
ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಶಾಂತಿನಗರ, ಸುಳ್ಯ (ದ.ಕ) ಇದರ ವತಿಯಿಂದ ಸೆಯ್ಯಿದ್ ಮಶ್ಹೂದ್ ಕೂರತ್ ತಂಗಳ್ ರವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಇಂದು (ಜೂನ್ 14, 2026)ರ ಆದಿತ್ಯವಾರದಂದು ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಗ್ರಿಬ್ ನಮಾಜ್ ಬಳಿಕ ಆರಂಭಗೊಳ್ಳಲಿರುವ ಈ ಪವಿತ್ರ ಮಜ್ಲಿಸ್‌ನಲ್ಲಿ ಬಹು| ಯು.ಎಸ್. ಕುಙಿಕ್ಕೋಯ ತಂಙಳ್ ಸಅದಿ ಸುಳ್ಯ ರವರು ಮುಖ್ಯ ಪ್ರಭಾಷಣ ನಡೆಸಿ, ದುವಾ ನೇತೃತ್ವವನ್ನು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಹು| ಉಸ್ತಾದ್ ಅಹ್ಮದ್ ಶಮೀರ್ ನಈಮಿ ಪೈಚಾರ್ ರವರು ಸ್ವಲಾತ್ ನೇತೃತ್ವವನ್ನು ವಹಿಸಿಕೊಡಲಿದ್ದು, ಬಹು| ಉಸ್ತಾದ್ ಅಬ್ದುರ್ರಶೀದ್ ಝೖನಿ ಪೆರಾಜೆ ರವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಈ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಸರ್ವರಿಗೂ ಸಂಘಟಕರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಮಹಿಳೆಯರಿಗೆ ಕಾರ್ಯಕ್ರಮ ವೀಕ್ಷಿಸಲು ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.







