ಸುಳ್ಯ: ಸೋಷಿಯಲ್ ಮೀಡಿಯಾ ಅಂದ್ರೆ ಹಾಗೇ, ಯಾವಾಗ ಏನು ವೈರಲ್ ಆಗುತ್ತೆ ಅನ್ನುವುದೇ ತಿಳಿಯುವುದಿಲ್ಲ. ಹೀಗೆ ಸುಳ್ಯದ ಯುವಕನ ಕೇವಲ ಐದು ಸೆಕೆಂಡ್ ಇರುವ ರೀಲ್ಸ್ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ ಕೋಟಿಗಟ್ಟಲೆ ವೀಕ್ಷಣೆ ಹಾಗೂ ಲಕ್ಷಗಟ್ಟಲೆ ಮೆಚ್ಚುಗೆ ಪಡೆದುಕೊಂಡಿದೆ.
ಸುಳ್ಯ ಮೂಲದ ಯುವಕನೊಬ್ಬ ಬಸ್ ನಲ್ಲಿ ಸೀಟ್ ಸಿಗದೆ ನಿಂತುಕೊಂಡು ಪ್ರಯಾಣ ಬಳಸುವ ವಿಡಿಯೋ ತುಣುಕನ್ನು ಅದರ ಜೊತೆಗೆ, ಇವನ ತಂದೆ 7 ಸಾವಿರ ಕೋಟಿ ಆಸ್ತಿಯ ಒಡೆಯ ಆದರೂ ಪ್ರಯಾಣಿಸುತ್ತಿರುವುದು ಮಾತ್ರ ಸರಕಾರಿ (KSRTC) ಬಸ್ ನಲ್ಲಿ ಎಂಬ ಶೀರ್ಷಿಕೆ ಹಾಕಿದ್ದಾರೆ. ಇದ್ದಕಿದ್ದಂತೆ ಈ ವಿಡಿಯೋ ವೈರಲ್ ಆಗಿದೆ. ಬರೋಬ್ಬರಿ 2ಕೋಟಿ 60ಲಕ್ಷ ವೀಕ್ಷಣೆ ಹಾಗೂ 7ಲಕ್ಷಕ್ಕಿಂತ ಹೆಚ್ಚಿನ ಮೆಚ್ಚುಗೆ ಪಡೆದುಕೊಂಡಿದೆ. ಅದರಲ್ಲಿ ಅನೇಕರು, ಈ ಯುವಕ ಯಾರು.? ಏನು ಎಂದು ಕಮೆಂಟ್ ಮೂಲಕ ಅಚ್ಚರಿಯಿಂದ ಕೇಳುತ್ತಿದ್ದಾರೆ. ಸುಳ್ಯ ಪರಿಸರದಲ್ಲಿ ರೀಲ್ಸ್’ನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದದ್ದು ಕೂಡಾ ಇದೇ ಎಂಬ ಅಭಿಪ್ರಾಯ ಕೂಡಾ ಕೇಳಿ ಬರುತ್ತಿದೆ. ಏನೇ ಆಗಲಿ ಸಾಮಾಜಿಕ ಜಾಲತಾಣ ಕ್ಷಣಮಾತ್ರದಲ್ಲಿ ಜನರನ್ನೇ ಸೆಲೆಬ್ರಿಟಿಗಳಂತೆ ಮಾಡುತ್ತಿರುವುದು ಮಾತ್ರ ಸತ್ಯ.
