆ.
ಪೋನ್ ಪೇ ವಿರುದ್ಧ ತಿರುಗಿ ಬಿದ್ದ ಕನ್ನಡಿಗರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲೇ, ಇದರ ವಿರುದ್ಧವಾಗಿ ಫೋನ್ಪೇ ಸಿಇಓ ಟ್ವೀಟ್ ಮಾಡಿ ಟೀಕೆ ಮಾಡಿದ್ದಾರೆ. ಇದನ್ನು ಕಂಡು ಪೋನ್ ಪೇ ಸಿಇಓ ಹೇಳಿಕೆ ವಿರುದ್ಧ ಕನ್ನಡಪರ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ.
ಪೋನ್ ಪೇ Uninstall ಗೇ ಮುಂದಾದ ಕನ್ನಡಿಗರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ Phonepe ವಿರುದ್ಧ ಇದೀಗ Boycottphonepay ಅಭಿಯಾನ ಶುರುವಾಗಿದೆ. ಜೊತೆಗೆ ಫೋನ್ಪೇ ಸಿಇಓ ಸಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ #Boycott ಅಭಿಯಾನ ಆರಂಭಿಸಿದ್ದಾರೆ.
ಫೋನ್ಪೇ ಬಾಯ್ಕಾಟ್ ಅಭಿಯಾನ
ಕನ್ನಡಿಗರಿಗೆ ಮೀಸಲಾತಿ ಕಾಯ್ದೆಗೆ ಫೋನ್ ಪೇ ಸಿಇಓ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ, ಕನ್ನಡಿಗರು ಈ ಅಪ್ಲಿಕೇಷನ್ ಬಳಸಬೇಡಿ ಎಂದು ಕರೆ ಕೇಳಿ ಬರ್ತಿದೆ. ಫೋನ್ ಪೇ ವಿರುದ್ಧ ಹೊರಾಟಕ್ಕೆ ಕನ್ನಡಿಗರು ಹಾಗೂ ಹೋರಾಟಗಾರರು ಮುಂದಾಗಿದ್ದಾರೆ.
ಪೋನ್ ಪೇ ವಿರುದ್ಧ ತಿರುಗಿ ಬಿದ್ದ ಕರವೇ
ಇನ್ನು ರಾಜ್ಯದೆಲ್ಲಡೆ ಫೋನ್ ಪೇ ವಿರುದ್ಧ ಆಕ್ರೊಶ ವ್ಯಕ್ತವಾಗುತ್ತಿದ್ದಂತೆ, ಮೊಬೈಲ್ ನಿಂದ ಪೋನ್ ಪೇ Uninstall ಮಾಡುವಂತೆ ಕರವೇ ಸಂಘಟನೆ ಕರೆ ನೀಡಿದೆ. ಇನ್ನು ಪೋನ್ ಪೇ ತಗೆದು ಹಾಕುವಂತೆ ಕರವೇ ಅಭಿಯಾನವನ್ನು ಸಹ ಆರಂಭಿಸಿದೆ.
ಫೋನ್ ಪೇ ಅಭಿಯಾನದ ಬಗ್ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಮಾತನಾಡಿದ್ದು, ಎಲ್ಲ ಕನ್ನಡಿಗರು ಸ್ವಾಭಿಮಾನಿಗಳು. ನಾವು ಯಾರ ಮುಂದೆಯೂ ತಲೆ ತಗ್ಗಿಸಿ ನಿಲ್ಲುವುದಿಲ್ಲ. ಸಮೀರ್ ನಿಗಮ್ ನಮ್ಮ ರಾಜ್ಯದಲ್ಲಿ ವ್ಯಾಪಾರ ಮಾಡಲಿ ನಾವು ನೋಡ್ತೀವಿ, ನಿನಗೆ ನಾವು ಪಾಠ ಕಲಿಸ್ತೀವಿ ಬಿಡೋದಿಲ್ಲ. ನಿನ್ನ ಮಕ್ಕಳಿಗೆ ಕನ್ನಡ ಕಲಿಸು ನಾವು ಉದ್ಯೋಗ ಕೊಡ್ತೀವಿ. ನಮ್ಮ ಮಕ್ಕಳಿಗೆ ಉದ್ಯೋಗ ಕೊಡಿ ಅಂತಾ ಕೇಳುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ.
ಸಮೀರ್ ನಿಗಮ್ ಟ್ವೀಟ್
ಸಮೀರ್ ನಿಗಮ್ ಅವರು ಇದುವರೆಗೆ ಕರ್ನಾಟಕದ ನಿರ್ಧಾರದ ವಿರುದ್ಧವಾಗಿ ಎರಡು ಟ್ವೀಟ್ಗಳನ್ನು ಮಾಡಿದ್ದು, ಒಂದು ಟ್ವೀಟ್ನಲ್ಲಿ, ನನಗೆ 46 ವರ್ಷ. 15ಕ್ಕಿಂತ ಹೆಚ್ಚು ವರ್ಷಗಳ ಕಾಲ ರಾಜ್ಯದಲ್ಲಿ ಎಂದಿಗೂ ವಾಸ ಮಾಡಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ದೇಶದಾದ್ಯಂತ ಅವರು ಪೋಸ್ಟಿಂಗ್ ಪಡೆದಿದ್ದರು. ಹಾಗಿದ್ರೆ ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ನಿರ್ಮಿಸಿ, ಭಾರತದಾದ್ಯಂತ 25000+ ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ! ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಶೇಮ್ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ “ಕರ್ನಾಟಕ ಎಂದರೆ ಕನ್ನಡ ಮಾತನಾಡುವ ಜನರು ಮಾತ್ರ ಮೀಸಲಾತಿ ಪಡೆಯುವುದೇ? ನಾನು ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ಯಾವುದೇ ಭಾಷೆಯನ್ನು ನಾನು ಕಲಿಯಬಲ್ಲೆ. ಭಾರತದ ಸಂವಿಧಾನ ನನಗೆ ಈ ಹಕ್ಕುಗಳನ್ನು ನೀಡಿದೆ. ಇದು ನನ್ನ ಆಯ್ಕೆ.” ಎಂದು ಟ್ವೀಟ್ ಮಾಡಿದ್ದಾರೆ.