ಸುಳ್ಯ (ಆ. 15): ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಸಮಿತಿ ಇದರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಸುಳ್ಯದ ಪಕ್ಷದ ಕಛೇರಿಯ ಮುಂಭಾಗದಲ್ಲಿ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಿದ್ದೀಕ್ ಕೊಡಿಯಮ್ಮೆ ಧ್ವಜಾರೋಹಣಗೈದರು.

ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ರಶೀದ್ ಗೂನಡ್ಕ ಸಂದೇಶ ಭಾಷಣಗೈದರು. ಸುಳ್ಯ ಬ್ಲಾಕ್ ಸಮಿತಿ ಕಾರ್ಯದರ್ಶಿ ಸುಹೈಲ್ ಸುಳ್ಯ ಸ್ವಾಗತಿಸಿ ನಿರೂಪಿಸಿದರು ಹಾಗೂ ಮುನೀರ್ ಶೈನ್ ಧನ್ಯವಾದ ಸಮರ್ಪಿಸಿದರು.
ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ಗೂನಡ್ಕ , ವರ್ತಕರ ಸಂಘದ ಕಾರ್ಯದರ್ಶಿ ಖಾದರ್ ಸಂಗಮ್, ಬ್ಲಾಕ್ ಸಮಿತಿ ಸದಸ್ಯರು, ಬ್ರಾಂಚ್ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು
ನಾಗರಿಕರು ಉಪಸ್ಥಿತರಿದ್ದರು