ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಇಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಇವರಿಂದ ಧ್ವಜಾರೋಹಣವನ್ನು ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ನೂರಾರು ಮಹಾನ್ ವ್ಯಕ್ತಿಗಳು ಬ್ರಿಟೀಷರ ವಿರುದ್ದ ಹೋರಾಡಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ಆ ತ್ಯಾಗ-ಬಲಿದಾನದ ಸ್ವಾತಂತ್ರ್ಯವನ್ನು ನಾವೆಲ್ಲರೂ ಇಂದು ಉಳಿಸಿ-ಬೆಳೆಸಿಕೊಂಡು ಒಗ್ಗಟ್ಟಿನಿಂದ ಈ ದೇಶದ ಶ್ರೇಷ್ಠ ಪ್ರಜೆಗಳಾಗಿ ಶಾಂತಿಯುತವಾಗಿ ಬದುಕಬೇಕು ಎಂದು ಹೇಳಿದರು. ನಂತರ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ದೇಶ ಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್, ಶಿಕ್ಷಕ -ರಕ್ಷಕ ಸಂಘದ ಸದಸ್ಯರಾದ ಖಾದರ್ ಮೊಟ್ವೆಂಗಾರ್, ಮುಖ್ಯ ಶಿಕ್ಷಕರಾದ ಸಂಪತ್ ಜೆ ಡಿ, ಶಿಕ್ಷಕ ವೃಂದದವರಾದ ಸಾಧಿಕ ಎ ಕೆ ಆಯಿಷತ್ ಸಬೀರಾ, ಆಯಿಷತ್ ನುಸೈಭಾ, ಆಯಿಷತ್ ಸುನೈನಾ, ಸೋನಿಯಾ, ಆಯಿಷತ್ ನೌಫಿಯಾ, ಕೈರುನ್ನೀಸ, ಅರ್ಪಾನ, ಆಯಿಷತ್ ಬುಶ್ರಾ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು

Leave a Reply

Your email address will not be published. Required fields are marked *