ಸುಳ್ಯ ಯೋಜನಾ ಪ್ರಾಧಿಕಾರದಲ್ಲಿ ಸದಸ್ಯ ಕಾರ್ಯದರ್ಶಿ, ನಗರ ಮತ್ತು ಗ್ರಾಮಾoತರ ಯೋಜನಾ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರು ಸ್ವಾತಿ ಎನ್ ಸ್ವಾಮಿ ಮತ್ತು ಟೌನ್ ಪ್ಲಾನರ್ ಫೈರೋಜ್ ರವರ ಉಪಸ್ಥಿತಿಯಲ್ಲಿ, ಪ್ರಾಧಿಕಾರ ದ ಅಧ್ಯಕ್ಷ ಕೆ. ಎಂ. ಮುಸ್ತಫ ಮಾರ್ಗ ದರ್ಶನ ದಲ್ಲಿ 9& 11,ಏಕ ನಿವೇಶನ ವಿನ್ಯಾಸ ಅನುಮೋದನೆ, ಪರವಾನಿಗೆ ಮೊದಲಾದ ಪ್ರಸ್ತಾವನೆ ಗಳನ್ನು ಅರ್ಜಿದಾರರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಅನುಮೋದನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ ಯೋಜನಾ ಪ್ರಾಧಿಕಾರ ದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಅದಾಲತ್ ಮಾದರಿಯಲ್ಲಿ ಶೀಘ್ರ ಇತ್ಯರ್ಥ ಕ್ಕೆ ಕ್ರಮ ಕೈಗೊಳ್ಳಲಾಗುವುದು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು
ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಲವು ಕಡತಗಳಿಗೆ ಸ್ಥಳದಲ್ಲೇ ಮಂಜೂರಾತಿ ನೀಡಿದರು.

Leave a Reply

Your email address will not be published. Required fields are marked *